ಮೇರಠ್: ಉತ್ತರಪ್ರದೇಶದ ಮೇರಠ್‌ನ ಝಾಕಿರ್ ನಗರದಲ್ಲಿ 3 ಅಂತಸ್ತಿನ ಮನೆಯೊಂದು ಕುಸಿದು ಬಿದ್ದಿದ್ದು, 10 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ದುರಂತದಲ್ಲಿ ನಾಲ್ವರಿಗೆ ಗಂಭೀರ ಗಾಯಗಳಾಗಿವೆ.
ಗಾಯಾಳುಗಳನ್ನು ಲಾಲಾ ಲಜಪತ್ ರಾಯ್ ಸ್ಮಾರಕ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಮೃತದೇಹಗಳನ್ನು ರಕ್ಷಣಾ ಕಾರ್ಯಾಚರಣೆ ತಂಡ ಹೊರಗೆ ತೆಗೆದಿದ್ದು, ಮೃತದೇಹಗಳನ್ನು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
==ವಾಮಾಚಾರ ಶಂಕೆ: 3 ಮಹಿಳೆಯರು ಸೇರಿ ಐವರ ಬಡಿದು ಹತ್ಯೆ
ಸೆ.12 ಗುರುವಾರದಂದು ಛತ್ತೀಸ್‌ಗಢದ ಭಾಟಾಪಾರ ಜಿಲ್ಲೆಯಲ್ಲಿ ವಾಮಾಚಾರದ ಶಂಕೆ ಮೇರೆಗೆ ಕಂದಮ್ಮ ಸೇರಿ ನಾಲ್ವರನ್ನು ಜನರು ಹತ್ಯೆ ಮಾಡಿದ್ದಾರೆ.
ಬಿಹಾರದಲ್ಲಿ ಪಾನ ನಿಷೇಧ ತೆರವು: ಪ್ರಶಾಂತ್ ಕಿಶೋರ್ ಭರವಸೆ
‘ನಾವು ಕಳೆದರೆರಡು ವರ್ಷಗಳಿಂದ ಈ ನಿಟ್ಟಿನಲ್ಲಿ ಸಿದ್ಧತೆ ನಡೆಸುತ್ತಿದ್ದು, ವಿಶೇಷ ತಯಾರಿಯ ಅಗತ್ಯವಿಲ್ಲ’ ಎಂದು ಪ್ರಶಾಂತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಬಿಹಾರದಲ್ಲಿ ಸಿಎಂ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ 2016ರ ಏಪ್ರಿಲ್‌ನಲ್ಲಿ ಪಾನ ನಿಷೇಧ ಮಾಡಿದ್ದು, ಇದರಿಂದ ರಾಜ್ಯದಲ್ಲಿ ಕಳ್ಳಬಟ್ಟಿ ಮಾರಾಟ, ಸೇವನೆ ಅಧಿಕವಾಗಿತ್ತು. ಇದನ್ನು ತಡೆಯುವ ಉದ್ದೇಶದಿಂದ ಕಿಶೋರ್ ಈ ಘೋಷಣೆ ಮಾಡಿದ್ದಾರೆ.
ಹರ್ಯಾಣದಲ್ಲಿ ಬಿಜೆಪಿ ಗೆದ್ದರೆ ಸಿಎಂ ಹುದ್ದೆಗೆ ನಾನು ದಾವೇದಾರ: ಅನಿಲ್ ವಿಜ್
ಭಾನುವಾರ ಮಾತನಾಡಿದ ವಿಜ್, ‘ನಾನು ಇವತ್ತಿನವರೆಗೂ ಪಕ್ಷದಿಂದ ಏನನ್ನೂ ಬಯಸಿಲ್ಲ. ಹರ್ಯಾಣದ ಜನರು ನನ್ನನ್ನು ಭೇಟಿಯಾಗುತ್ತಿದ್ದಾರೆ. ಜನರ ಬೇಡಿಕೆಯ ಮೇರೆಗೆ ಮತ್ತು ಹಿರಿತನದ ಆಧಾರದ ಮೇಲೆ ನಾನು ಸಿಎಂ ಆಗಲು ಅರ್ಹ. ಆದ್ದರಿಂದ ಈ ಬಾರಿ ಮುಖ್ಯಮಂತ್ರಿ ಹುದ್ದೆ ಏರಲು ನಾನು ಹಕ್ಕನ್ನು ಪ್ರತಿಪಾದಿಸುತ್ತೇನೆ’ ಎಂದರು.ಹರ್ಯಾಣ ವಿಧಾನಸಭಾ ಚುನಾವಣೆ ಅ.5 ರಂದು ನಡೆಯಲಿದೆ.
ವಿಮೆ ಜಿಎಸ್‌ಟಿ ಪರಿಶೀಲನೆಗೆ ಸಮಿತಿ: ಕರ್ನಾಟಕಕ್ಕೂ ಸ್ಥಾನ
ನವದೆಹಲಿ: ವಿವಿಧ ಆರೋಗ್ಯ ಮತ್ತು ಜೀವ ವಿಮಾ ಮೇಲಿನ ಜಿಎಸ್‌ಟಿ ದರವನ್ನು ಪರಿಶೀಲಿಸಲು ಜಿಎಸ್‌ಟಿ ಕೌನ್ಸಿಲ್ ಭಾನುವಾರ 13 ಸದಸ್ಯರ ಸಚಿವರ ಸಮಿತಿಯನ್ನು ರಚಿಸಿದೆ.ಬಿಹಾರ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಈ ಸಮಿತಿಯ ಸಂಚಾಲಕರಾಗಿದ್ದಾರೆ. ಸಮಿತಿಯ ಸದಸ್ಯರಲ್ಲಿ ಕರ್ನಾಟಕ, ಉತ್ತರ ಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ಕೇರಳ, ಆಂಧ್ರಪ್ರದೇಶ ಸೇರಿದಂತೆ ಇತರೆ ರಾಜ್ಯಗಳ ಸಚಿವರನ್ನು ಸದಸ್ಯರನ್ನಾಗಿ ನೇಮಿಸಿದೆ.ಈ ಎಲ್ಲಾ ಸದಸ್ಯರು ರಾಜ್ಯಗಳಲ್ಲಿ ಆರೋಗ್ಯ ಮತ್ತು ಜೀವ ವಿಮೆ ಮೇಲಿನ ಜಿಎಸ್‌ಟಿ ದರವನ್ನು ಪರಿಶೀಲಿಸಿ ಅದರ ವರದಿಯನ್ನು ಅ.30 ರೊಳಗೆ ಸಲ್ಲಿಸುವಂತೆ ಕೌನ್ಸಿಲ್ ತಿಳಿಸಿದೆ.ಆರೋಗ್ಯ ಮತ್ತು ಜೀವ ವಿಮೆ ಮೇಲಿನ ತೆರಿಗೆಯನ್ನು ಕಡಿತಗೊಳಿಸುವ ಬಗ್ಗೆ ಸೆ.9 ರಂದು ಜಿಎಸ್‌ಟಿ ಕೌನ್ಸಿಲ್ ಸಭೆ ಸೇರಿತ್ತು.