ಮೋದಿ ‘ಬುಲ್ಡೋಜರ್’ ಹೇಳಿಕೆ ವಿರುದ್ಧ ಆಯೋಗಕ್ಕೆ ಕಾಂಗ್ರೆಸ್ ದೂರು

KannadaprabhaNewsNetwork |  
Published : May 19, 2024, 01:45 AM ISTUpdated : May 19, 2024, 07:00 AM IST
Narendra Modi Speech in Haryana

ಸಾರಾಂಶ

‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬುಲ್ಡೋಜರ್‌ನಿಂದ ರಾಮಮಂದಿರವನ್ನು ನೆಲಸಮಗೊಳಿಸಲಾಗುತ್ತದೆ’ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್‌ ದೂರು ನೀಡಿದೆ.

ನವದೆಹಲಿ: ‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬುಲ್ಡೋಜರ್‌ನಿಂದ ರಾಮಮಂದಿರವನ್ನು ನೆಲಸಮಗೊಳಿಸಲಾಗುತ್ತದೆ’ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್‌ ದೂರು ನೀಡಿದೆ. 

ಟ್ರಸ್ಟ್‌ ವತಿಯಿಂದ ನಿರ್ಮಾಣ ವಾಗಿರುವ ದೇವಾಲಯದ ವಿಚಾರದಲ್ಲಿ ಬಿಜೆಪಿ ಮತ್ತು ಮೋದಿ ಈ ರೀತಿ ಹೇಳಿಕೆಯನ್ನು ನೀಡುವುದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. 

ಈ ರೀತಿ ಹೇಳಿಕೆಗಳನ್ನು ನೀಡುವದರಿಂದ ಜನರು ಆಕ್ರೋಶಗೊಳ್ಳುತ್ತಾರೆ. ಪ್ರಚೋದನೆಗೊಳ್ಳುತ್ತಾರೆ. ಸಣ್ಣ ನಾಯಕರು ಈ ರೀತಿ ಹೇಳಿದ್ದರೆ ಗಮನ ಸೆಳೆಯುತ್ತಿರಲಿಲ್ಲ. ಪ್ರಧಾನಿಯ ಹುದ್ದೆಯಲ್ಲಿ ಕುಳಿತು ಮೋದಿಯವರೇ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಕಾಂಗ್ರೆಸ್‌ ಒತ್ತಾಯಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬೆಂಗಳೂರು ಯುವತಿ ಜತೆ ಮದುವೆಯಾದ ಮಹಾಕುಂಭ ಖ್ಯಾತಿಯ ‘ಐಐಟಿ ಬಾಬಾ’
ಕೋಮಾದಲ್ಲಿ ಮೊಜ್ತಬಾ, ಕೋಂ ನಗರದಲ್ಲಿ ಚಿಕಿತ್ಸೆ