)
- ಮೆಡಿಕಲ್‌ಗಳಲ್ಲಿ ಬೇಕಾಬಿಟ್ಟಿ ಸಿರಪ್ ಮಾರಾಟಕ್ಕೆ ಕೇಂದ್ರ ನಿರ್ಬಂಧ
ಕಳಪೆ ಕೆಮ್ಮಿನ ಸಿರಪ್ ಸೇವನೆಯಿಂದ ಕಳೆದ ವರ್ಷ ಮಧ್ಯಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಸಾವುಗಳು ಸಂಭವಿಸಿದ ಕಾರಣ ಕೇಂದ್ರ ಸರ್ಕಾರವು, ಕೆಮ್ಮಿನ ಸಿರಪ್ ಸೇರಿ ಇತರೆ ಹಲವು ಸಿರಪ್‌ಗಳನ್ನು ವೈದ್ಯರ ಚೀಟಿ ಇಲ್ಲದೆ ಮಾರಾಟ ಮಾಡುವುದನ್ನು ನಿರ್ಬಂಧಿಸಿ ಆದೇಶ ಹೊರಡಿಸಿದೆ.
ಔಷಧದ ಗುಣಮಟ್ಟ ಹಾಗೂ ರೋಗಿಗಳ ಸುರಕ್ಷತೆಯನ್ನು ಗಮದಲ್ಲಿಟ್ಟುಕೊಂಡು ಕೇಂದ್ರ ಆರೋಗ್ಯ ಸಚಿವಾಲಯ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.ಔಷಧಗಳ (ಐದನೇ ತಿದ್ದುಪಡಿ) ನಿಯಮಗಳಿಗೆ ತಿದ್ದುಪಡಿ ತಂದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಇದು ತಕ್ಷಣದಿಂದಲೇ ಜಾರಿಗೆ ಬರಲಿದೆ. ಅದರಂತೆ ಇನ್ನು ಮುಂದೆ ಮೆಡಿಕಲ್ ಶಾಪ್‌ಗಳು ಕೇಳಿದವರಿಗೆಲ್ಲ ಕೆಮ್ಮಿನ ಸಿರಪ್ ಮಾರಾಟ ಮಾಡುವುದಕ್ಕೆ ಬ್ರೇಕ್ ಬೀಳಲಿದೆ.
ಕಾನೂನಿಗೆ ತಿದ್ದುಪಡಿ:
ಷೆಡ್ಯೂಲ್ ‘ಕೆ’ ಕೆಲ ನಿರ್ದಿಷ್ಟ ಔಷಧಗಳ ಪಟ್ಟಿಯಾಗಿದೆ. ಈ ಔಷಧಗಳು ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆಯ ಕೆಲ ನಿಯಮಗಳಿಂದ ಅದರಲ್ಲೂ ಮುಖ್ಯವಾಗಿ ಉತ್ಪಾದನೆ, ಮಾರಾಟ ಹಾಗೂ ಹಂಚಿಕೆಗೆ ಸಂಬಂಧಿಸಿ ಷರತ್ತುಸಹಿತ ವಿನಾಯ್ತಿ ಪಡೆದಿರುತ್ತದೆ.