;Resize=(412,232))
ಬ್ರಾಟಿಸ್ಲಾವಾ: ಯುರೋಪ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸ್ಲೊವಾಕಿಯಾಗೆ ಭೇಟಿ ನೀಡಿದ್ದು, ಇದು 12 ವರ್ಷಗಳ ಅವರ ಅಧಿಕಾರಾವಧಿಯಲ್ಲಿ 100ನೇ ವಿದೇಶ ಪ್ರವಾಸ ಎಂಬ ದಾಖಲೆ ಬರೆದಿದೆ.
ಕಳೆದ 12 ವರ್ಷದಲ್ಲಿ ಅವರು 78 ದೇಶಗಳಿಗೆ ಒಟ್ಟು 100 ಬಾರಿ ಪ್ರವಾಸ ಕೈಗೊಂಡಿದ್ದಾರೆ. ಮೊದಲ ಅವಧಿಯಲ್ಲಿ 49, ಎರಡನೇ ಅವಧಿಯಲ್ಲಿ 27, ಹಾಗೂ 3ನೇ ಅವಧಿಯಲ್ಲಿ 24 ಬಾರಿ ಯಾನ ಮಾಡಿದ್ದಾರೆ.
ಸ್ಲೊವಾಕಿಯಾ ಪ್ರವಾಸದ ವೇಳೆ ಮೋದಿ, ಅಲ್ಲಿನ ಪ್ರಧಾನಿ ರಾಬರ್ಚ್ ಫಿಕೋ ಜತೆ ಮಹತ್ವದ ಮಾತುಕತೆ ನಡೆಸಿದ್ದಾರೆ. ಈ ವೇಳೆ ಉಭಯ ನಾಯಕರು ಭಾರತ-ಸ್ಲೊವಾಕಿಯಾದ ಸಂಬಂಧವನ್ನು ಸಮಗ್ರ ಪಾಲುದಾರಿಕೆ ಮಟ್ಟಕ್ಕೆ ಎತ್ತರಿಸಲು ಒಪ್ಪಿಕೊಂಡಿದ್ದು, ದ್ವಿಪಕ್ಷೀಯ ವ್ಯಾಪಾರ ಮತ್ತು ರಕ್ಷಣಾ ಸಹಕಾರವನ್ನು ಹೆಚ್ಚಿಸುವ ಪ್ರತಿಜ್ಞೆ ಮಾಡಿದರು. ಮೋದಿ ಬುಧವಾರ ಫ್ರಾನ್ಸಲ್ಲಿ ಜಿ7 ಶೃಂಗದಲ್ಲಿ ಪಾಲ್ಗೊಳ್ಳಲಿದ್ದಾರೆ.