ಅತ್ಯಂತ ವಿಷಮ ಹಂತಕ್ಕೆ ದಿಲ್ಲಿ ಹವೆ

KannadaprabhaNewsNetwork |  
Published : Dec 16, 2025, 01:45 AM IST
ದಿಲ್ಲಿ | Kannada Prabha

ಸಾರಾಂಶ

ರಾಷ್ಟ್ರರಾಜಧಾನಿ ದೆಹಲಿಯ ವಾತಾವರಣ ದಿನೇ ದಿನೇ ಕಳವಳಕಾರಿ ಹಂತಕ್ಕೆ ಕುಸಿಯುತ್ತಿದ್ದು, ಸೋಮವಾರ ವಾಯುಗುಣಮಟ್ಟ ಸೂಚ್ಯಂಕ (ಎಕ್ಯುಐ) 500 ಅಂಕಗಳ ಗಡಿ ತಲುಪಿದೆ. ಇದು ತೀರಾ ಅಪಾಯಕಾರಿ ಸ್ಥಿತಿಯನ್ನು ಸೂಚಿಸುತ್ತದೆ.

-ವಾಯುಗುಣಮಟ್ಟ ಸೂಚ್ಯಂಕ 500 ಅಂಕ: ಇದು ತೀರಾ ‘ಗಂಭೀರ’- 60ಕ್ಕೂ ಹೆಚ್ಚು ವಿಮಾನ ಹಾರಾಟ ರದ್ದು

- ಆನ್‌ಲೈನ್‌ ಕ್ಲಾಸ್‌ಗೆ ಆದೇಶನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯ ವಾತಾವರಣ ದಿನೇ ದಿನೇ ಕಳವಳಕಾರಿ ಹಂತಕ್ಕೆ ಕುಸಿಯುತ್ತಿದ್ದು, ಸೋಮವಾರ ವಾಯುಗುಣಮಟ್ಟ ಸೂಚ್ಯಂಕ (ಎಕ್ಯುಐ) 500 ಅಂಕಗಳ ಗಡಿ ತಲುಪಿದೆ. ಇದು ತೀರಾ ಅಪಾಯಕಾರಿ ಸ್ಥಿತಿಯನ್ನು ಸೂಚಿಸುತ್ತದೆ.

ದಟ್ಟ ಕಪ್ಪು ಹೊಗೆ ನಗರವನ್ನು ಆವರಿಸಿ, ಸ್ಪಷ್ಟ ಗೋಚರತೆಯೇ ಇಲ್ಲದ ಕಾರಣ ಸುಮಾರು 60 ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಅಲ್ಲದೆ, ಮಕ್ಕಳು ಶಾಲೆಗೆ ಹೋಗದ ಸ್ಥಿತಿ ಇರುವ ಕಾರಣ ಆನ್‌ಲೈನ್‌ ಶಾಲೆಗೆ ಆದೇಶಿಸಲಾಗಿದೆ/

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ, ಎಕ್ಯುಐ 0-50ರ ವರೆಗಿದ್ದರೆ ವಾತಾವರಣ ಅತ್ಯಂತ ಉತ್ತಮವೆಂದೂ, 401-500ರ ವರೆಗಿದ್ದರೆ ತೀರಾ ಗಂಭೀರ ಎಂದೂ ಪರಿಗಣಿಸಲಾಗಿದೆ. ದೆಹಲಿಯ ಹಲವೆಡೆ ಈ ಪ್ರಮಾಣ ಅಂತಿಮ ಹಂತ ತಲುಪಿದೆ. ಜಹಾಂಗೀರ್‌ಪುರಿಯಲ್ಲಿ 498, ವಜೀರಪುರದಲ್ಲಿ 500 ಅಂಕ ದಾಖಲಾಗಿದೆ. ವಾತಾವರಣ ಪೂರ್ತಿ ಹದಗೆಟ್ಟಿರುವ ಕಾರಣ ವಿಮಾನಗಳ ಸಂಚಾರಕ್ಕೂ ತೊಂದರೆಯಾಗಿದೆ. ಸೋಮವಾರ ಮುಂಜಾಗ್ರತಾ ಕ್ರಮವಾಗಿ 60ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ರದ್ದುಗೊಳಿಸಿ, 5 ವಿಮಾನಗಳ ಮಾರ್ಗ ಬದಲಿಸಲಾಗಿದೆ.

ಪ್ರಾಣಿಗಳಿಗೂ ಸಮಸ್ಯೆ:

ಮಾಲಿನ್ಯದಿಂದಾಗಿ ಮಾನವರು ಮಾತ್ರವಲ್ಲ ನಾಯಿ ಹಾಗೂ ಪಶುಗಳು ಕೂಡ ಉಸಿರಾಟ ಸಮಸ್ಯೆಗೆ ಒಳಗಾಗಿವೆ ಎಂದು ಪಶು ವೈದ್ಯರು ಹೇಳಿದ್ದಾರೆ.

