-ಅವಿವಾಹಿತರ ದೇವರು ಹನುಮಾನ್: ತೆಲಂಗಾಣ ಸಿಎಂ ವ್ಯಂಗ್ಯ-ರೇವಂತ್ ಹೇಳಿಕೆಯಿಂದ ಹಿಂದೂ ಭಾವನೆಗೆ ಧಕ್ಕೆ: ವಿಪಕ್ಷ ಕಿಡಿಹೈದರಾಬಾದ್: ‘ಹಿಂದೂಗಳಲ್ಲಿ 3 ಕೋಟಿ ದೇವರುಗಳು ಏಕಿದ್ದಾರೆ? ಒಬ್ಬರು ಅವಿವಾಹಿತರಿಗಾದರೆ, ಇನ್ನೊಬ್ಬರು ಕೋಳಿ ಬಲಿ ಕೊಡಲು, ಮತ್ತೊಬ್ಬರು ಸಾರಾಯಿ ಕುಡಿಯಲು’ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದಕ್ಕೆ ಬಿಜೆಪಿ ಮತ್ತು ಬಿಆರ್‌ಎಸ್ ಆಕ್ರೋಶಕ್ಕೆ ಕಾರಣವಾಗಿದೆ.
ಬಿಜೆಪಿ, ಬಿಆರ್‌ಎಸ್ ಆಕ್ರೋಶ:
‘ರೇವಂತ್ ರೆಡ್ಡಿ ಹೇಳಿಕೆಯಿಂದ ಹಿಂದೂಗಳಿಗೆ ಅವಮಾನವಾಗಿದೆ. ಅವರು ತಕ್ಷಣ ಕ್ಷಮೆ ಯಾಚಿಸಬೇಕು ಮತ್ತು ಹೇಳಿಕೆಯನ್ನು ಹಿಂಪಡೆಯಬೇಕು’ ಎಂದು ಬಿಜೆಪಿ ನಾಯಕ ಚಿಕ್ಕೋಟಿ ಪ್ರವೀಣ್ ಆಗ್ರಹಿಸಿದ್ದಾರೆ. ‘ತಾವು ಯಾರಿಗಾಗಿ ಕೆಲಸ ಮಾಡುತ್ತಿದ್ದಾರೋ, ಅವರನ್ನು ಸಂತುಷ್ಟಗೊಳಿಸಲು ರೆಡ್ಡಿ ಈ ರೀತಿ ಮಾತಾಡುತ್ತಿದ್ದಾರೆ’ ಎಂದು ಬಿಆರ್‌ಎಸ್ ಮುಖಂಡ ರಾಕೇಶ್ ರೆಡ್ಡಿ ಅನುಗುಲ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ರೆಡ್ಡಿ, ‘ದೇವರ ಫೋಟೊ ಮುಂದೆ ಕೈಯೊಡ್ಡುವವರು ಭಿಕ್ಷುಕರೇ ಹೊರತು ಹಿಂದೂಗಳಲ್ಲ. ದೇವರು ಮಂದಿರದಲ್ಲಿರಬೇಕು. ಬಿಜೆಪಿಗರು ದೇವರ ಫೋಟೊವನ್ನು ಬೀದಿಯಲ್ಲಿಟ್ಟು ಮತ ಕೇಳುತ್ತಾರೆ’ ಎಂದಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.