ಇಮ್ರಾನ್ ಸಾವಿನ ಪುಕಾರು ಹರಿದಾಡುತ್ತಿರುವ ಹಿನ್ನೆಲೆ
ಸೋದರ ಜೀವಂತ, ಆದರೆ ಚಿತ್ರಹಿಂಸೆ: ಖಾನಂ ಅಳಲುಇಸ್ಲಾಮಾಬಾದ್: ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಆರೋಗ್ಯ ಸ್ಥಿತಿಗತಿ ಕುರಿತು ಸಾಕಷ್ಟು ಪುಕಾರುಗಳು ಹರಿದಾಡುತ್ತಿರುವ ನಡುವೆಯೇ ಅವರು ಜೀವಂತವಾಗಿದ್ದಾರೆ ಎಂದು ದೃಢಪಟ್ಟಿದೆ. ಖುದ್ದು ಇಮ್ರಾನ್‌ರನ್ನು ಜೈಲಲ್ಲಿ ಭೇಟಿಯಾದ ಸಹೋದರಿ ಉಜ್ಮಾ ಖಾನಂ ಈ ಘೋಷಣೆ ಮಾಡಿದ್ದಾರೆ.
ಸಹೋದರಿ ಉಜ್ಮಾ ಖಾನಂಗೆ ಸಹೋದರನ ಭೇಟಿಗೆ ಪಾಕ್ ಸರ್ಕಾರ ಮಂಗಳವಾರ ಸಂಜೆ ಅವಕಾಶ ಕಲ್ಪಿಸಿತ್ತು. ಹಿನ್ನೆಲೆಯಲ್ಲಿ ಇಮ್ರಾನ್ ಭೇಟಿಯಾದ ಸೋದರಿ, ‘ನನ್ನ ತಮ್ಮ ಜೀವಂತವಾಗಿದ್ದಾನೆ’ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಖಾನಂ, ‘ ಇಮ್ರಾನ್ ಖಾನ್ ಅವರ ಆರೋಗ್ಯ ಸಂಪೂರ್ಣವಾಗಿ ಉತ್ತಮವಾಗಿದೆ. ಆದಾಗ್ಯೂ, ಅವರು ಅವರನ್ನು ಮಾನಸಿಕ ಹಿಂಸೆಗೆ ಒಳಪಡಿಸಲಾಗುತ್ತಿದೆ. ಇದೆಲ್ಲದಕ್ಕೂ ಸೇನಾ ಮುಖ್ಯಸ್ಥ ಆಸೀಂ ಮುನೀರ್ ಕಾರಣ’ ಎಂದು ಆರೋಪಿಸಿದರು.