- ಇಂದು ರಾಜಸ್ಥಾನ ರಾಯಲ್ಸ್ ವಿರುದ್ಧ ಸೆಣಸುನವದೆಹಲಿ: ಸತತ 4 ಗೆಲುವುಗಳೊಂದಿಗೆ 2025ರ ಐಪಿಎಲ್‌ನಲ್ಲಿ ಭರ್ಜರಿ ಆರಂಭ ಪಡೆದಿದ್ದ ಡೆಲ್ಲಿ ಕ್ಯಾಪಿಟಲ್ಸ್, ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ವೀರೋಚಿತ ಸೋಲು ಅನುಭವಿಸಿತ್ತು. ಆ ಸೋಲಿನ ಕಹಿಯನ್ನು ಮರೆತು, ಬುಧವಾರ ತವರಿನಲ್ಲಿ ಮೊದಲ ಜಯ ಸಾಧಿಸಲು ಡೆಲ್ಲಿ ಉತ್ಸುಕಗೊಂಡಿದೆ.
ಮತ್ತೊಂದೆಡೆ ಆಡಿರುವ 6 ಪಂದ್ಯಗಳಲ್ಲಿ 4ರಲ್ಲಿ ಸೋತು, 8ನೇ ಸ್ಥಾನದಲ್ಲಿರುವ ರಾಜಸ್ಥಾನ ರಾಯಲ್ಸ್, ಲಯಕ್ಕೆ ಮರಳಲು ಎದುರು ನೋಡುತ್ತಿದೆ. ತಂಡದ ಬ್ಯಾಟಿಂಗ್, ಬೌಲಿಂಗ್ ವಿಭಾಗ ಇನ್ನಷ್ಟೇ ತನ್ನ ಅಸಲಿ ಸಾಮರ್ಥ್ಯಕ್ಕೆ ತಕ್ಕಂತೆ ಆಡಬೇಕಿದೆ.
ಒಟ್ಟಾರೆ, ನಿರ್ಣಾಯಕ ಹಂತದಲ್ಲಿ ಉಭಯ ತಂಡಗಳ ನಡುವಿನ ಸೆಣಸಾಟ, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಪಂದ್ಯ ಆರಂಭ: ಸಂಜೆ 7.30ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ ಸ್ಟಾರ್