- ಹಾರಾಟ ಮಾಡಿದ್ದ ಏರ್‌ಇಂಡಿಯಾ ಎ320 ವಿಮಾನ
- ಡಿಜಿಸಿಎಯಿಂದ ತನಿಖೆಗೆ ಆದೇಶನವದೆಹಲಿ: ಟಾಟಾ ಮಾಲೀಕತ್ವದ ಏರ್‌ಇಂಡಿಯಾದ ಎ320 ವಿಮಾನವೊಂದು ವಾಯುಯಾನ ಯೋಗ್ಯತೆ ಪ್ರಮಾಣಪತ್ರದ (ಎಆರ್‌ಸಿ-ಏರ್ ವರ್ಥಿನೆಸ್ ರಿವ್ಯೂ ಸರ್ಟಿಫಿಕೇಟ್) ಅವಧಿ ಮುಗಿದಿದ್ದರೂ ಎಂಟು ಬಾರಿ ಹಾರಾಟ ನಡೆಸಿರುವ ಆಘಾತಕಾರಿ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಈ ಮೂಲಕ ಏರ್ ಇಂಡಿಯಾವು ಪ್ರಯಾಣಿಕರ ಜೀವವನ್ನು ನಿರ್ಲಕ್ಷಿಸಿದ ಆರೋಪ ಎದುರಿಸುತ್ತಿದ್ದು, ಈ ಸಂಬಂಧ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ತನಿಖೆಗೆ ಆದೇಶಿಸಿದೆ.164 ಸೀಟಿನ ಎ320 ವಿಮಾನದ ಉಡ್ಡಯನ ಅರ್ಹತೆ ಪ್ರಮಾಣಪತ್ರ ರದ್ದಾಗಿದ್ದರೂ ನ.24-25ರ ನಡುವೆ 8 ಬಾರಿ ಹಾರಾಟ ನಡೆಸಿತ್ತು. ಎಂಜಿನಿಯರ್ ಒಬ್ಬರ ಪರಿಶೀಲನೆ ವೇಳೆ ಈ ವಿಚಾರ ಬೆಳಕಿಗೆ ಬಂದ ಬಳಿಕ ಈ ವಿಮಾನದ ಸೇವೆ ಹಿಂಪಡೆಯಲಾಗಿದೆ.
ವಿಮಾನವೊಂದು ಹಾರಾಟ ನಡೆಸಲು ವಾಯುಯಾನ ಯೋಗ್ಯತೆ ಪ್ರಮಾಣಪತ್ರ ಕಡ್ಡಾಯ. ನಿಯಮಿತ ನಿರ್ವಹಣೆಗೆ ಒಳಗಾದ ಬಳಿಕ ಡಿಜಿಸಿಎ ಎಆರ್‌ಸಿಯನ್ನು ಪ್ರತಿ ವರ್ಷ ನವೀಕರಣ ಮಾಡುತ್ತದೆ. ಸೂಕ್ತ ಲೈಸೆನ್ಸ್ ಮತ್ತು ಪ್ರಮಾಣಪತ್ರ ಇಲ್ಲದೆ ವಿಮಾನ ಹಾರಾಟ ಗಂಭೀರ ಅಪರಾಧವಾಗಿದ್ದು, ಇದಕ್ಕಾಗಿ ಏರ್‌ಇಂಡಿಯಾವು ಪ್ರಮುಖ ಅಧಿಕಾರಿಗಳ ಅಮಾನತು ಸೇರಿ ಭಾರೀ ಪ್ರಮಾಣದ ದಂಡಕ್ಕೆ ಗುರಿಯಾಗುವ ನಿರೀಕ್ಷೆ ಇದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈಗಾಗಲೇ ಏರ್ ಇಂಡಿಯಾವು ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಿರುವುದಾಗಿ ತಿಳಿಸಿದೆ.==
ಕಂಪನಿ ನೀಡಿದ ಗೂಗಲ್ ಫೋನ್ ಬಳಸುದ್ದರೆ ಎಚ್ಚರ!- ನಿಮ್ಮ ಬಾಸ್‌ಗೆ ನಿಮ್ಮ ಮೆಸೇಜ್ ನೋಡಲು ಅವಕಾಶ
ವಾಷಿಂಗ್ಟನ್: ನೀವು ಕಂಪನಿ ನೀಡಿರುವ ಗೂಗಲ್ ಆ್ಯಂಡ್ರಾಯ್ಡ್ ಫೋನ್ ಬಳಸುತ್ತಿದ್ದೀರಾ ಎಚ್ಚರ. ಗೂಗಲ್ ಕಂಪನಿಯು ಆ್ಯಂಡ್ರಾಯ್ಡ್ ಸಾಧನಗಳಲ್ಲಿ, ಅದರಲ್ಲೂ ವಿಶೇಷವಾಗಿ ಪಿಕ್ಸೆಲ್ ಫೋನ್‌ಗಳಲ್ಲಿ ಬದಲಾವಣೆ ತಂದಿದೆ. ನೀವು ಕಂಪನಿ ನಿರ್ವಹಿಸುವ ಪಿಕ್ಸೆಲ್ ಫೋನ್ ಬಳಸಿದರೆ, ನಿಮ್ಮ ಉದ್ಯೋಗದಾತರು ನೀವು ಕಳುಳಿಸುವ ಮತ್ತು ಸ್ವೀಕರಿಸುವ ಸಂದೇಶಗಳನ್ನು ನೋಡಲು ಇದು ಅನುಕೂಲ ಮಾಡಿಕೊಡಲಿದೆ.ಇತ್ತೀಚಿನ ನವೀಕರಣವು ಕಂಪನಿ ನೀಡಿದ ಸಾಧನಗಳಲ್ಲಿನ ಎಲ್ಲಾ ಮೆಸೇಜ್ ಮತ್ತು ಆರ್‌ಸಿಎಸ್ ಸಂಭಾಷಣೆಗಳನ್ನು ಆರ್ಕೈವ್ ಮಾಡಲು ಮತ್ತು ಪರಿಶೀಲಿಸಲು ಬಾಸ್‌ಗಳಿಗೆ ಅನುಮತಿಸುತ್ತದೆ, ಎಡಿಟ್ ಮಾಡಿದ ಅಥವಾ ಅಳಿಸಲಾದ ಸಂದೇಶಗಳನ್ನು ಸಹ ಅವರು ನೋಡಬಹುದು.
ಇದು ಕಂಪನಿ ಫೋನ್‌ಗಳನ್ನೂ ಸಹ ಖಾಸಗಿ ಎಂದು ಪರಿಗಣಿಸಿ ಬಳಕೆ ಮಾಡುವ ಉದ್ಯೋಗಿಗಳಿಗೆ ಈ ಬದಲಾವಣೆಯು ಗಂಭೀರ ಕಳವಳ ಹುಟ್ಟುಹಾಕಿದೆ.