ಕೋವಿಡ್‌ ರೂಪಾಂತರಿ ಜೆಎನ್.1 ಸೋಂಕು ಹೆಚ್ಚಳಕ್ಕೆ ಕಾರಣ

KannadaprabhaNewsNetwork |  
Published : May 21, 2025, 12:31 AM IST
ಒಮ್ರಿಕಾನ್  | Kannada Prabha

ಸಾರಾಂಶ

ಹಾಂಕಾಂಗ್, ಸಿಂಗಾಪುರ, ಚೀನಾ, ಥಾಯ್ಲೆಂಡ್ ಸೇರಿದಂತೆ ಹಲವು ದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕೋವಿಡ್ ಸೋಂಕು ಹೆಚ್ಚಿದ್ದಕ್ಕೆ ಒಮ್ರಿಕಾನ್‌ ಕೊರೋನಾ ವೈರಾಣುವಿನ ‘ಜೆಎನ್.1’ ರೂಪಾಂತರಿಯೇ ಕಾರಣ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

* ಕೋವಿಡ್‌ ರೂಪಾಂತರಿ ಜೆಎನ್.1 ಸೋಂಕು ಹೆಚ್ಚಳಕ್ಕೆ ಕಾರಣ

- ಹಾಂಕಾಂಗ್ ಹಾಗೂ ಸಿಂಗಾಪುರದಲ್ಲಿ ಸೋಂಕು ಹೆಚ್ಚಳ

- ಬಾರತದಲ್ಲಿ ಸದ್ಯ 257 ಸಕ್ರಿಯ । ಅಪಾಯವಿಲ್ಲ: ಕೇಂದ್ರ

ನವದೆಹಲಿ: ಹಾಂಕಾಂಗ್, ಸಿಂಗಾಪುರ, ಚೀನಾ, ಥಾಯ್ಲೆಂಡ್ ಸೇರಿದಂತೆ ಹಲವು ದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕೋವಿಡ್ ಸೋಂಕು ಹೆಚ್ಚಿದ್ದಕ್ಕೆ ಒಮ್ರಿಕಾನ್‌ ಕೊರೋನಾ ವೈರಾಣುವಿನ ‘ಜೆಎನ್.1’ ರೂಪಾಂತರಿಯೇ ಕಾರಣ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಇತ್ತೀಚಿಗೆ ಕೆಲ ದಿನಗಳಿಂದ ದಿಢೀರನೆ ಸೋಂಕು ಪ್ರಕರಣಗಳು ಕೆಲ ದೇಶಗಳಲ್ಲಿ ಉಲ್ಬಣಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

ಅಂಕಿ ಅಂಶಗಳ ಪ್ರಕಾರ ಹಾಂಕಾಂಗ್‌ನಲ್ಲಿ ಮೇ 3 ರಂದು ಅಂತ್ಯಗೊಂಡ ವಾರದಲ್ಲಿ 31 ಪ್ರಕರಣ ದಾಖಲಾಗಿದ್ದು, ಇದು ಕಳೆದ 12 ತಿಂಗಳಿನಲ್ಲಿ ಅಧಿಕವಾಗಿದೆ. ಸಿಂಗಾಪುರದಲ್ಲಿ ಮೇ 3ರ ಅಂತ್ಯಕ್ಕೆ ಕೋವಿಡ್ ಕೇಸು ಸಂಖ್ಯೆ ಶೇ. 28ರಷ್ಟು ಏರಿಕೆಯಾಗಿದ್ದು, 14200ಕ್ಕೆ ತಲುಪಿದೆ. ಇದೇ ರೀತಿ ಥಾಯ್ಲೆಂಡ್‌ನಲ್ಲಿ ಮೇ 17ರ ಅಂತ್ಯಕ್ಕೆ ಕಳೆದ ವಾರಕ್ಕಿಂತ 2 ಪಟ್ಟು ಸೋಂಕು ಹೆಚ್ಚಾಗಿದ್ದು. 33000 ಪ್ರಕರಣ ವರದಿಯಾಗಿವೆ. ಜೊತೆಗೆ ನೆರೆಯ ರಾಷ್ಟ್ರ ಚೀನಾದಲ್ಲೂ ಸೋಂಕು ಅಧಿಕವಾಗಿದೆ.

ಜೆಎನ್‌.1 ರೂಪಾಂತರಿ ಕಾರಣ:

30-39 ವರ್ಷದ ಆಸುಪಾಸಿನಲ್ಲಿ ಇರವವರಲ್ಲಿ ಈ ಸೋಂಕು ಕಾಣಿಸಿಕೊಂಡಿದೆ, ಇದಕ್ಕೆ ಜೆಎನ್.1ನ ಹೊಸ ರೂಪಾಂತರ ಕಾರಣ. ಆದರೆ ಈ ಜೆಎನ್.1 ಅಪಾಯಕಾರಿ ಎಂದು ಇನ್ನೂ ವಿಶ್ವ ಆರೋಗ್ಯ ಸಂಸ್ಥೆ ಡಬ್ಲುಎಚ್‌ಒ ಹೇಳಿಲ್ಲ, ಇದು ಸದ್ಯಕ್ಕೆ ‘ಆಸಕ್ತಿದಾಯಕ ವೈರಾಣು’ ಸ್ಥಿತಿಯಲ್ಲಿದೆ. ಕಳವಳ ಹಂತ ತಲುಪಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.

ಭಾರತದಲ್ಲ 257 ಸಕ್ರಿಯ ಕೇಸು:

ಹಲವು ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಸಂಖ್ಯೆ ಹೆಚ್ಚುತ್ತಿದ್ದರೂ ಸದ್ಯ ಭಾರತಕ್ಕೆ ಭಯವಿಲ್ಲ. ಇಲ್ಲಿ ಒಟ್ಟು 257 ಸಕ್ರಿಯ ಪ್ರಕರಣಗಳಿದೆ. ಜನರು ಯಾವುದೇ ರೀತಿಯ ಆತಂಕ ಪಡಬೇಕಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟ ಪಡಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬಂಗಾಳದಲ್ಲಿ ಶೀಘ್ರ ಜಂಗಲ್‌ ರಾಜ್ಯ ಅಂತ್ಯ : ಮೋದಿ ಪಣ
ಈಗ ತೆಲಂಗಾಣದಲ್ಲೂ ದ್ವೇಷ ಭಾಷಣ ನಿಷೇಧ ಕಾಯ್ದೆ: ರೆಡ್ಡಿ