==

ಅಕ್ರಮ ಹೈವೇ ಧಾಬಾಗಳಿಗೆ ಅಂಕುಶ: ಸುಪ್ರೀಂ ಸುಳಿವು

- ಹೈವೇ ಅಪಘಾತ ತಡೆಗೆ ರಾಷ್ಟ್ರೀಯ ಮಾರ್ಗಸೂಚಿಗೆ ಇಂಗಿತ

- ನಿಯಮಗಳ ಮಾಹಿತಿ ಸಲ್ಲಿಸಲು ಕೇಂದ್ರಕ್ಕೆ ಸೂಚನೆ

ಪಿಟಿಐ ನವದೆಹಲಿ

ರಾಷ್ಟ್ರೀಯ ಹೆದ್ದಾರಿ ಹಾಗೂ ಎಕ್ಸ್‌ಪ್ರೆಸ್‌ವೇಗಳಲ್ಲಿ ಅಪಘಾತಗಳು ಹೆಚ್ಚುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್‌, ರಸ್ತೆ ಅಪಘಾತಗಳನ್ನು ತಡೆಗಟ್ಟಲು ಅಖಿಲ ಭಾರತ ಮಾರ್ಗಸೂಚಿ ರೂಪಿಸುವ ಬಗ್ಗೆ ಸುಪ್ರೀಂ ಕೋರ್ಟ್‌ ಸೋಮವಾರ ಒಲವು ತೋರಿದೆ. ಇದರ ಭಾಗವಾಗಿ ಹೆದ್ದಾರಿ ಪಕ್ಕದ ಅಕ್ರಮ ಧಾಬಾಗಳಿಗೆ ಕಡಿವಾಣ ಹಾಕುವ ಸುಳಿವು ನೀಡಿದೆ.ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳ ಎರಡೂ ಬದಿಗಳಲ್ಲಿ ಅಕ್ರಮ ‘ಧಾಬಾ’ಗಳ ನಿರ್ಮಾಣವು ರಸ್ತೆ ಅಪಘಾತಗಳಿಗೆ ಸಂಭವನೀಯ ಕಾರಣ ಎಂದು ನ್ಯಾ। ಜೆ.ಕೆ. ಮಹೇಶ್ವರಿ ಮತ್ತು ನ್ಯಾ। ವಿಜಯ್ ಬಿಷ್ಣೋಯಿ ಅವರಿದ್ದ ಪೀಠವು ಸೋಮವಾರ ಹೇಳಿತು. ಅಲ್ಲದೆ, ಇವುಗಳ ವಿರುದ್ಧ ಕ್ರಮ ಕೈಗೊಳ್ಳಲು ಶಾಸನಬದ್ಧ ನಿಯಮಗಳ ಮಾಹಿತಿ ಸಲ್ಲಿಸುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಪರ ಈ ಪ್ರಕರಣದಲ್ಲಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸೂಚಿಸಿತು.ಅಲ್ಲದೆ, ಈವರೆಗೆ ಕೈಗೊಂಡ ಕ್ರಮಗಳ ಬಗ್ಗೆ ಕೂಡ ಮಾಹಿತಿಗೆ ನಿರ್ದೇಶಿಸಿತು.ವಿಚಾರಣೆ ವೇಳೆ ವಾದಿಸಿದ ಮೆಹ್ತಾ, ‘ನಮಗೆ ನಮ್ಮ ವ್ಯಾಪ್ತಿಯಲ್ಲಿದ್ದರೆ ಹೈವೇ ಪಕ್ಕದ ಅಕ್ರಮ ಧಾಬಾಗಳು ಮತ್ತು ಹೋಟೆಲ್‌ಗಳನ್ನು ತೆಗೆದುಹಾಕುವ ಅಧಿಕಾರವಿದೆ. ಆದರೆ ಹೈವೇ ಪಕ್ಕದ ಜಾಗವು ಹೆದ್ದಾರಿ ಪ್ರಾಧಿಕಾರಕ್ಕೆ ಒಳಪಡುವುದಿಲ್ಲ. ಅವು ಜಿಲ್ಲಾಡಳಿತ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಅವುಗಳ ತೆರವಿಗೆ ಇದು ತೊಡಕಾಗಿದೆ. ಇದಕ್ಕೆ ಪರಿಹಾರ ಕಂಡು ಹಿಡಿಯಬೇಕಿದೆ’ ಎಂದರು. ಆಗ ಪ್ರತಿಕ್ರಿಯಿಸಿದ ಪೀಠ, ‘ಇವುಗಳ ಬಗ್ಗೆ ರಾಷ್ಟ್ರೀಯ ಮಾರ್ಗಸೂಚಿ ಅಗತ್ಯವಿದೆ’ ಎಂದು ಹೇಳಿ ವಿಚಾರಣೆ ಮುಂದೂಡಿತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