2ನೇ ದಿನವೂ ಲೋಕಸಭೆ ಕಲಾಪ ಭಂಗ

KannadaprabhaNewsNetwork |  
Published : Dec 03, 2025, 01:45 AM IST
ಕಲಾಪ | Kannada Prabha

ಸಾರಾಂಶ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಚರ್ಚೆಗೆ ಒತ್ತಾಯಿಸಿ ವಿರೋಧ ಪಕ್ಷಗಳು ಸತತ 2ನೇ ದಿನವೂ ನಿರಂತರ ಗದ್ದಲ ಎಬ್ಬಿಸಿದ ಕಾರಣ ಸಂಸತ್ತಿನ ಮುಂಗಾರು ಅಧಿವೇಶನದ 2ನೇ ದಿನದ ಕಲಾಪವೂ ಭಂಗವಾಗಿದೆ. ಹೀಗಾಗಿ ಕಲಾಪವನ್ನು ಬುಧವಾರಕ್ಕೆ ಮುಂದೂಡಲಾಯಿತು.

- ಮತಪಟ್ಟಿ ಪರಿಷ್ಕರಣೆ ಚರ್ಚೆಗೆ ವಿಪಕ್ಷ ಪಟ್ಟು, ಕೋಲಾಹಲ

- ಸಂಸತ್ತಿನ ಹೊರಗೆ ಖರ್ಗೆ, ರಾಹುಲ್‌, ಸೋನಿಯಾ ಪ್ರತಿಭಟನೆಪಿಟಿಐ ನವದೆಹಲಿಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಚರ್ಚೆಗೆ ಒತ್ತಾಯಿಸಿ ವಿರೋಧ ಪಕ್ಷಗಳು ಸತತ 2ನೇ ದಿನವೂ ನಿರಂತರ ಗದ್ದಲ ಎಬ್ಬಿಸಿದ ಕಾರಣ ಸಂಸತ್ತಿನ ಮುಂಗಾರು ಅಧಿವೇಶನದ 2ನೇ ದಿನದ ಕಲಾಪವೂ ಭಂಗವಾಗಿದೆ. ಹೀಗಾಗಿ ಕಲಾಪವನ್ನು ಬುಧವಾರಕ್ಕೆ ಮುಂದೂಡಲಾಯಿತು.ಇದೇ ವೇಳೆ, ರಾಜ್ಯಸಭೆಯಲ್ಲಿ ಕೆಲ ಕಾಲ ಕಲಾಪ ನಡೆದರೂ, ಎಸ್ಐಆರ್‌ ಚರ್ಚೆಗೆ ಆಗ್ರಹಿಸಿ ಪ್ರತಿಪಕ್ಷಗಳು ಗದ್ದಲ ಎಬ್ಬಿಸಿದವು. ಅನುಮತಿ ನಿರಾಕರಿಸಿದಾಗ ಸಭಾತ್ಯಾಗ ಮಾಡಿದವು.

ಬೆಳಗ್ಗೆ 11ಕ್ಕೆ ಲೋಕಸಭೆ ಕಲಾಪ ಆರಂಭವಾದ ನಂತರ 2 ಬಾರಿ ಕಲಾಪ ಮುಂದೂಡಲಾಯಿತು. ಕೊನೆಗೆ ಮಧ್ಯಾಹ್ನ 2 ಗಂಟೆಗೆ ಸಮಾವೇಶಗೊಂಡಾಗಲೂ ಕೋಲಾಹಲ ನಿಲ್ಲಲಿಲ್ಲ. ಹೀಗಾಗಿ ಬುಧವಾರಕ್ಕೆ ಕಲಾಪ ಮುಂದೂಡಲಾಯಿತು.ರಿಜಿಜು ತಿರುಗೇಟು:

ವಿಪಕ್ಷಗಳ ಬೇಡಿಕೆಗೆ ಪ್ರತಿಕ್ರಿಯಿಸಿದ ಸಂಸದೀಯ ಸಚಿವ ಕಿರಣ್‌ ರಿಜಿಜು, ‘ವಿಪಕ್ಷಗಳು ಹೇಳಿದಂತೆ ತಕ್ಷಣವೇ ಚರ್ಚೆ ಅಸಾಧ್ಯ. ಮತಪಟ್ಟಿ ಪರಿಷ್ಕರಣೆ ಚುನಾವಣಾ ಆಯೋಗದ ಪರಮಾಧಿಕಾರ. ಅದರ ಬಗ್ಗೆ ಚರ್ಚೆ ಬದಲು ಚುನಾವಣಾ ಸುಧಾರಣಾ ಕ್ರಮಗಳ ಬಗ್ಗೆ ಚರ್ಚೆಗೆ ಸರ್ಕಾರ ಸಿದ್ಧವಿದೆ’ ಎಂದರು.

