ವಾಟ್ಸಾಪ್‌ ವೆಬ್‌ ಮೂಲಕ ಸೈಬರ್‌ ವಂಚನೆ: ಕೇಂದ್ರ

Published : Nov 24, 2026, 11:01 AM IST
WhatsApp

ಸಾರಾಂಶ

ಸಾರ್ವಜನಿಕ ಅಥವಾ ಇತರರೊಂದಿಗೆ ಹಂಚಿಕೊಳ್ಳುವ ಕಂಪ್ಯೂಟರ್‌ಗಳಲ್ಲಿ ವಾಟ್ಸಾಪ್ ವೆಬ್ ಸೆಷನ್‌ಗಳನ್ನು ಲಾಗಿನ್ ಸ್ಥಿತಿಯಲ್ಲೇ ಬಿಟ್ಟರೆ ಸೈಬರ್ ಅಪರಾಧಿಗಳು ಖಾಸಗಿ ಸಂಭಾಷಣೆಗಳನ್ನು ಪ್ರವೇಶಿಸಬಹುದು.

ನವದೆಹಲಿ: ಸಾರ್ವಜನಿಕ ಅಥವಾ ಇತರರೊಂದಿಗೆ ಹಂಚಿಕೊಳ್ಳುವ ಕಂಪ್ಯೂಟರ್‌ಗಳಲ್ಲಿ ವಾಟ್ಸಾಪ್ ವೆಬ್ ಸೆಷನ್‌ಗಳನ್ನು ಲಾಗಿನ್ ಸ್ಥಿತಿಯಲ್ಲೇ ಬಿಟ್ಟರೆ ಸೈಬರ್ ಅಪರಾಧಿಗಳು ಖಾಸಗಿ ಸಂಭಾಷಣೆಗಳನ್ನು ಪ್ರವೇಶಿಸಬಹುದು.

ಖಾತೆಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದು

ಖಾತೆಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದು ಮತ್ತು ಖಾತೆದಾರರ ಸೋಗಿನಲ್ಲಿ ವಂಚನೆ ನಡೆಸಬಹುದು ಎಂದು ಕೇಂದ್ರ ಗೃಹ ಸಚಿವಾಲಯದ ಸೈಬರ್ ಅಪರಾಧ ನಿಗ್ರಹ ವಿಭಾಗವು ಎಚ್ಚರಿಕೆ ನೀಡಿದೆ.

ಹೆಚ್ಚಿನ ಎಚ್ಚರಿಕೆ ವಹಿಸಬೇಕು

ಕಚೇರಿ ಕಂಪ್ಯೂಟರ್‌ಗಳು, ಸಾರ್ವಜನಿಕ ಕಂಪ್ಯೂಟರ್‌ಗಳು ಅಥವಾ ಇತರರು ಬಳಸಬಹುದಾದ ಸಾಧನಗಳಲ್ಲಿ ವಾಟ್ಸಾಪ್ ವೆಬ್ ಬಳಸುವಾಗ ಬಳಕೆದಾರರು ಹೆಚ್ಚಿನ ಎಚ್ಚರಿಕೆ ವಹಿಸಬೇಕು.

ವಾಟ್ಸಾಪ್ ವೆಬ್ ಮೂಲಕ ಅಧಿಕೃತ, ಖಾಸಗಿ ಅಥವಾ ಸೂಕ್ಷ್ಮ ಮಾಹಿತಿಗಳನ್ನು ವಿನಿಮಯ ಮಾಡುವುದನ್ನು ತಪ್ಪಿಸಬೇಕು. ಇಲ್ಲದಿದ್ದರೆ ಸೈಬರ್‌ ವಂಚಕರು ಖಾತೆದಾರರ ಹೆಸರಿನಲ್ಲಿ ಸಂದೇಶಗಳನ್ನು ಕಳುಹಿಸಿ, ಅವರ ವಿಶ್ವಾಸಾರ್ಹ ಗುರುತನ್ನು ದುರ್ಬಳಕೆ ಮಾಡಿಕೊಂಡು ಆರ್ಥಿಕ ವಂಚನೆ, ಫಿಶಿಂಗ್ ಮತ್ತು ಇತರ ಮೋಸದ ಕೃತ್ಯಗಳನ್ನು ಎಸಗಬಹುದು ಎಂದು ಎಚ್ಚರಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ರಾಮಜನ್ಮಭೂಮಿಯಿಂದ ಸೀತೆಯ ಜನ್ಮಭೂಮಿಗೆ ಇನ್ನು ನೇರ ರೈಲು!
ಈ ವಾರ ಚಿನ್ನ, ಬೆಳ್ಳಿ ಬೆಲೆ ಮತ್ತಷ್ಟು ಕುಸಿತ ಸಾಧ್ಯತೆ