ಮೈತ್ರಿಯೋ ? ಏಕಾಂಗಿಯೋ ? ಸ್ಪಷ್ಟಪಡಿಸಿ : ಪಕ್ಷಕ್ಕೆ ಕಾಂಗ್ರೆಸ್‌ ನಾಯಕ ತಾರಿಖ್‌ ತರಾಟೆ

KannadaprabhaNewsNetwork |  
Published : Feb 11, 2025, 12:49 AM ISTUpdated : Feb 11, 2025, 04:36 AM IST
Congress flag

ಸಾರಾಂಶ

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸತತ ಮೂರನೇ ಬಾರಿಯೂ ಶೂನ್ಯ ಸಂಪಾದಿಸಿ ಹೀನಾಯ ಸೋಲುಕಂಡ ಕಾಂಗ್ರೆಸ್‌ನ ಚುನಾವಣಾ ರಣತಂತ್ರದ ಬಗ್ಗೆ ಇದೀಗ ಕಾಂಗ್ರೆಸ್‌ನೊಳಗೇ ಅಪಸ್ವರ ಕೇಳಿಬಂದಿದೆ.

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸತತ ಮೂರನೇ ಬಾರಿಯೂ ಶೂನ್ಯ ಸಂಪಾದಿಸಿ ಹೀನಾಯ ಸೋಲುಕಂಡ ಕಾಂಗ್ರೆಸ್‌ನ ಚುನಾವಣಾ ರಣತಂತ್ರದ ಬಗ್ಗೆ ಇದೀಗ ಕಾಂಗ್ರೆಸ್‌ನೊಳಗೇ ಅಪಸ್ವರ ಕೇಳಿಬಂದಿದೆ.

‘ಪಕ್ಷ ತನ್ನ ರಾಜಕೀಯ ತಂತ್ರವನ್ನು ಸ್ಪಷ್ಟಪಡಿಸುವ ಅವಶ್ಯಕತೆಯಿದೆ. ಚುನಾವಣೆಗಳಲ್ಲಿ ಅನ್ಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಬೇಕೇ ಅಥವಾ ಒಬ್ಬಂಟಿಯಾಗಿ ಸ್ಪರ್ಧಿಸಬೇಕೇ ಎಂಬ ಬಗ್ಗೆ ನಿರ್ಧರಿಸಬೇಕಿದೆ. ಜೊತೆಗೆ ಪಕ್ಷದ ಸಂಘಟನೆಯಲ್ಲಿ ಮೂಲಭೂತ ಬದಲಾವಣೆ ಆಗಬೇಕಿದೆ ಎಂದು ಪಕ್ಷದ ಹಿರಿಯ ನಾಯಕ, ಸಂಸದ ತಾರೀಖ್‌ ಅನ್ವರ್‌ ಆಗ್ರಹಿಸಿದ್ದಾರೆ.

ಲೋಕಸಭೆಯಲ್ಲಿ ಬಿಜೆಪಿಯ ವಿರುದ್ಧ ಕಟ್ಟಿಕೊಂಡ ಇಂಡಿಯಾ ಕೂಟವನ್ನು ದೆಹಲಿ ಚುನಾವಣೆಯಲ್ಲೂ ಉಳಿಸಿಕೊಂಡು ಆಪ್‌ನೊಂದಿಗೆ ಸ್ಪರ್ಧಿಸಿದ್ದರೆ ಅಲ್ಲೂ ಬಿಜೆಪಿಯನ್ನು ಮಣಿಸಬಹುದಿತ್ತು ಎಂಬ ವಿಶ್ಲೇಷಣೆಗಳ ನಡುವೆಯೇ ಅನ್ವರ್‌ ಹೀಗೆ ಹೇಳಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ಮರುಭೂಮಿ ಸೌದಿಯಲ್ಲಿ ಹಿಮಪಾತ, ಮಳೆ!