ಹೊರಗೆ ಪ್ರತಿಭಟನೆ:

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಮಾಜಿ ಮುಖ್ಯಸ್ಥರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸೇರಿದಂತೆ ಹಲವಾರು ವಿಪಕ್ಷ ನಾಯಕರು ಮಂಗಳವಾರ ಸಂಸತ್ ಭವನದ ಹೊರಗೆ ಎಸ್‌ಐಆರ್ ವಿರುದ್ಧ ಪ್ರತಿಭಟನೆ ನಡೆಸಿ ಚುನಾವಣಾ ಸುಧಾರಣೆಗಳ ಕುರಿತು ಚರ್ಚೆಗೆ ಒತ್ತಾಯಿಸಿದರು.

==

ಡಿ.8, 9ಕ್ಕೆ ವಂದೇ ಮಾತರಂ, ಚುನಾವಣಾ ಸುಧಾರಣೆ ಚರ್ಚೆ

-ಸರ್ವಪಕ್ಷ ಸಭೆ ಬಳಿಕ ಸಮಯ ನಿಗದಿ

ಪಿಟಿಐ ನವದೆಹಲಿ‘ಸಂಸತ್ತಿನಲ್ಲಿ ರಾಷ್ಟ್ರೀಯ ಗೀತೆ ವಂದೇ ಮಾತರಂ ಕುರಿತಾದ ಚರ್ಚೆಗೆ ಡಿ.8ರಂದು ಹಾಗೂ ಚುನಾವಣಾ ಸುಧಾರಣೆಗಳ ಕುರಿತಾದ ಚರ್ಚೆಗೆ ಡಿ.9ರಂದು ಸಮಯ ನಿಗದಿಪಡಿಸಲಾಗಿದೆ’ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ತಿಳಿಸಿದ್ದಾರೆ.

ಎಸ್‌ಐಆರ್‌ (ಮತಪಟ್ಟಿ ಪರಿಷ್ಕರಣೆ) ಬಗ್ಗೆ ವಿಪಕ್ಷಗಳು ಚರ್ಚೆಗೆ ಆಗ್ರಹಿಸಿ ವಿಪಕ್ಷಗಳು 2 ದಿನದಿಂದ ಕೋಲಾಹಲ ಎಬ್ಬಿಸುತ್ತಿವೆ. ಹೀಗಾಗಿ ಲೋಕಸಭೆಯ ಸಭಾಧ್ಯಕ್ಷ ಓಂ ಬಿರ್ಲಾ ನೇತೃತ್ವದಲ್ಲಿ ನಡೆದ ಸರ್ವಪಕ್ಷ ಸಭೆ ಹಾಗೂ ವ್ಯಾಪಾರ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.ವಂದೇ ಮಾತರಂಗೆ 150 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆ ಡಿ.8ರಂದು ಮಧ್ಯಾಹ್ನ 12 ಗಂಟೆಯಿಂದ ಈ ಕುರಿತು ಚರ್ಚೆಗೆ ಅವಕಾಶ ನೀಡಲಾಗುವುದು. ಚರ್ಚೆಯನ್ನು ಪ್ರಧಾನಿ ನರೇಂದ್ರ ಮೋದಿ ಆರಂಭಿಸಲಿದ್ದಾರೆ. ಮತಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಹಾಗೂ ಚುನಾವಣಾ ಸುಧಾರಣೆಗಳ ಕುರಿತ ಚರ್ಚೆಯನ್ನು ಡಿ.9ರ ಮಧ್ಯಾಹ್ನ 12 ಗಂಟೆಯಿಂದ ನಡೆಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ನೆಟ್ಟಲ್ಲಿ ವಿಡಿಯೋ ಹಾಕಿ ವ್ಯಕ್ತಿಗೆ ಸಾವಿಗೆ ಕಾರಣ : ಕೇರಳದ ಶಿಮ್ಜಿತಾ ಸೆರೆ
ಲಿವ್ - ಇನ್ ಸಂಬಂಧ ಗಾಂಧರ್ವ ವಿವಾಹಕ್ಕೆ ಸಮ : ಕೋರ್ಟ್‌