ದೆಹಲಿ: ದೇಶದಲ್ಲಿ ಈ ವರ್ಷ ಮುಂಗಾರು ಉತ್ತಮವಾಗಿದೆ. ಹೀಗಿದ್ದರೂ ದೇಶದ ಪ್ರಮುಖ 150 ಜಲಾಶಯಗಳಲ್ಲಿ ಕಳೆದ ವರ್ಷಕ್ಕಿಂತ ನೀರು ಸಂಗ್ರಹದ ಪ್ರಮಾಣ ಕಡಿಮೆಯಾಗಿದೆ ಎಂದು ಕೇಂದ್ರ ಜಲ ಆಯೋಗ ಮಾಹಿತಿ ನೀಡಿದೆ. ಆದರೆ ಕಳೆದ ದಶಕದ ಸರಾಸರಿಗಿಂತ ಅಧಿಕವಾಗಿದೆ ಎಂದಿದೆ.
ಆದರೆ ದಕ್ಷಿಣ ಭಾರತದಲ್ಲಿ ಸುಮಾರು 42 ಜಲಾಶಯಗಳಿವೆ. ಇಲ್ಲಿ ಜಲಾಶಯಗಳ ಸಂಗ್ರಹ ಸಾಮರ್ಥ್ಯ 53.334 ಶತಕೋಟಿ ಕ್ಯುಬಿಕ್ ಮೀಟರ್. ಸದ್ಯ ಇವುಗಳಲ್ಲಿ 35.010 ಶತಕೋಟಿ ಕ್ಯುಬಿಕ್ ಮೀಟರ್ ನೀರು ಸಂಗ್ರಹವಾಗಿದೆ. ಇದು ಒಟ್ಟು ಸಾಮಾರ್ಥ್ಯದ ಶೇ.66ರಷ್ಟು ಎಂದು ಅಂಕಿ ಅಂಶಗಳು ಹೇಳಿವೆ. ಜೊತೆಗೆ ಇದು ಕಳೆದ ವರ್ಷಕ್ಕಿಂತ ಹೆಚ್ಚಿದೆ.