ಈ ರೀತಿಯ ಸಾಧನೆ ಇತಿಹಾಸದಲ್ಲೇ 3ನೇ ಸಲ
19 ವರ್ಷದ ರೇಖೆ, ವಾರಾಣಸಿಯಲ್ಲಿ ದೇವವ್ರತ ಅವರು, ವೇದ ಶ್ಲೋಕಗಳು ಮತ್ತು ಪವಿತ್ರ ಶ್ಲೋಕಗಳನ್ನು ಒಂದೇ ಒಂದು ತಪ್ಪಿಲ್ಲದೆ ಪಠಿಸಿದ್ದಾರೆ. ಈ ರೀತಿಯ ಯಶಸ್ವಿ ದಂಡಕ್ರಮ ಪಾರಾಯಣ ಪಠಣ ಇತಿಹಾಸದಲ್ಲೇ 3ನೇ ಸಲ. ಅಲ್ಲದೆ, 200 ವರ್ಷ ಬಳಿಕ ಈ ಸಾಧನೆ ಮಾಡಲಾಗಿದೆ ಎಂದು ಹೇಳಲಾಗಿದೆ. ಅವರ ಈ ಪ್ರಯತ್ನಕ್ಕೆ ಶೃಂಗೇರಿ ಮಠ ಸಹಕಾರ ನೀಡಿದೆ.
ಮೋದಿ ಅಭಿನಂದನೆ:ಇದನ್ನು ವಾರಾಣಸಿ ಸಂಸದರೂ ಆಗಿರುವ ನರೇಂದ್ರ ಮೋದಿ ಶ್ಲಾಘಿಸಿದ್ದು, ‘ದೇವವ್ರತ ಮಹೇಶ್ ರೇಖೆ ಅವರನ್ನು ಮುಂದಿನ ಪೀಳಿಗೆಯವರು ಸ್ಮರಿಸುತ್ತಾರೆ. ಒಂದೇ ಒಂದು ತಪ್ಪಿಲ್ಲದೆ ಅವರು ಮಂತ್ರ ಪಠಿಸಿದ್ದಾರೆ. ಅವರು ನಮ್ಮ ಗುರು ಸಂಪ್ರದಾಯದ ಅತ್ಯುತ್ತಮ ಉದಾಹರಣೆ. ಕಾಶಿಯ ಸಂಸದನಾಗಿ, ಈ ಪವಿತ್ರ ನಗರದಲ್ಲಿ ಈ ಅಸಾಧಾರಣ ಸಾಧನೆ ನಡೆದಿರುವುದಕ್ಕೆ ನನಗೆ ಸಂತೋಷವಾಗಿದೆ’ ಎಂದು ಟ್ವೀಟ್ ಮಾಡಿದ್ದಾರೆ.