ಚೀನಾ ಗಡಿ ಭಾಗದಲ್ಲಿ ಭಾರತದಿಂದ ಬಂಕರ್‌

KannadaprabhaNewsNetwork |  
Published : Mar 19, 2024, 12:49 AM ISTUpdated : Mar 19, 2024, 01:26 PM IST
ಭಾರತೀಯ ಬಂಕರ್‌ | Kannada Prabha

ಸಾರಾಂಶ

ಗಡಿಯಲ್ಲಿ ಪದೇ ಪದೇ ಕಾಲು ಕೆರೆದು ಜಗಳಕ್ಕೆ ನಿಲ್ಲುವ ಚೀನಾದ ಗಡಿಯಲ್ಲಿ ಭಾರತ ಇದೀಗ ಡಜನ್‌ಗಟ್ಟಲೆ ಬಂಕರ್‌ಗಳನ್ನು ನಿರ್ಮಾಣ ಮಾಡುತ್ತಿದೆ.

ಸೇಲಾ ಪಾಸ್‌ (ಅರುಣಾಚಲಪ್ರದೇಶ): ಗಡಿಯಲ್ಲಿ ಪದೇ ಪದೇ ಕಾಲು ಕೆರೆದು ಜಗಳಕ್ಕೆ ನಿಲ್ಲುವ ಚೀನಾದ ಗಡಿಯಲ್ಲಿ ಭಾರತ ಇದೀಗ ಡಜನ್‌ಗಟ್ಟಲೆ ಬಂಕರ್‌ಗಳನ್ನು ನಿರ್ಮಾಣ ಮಾಡುತ್ತಿದೆ. 

ತನ್ಮೂಲಕ ತಾಪಮಾನ ಶೂನ್ಯಕ್ಕಿಂತ ಕೆಳಕ್ಕೆ ಕುಸಿದಾಗಲೂ ಯೋಧರು ಸನ್ನದ್ಧ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಲು ಯೋಜಿಸಿದೆ.

ಗೊತ್ತಿಲ್ಲದ ಭೂಭಾಗದಲ್ಲಿ ಪ್ರತಿಕೂಲ ವಾತಾವರಣ ಹಾಗೂ ವಿಪರೀತ ಚಳಿಯ ಹವಾಮಾನದಿಂದಾಗಿ ಭಾರತೀಯ ಯೋಧರು ಈ ಹಿಂದೆ ಚೀನಾ ಮತ್ತು ಪಾಕಿಸ್ತಾನ ಜತೆಗಿನ ಯುದ್ಧಗಳ ಸಂದರ್ಭದಲ್ಲಿ ಹಿನ್ನಡೆ ಅನುಭವಿಸಿದ್ದರು.

 ಅದರಿಂದ ಎಚ್ಚೆತ್ತಿರುವ ಕೇಂದ್ರ ಗೃಹ ಸಚಿವಾಲಯ ಯೋಧರನ್ನು ಚಳಿಯಿಂದ ರಕ್ಷಿಸುವ ಬಂಕರ್‌ಗಳ ನಿರ್ಮಾಣ ಆರಂಭಿಸಿದೆ ಎಂದು ರಕ್ಷಣಾ ಮೂಲಗಳು ಹಾಗೂ ಆ ಕೆಲಸದಲ್ಲಿ ತೊಡಗಿರುವ ಕಂಪನಿಯ ಸಿಬ್ಬಂದಿ ತಿಳಿಸಿದ್ದಾರೆ.

ಈ ಮೊದಲು ಕೂಡ ಗಡಿಯಲ್ಲಿ ಯೋಧರಿಗಾಗಿ ಬಂಕರ್‌ಗಳು ಇರುತ್ತಿದ್ದವು. ಆದರೆ ಅವನ್ನು ಮರ ಅಥವಾ ಕಾಂಕ್ರಿಟ್‌ನಿಂದ ನಿರ್ಮಾಣ ಮಾಡಿ, ರಕ್ಷಣೆಗೆ ಮರಳಿನ ಚೀಲವನ್ನು ಇಡಲಾಗುತ್ತಿತ್ತು. 

ಆದರೆ ಪ್ರತಿಕೂಲ ಹವಾಮಾನ ಅಥವಾ ಶತ್ರುಗಳ ದಾಳಿ ವೇಳೆ ಅವುಗಳಿಂದ ಹೆಚ್ಚಿನ ರಕ್ಷಣೆ ಸಿಗುತ್ತಿರಲಿಲ್ಲ.ಆದರೆ ಹೊಸ ಬಂಕರ್‌ಗಳಲ್ಲಿ ಸೌರಶಕ್ತಿ ಹಾಗೂ ಭೂಮಿಯ ತಾಪವನ್ನು ಬಳಸಿ ಹವಾನಿಯಂತ್ರಿತ ವ್ಯವಸ್ಥೆ ಇರುವಂತೆ ನೋಡಿಕೊಳ್ಳಲಾಗುತ್ತದೆ. 

ಪ್ರತಿ ಬಂಕರ್‌ಗಳಲ್ಲೂ 120 ಯೋಧರು ಇರುವುದಕ್ಕೆ ಸ್ಥಳಾವಕಾಶ ಇರುತ್ತದೆ. ಯೋಧರಿಗಾಗಿ ನಿದ್ರಾ ಕೊಠಡಿ, ಮೈನಸ್‌ 30 ಡಿಗ್ರಿ ವಾತಾವರಣದಲ್ಲೂ ಚಳಿ ಆಗದಂತೆ ರಕ್ಷಣೆ ಇರುತ್ತದೆ.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