ಭೋಜಶಾಲಾ ಮಸೀದಿ ಸಮೀಕ್ಷೆ: ಕಂದಕ ತೋಡಿ ಎಎಸ್‌ಐ ಸರ್ವೇ

KannadaprabhaNewsNetwork |  
Published : Mar 29, 2024, 12:50 AM ISTUpdated : Mar 29, 2024, 08:25 AM IST
ಭೋಜಶಾಲ | Kannada Prabha

ಸಾರಾಂಶ

ವಿವಾದಿತ ಭೋಜಶಾಲಾ ದೇಗುಲ ಮತ್ತು ಮಸೀದಿಯ ಸಮೀಕ್ಷೆಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮುಂದುವರೆಸಿದ್ದು, 7ನೇ ದಿನವಾದ ಗುರುವಾರ ಕಂದಕಗಳನ್ನು ತೋಡಿ ಪರಿಶೀಲನೆ ನಡೆಸಿದೆ.

ಧಾರ್‌(ಮ.ಪ್ರ.): ವಿವಾದಿತ ಭೋಜಶಾಲಾ ದೇಗುಲ ಮತ್ತು ಮಸೀದಿಯ ಸಮೀಕ್ಷೆಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮುಂದುವರೆಸಿದ್ದು, 7ನೇ ದಿನವಾದ ಗುರುವಾರ ಕಂದಕಗಳನ್ನು ತೋಡಿ ಪರಿಶೀಲನೆ ನಡೆಸಿದೆ. 

ಈ ವೇಳೆ ಹಿಂದೂಗಳ ಪರವಾಗಿ ಸರಸ್ವತಿ ದೇಗುಲದ ಆಶಿಶ್‌ ಗೋಯಲ್‌ ಹಾಗೂ ಗೋಪಾಲ್‌ ಶರ್ಮಾ ಉಪಸ್ಥಿತರಿದ್ದರೆ, ಕಮಲ ಮೌಲಾ ಮಸೀದಿಯ ಪರವಾಗಿ ಅಬ್ದುಲ್‌ ಸಮದ್‌ ಹಾಜರಿದ್ದರು. 

ಈ ವೇಳೆ ಮಾತನಾಡಿದ ಸಮದ್‌, ‘ಎಎಸ್‌ಐ ತನ್ನ ಸಮೀಕ್ಷಾ ಕಾರ್ಯವನ್ನು ಮಾಡುತ್ತಿದ್ದು, ಗುರುವಾರ ಪ್ರಾಂಗಣದ ಹಿಂಬದಿಯಲ್ಲಿ 6 ಅಡಿ ಆಳದ ಮೂರು ಕಂದಕಗಳನ್ನು ತೋಡಿ ಪರಿಶೀಲನೆ ಕೈಗೊಂಡಿದೆ. 

ಆದರೆ ನಾವು 2003ರ ಬಳಿಕ ಪ್ರತಿಷ್ಠಾಪಿಸಲಾದ ವಸ್ತುಗಳನ್ನು ಸಮೀಕ್ಷೆಯ ಭಾಗವಾಗಿ ಬಳಸಬೇಡಿ ಎಂದು ಕೋರುತ್ತೇವೆ’ ಎಂದು ತಿಳಿಸಿದರು. 

ವಾಗ್ದೇವಿ ವಿಗ್ರಹ ಒಯ್ದಿದ್ದ ಬ್ರಿಟಿಷರು: ಭೋಜಶಾಲಾ ದೇಗುಲದಲ್ಲಿ ಇತಿಹಾಸದ ಪ್ರಕಾರ ರಾಜ ಭೋಜ ಎಂಬ ದೊರೆ ವಾಗ್ದೇವಿಯ ವಿಗ್ರಹವನ್ನು ಕ್ರಿ.ಶ.1034ರಲ್ಲಿ ಪ್ರತಿಷ್ಠಾಪನೆ ಮಾಡಿದ್ದ. ಅದನ್ನು ಬ್ರಿಟಿಷರು 1875ರಲ್ಲಿ ಲಂಡನ್‌ಗೆ ಕೊಂಡೊಯ್ದಿರುವುದಾಗಿ ಹಿಂದೂ ಪರ ಅರ್ಜಿದಾರರು ತಿಳಿಸಿದ್ದಾರೆ.

PREV

Recommended Stories

ಪ್ರಧಾನಿ, ಸಿಎಂ ಜೈಲಿಂದ ಅಧಿಕಾರದ ಬಗ್ಗೆ ಜನ ತೀರ್ಮಾನಿಸಬೇಕಿದೆ : ಅಮಿತ್‌
ಹಣ ಇಟ್ಟು ಆಡುವ ಎಲ್ಲಾ ಆನ್‌ಲೈನ್‌ ಗೇಮ್‌ಗಳು ಕಡ್ಡಾಯ ನಿಷೇಧ