ಮಾಸ್ಕೋ: ಯುರೋಪ್ ಯುದ್ಧದ ಮಾರ್ಗವನ್ನು ಆರಿಸಿಕೊಂಡರೆ ರಷ್ಯಾ ಕೂಡ ಸಂಘರ್ಷಕ್ಕೆ ಸಿದ್ಧವಾಗಿದೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಂಗಳವಾರ ಸವಾಲು ಹಾಕಿದ್ದಾರೆ.ಮಾಸ್ಕೋದಲ್ಲಿ ನಡೆದ ಹೂಡಿಕೆ ವೇದಿಕೆಯಲ್ಲಿ ಮಾತನಾಡಿದ ಅವರು, ಯುರೋಪಿಯನ್ ನಾಯಕರು ಶಾಂತಿಯುತ ವಿಧಾನವನ್ನು ತ್ಯಜಿಸಿ ಉಕ್ರೇನ್‌ನಲ್ಲಿ ನಿರಂತರ ಹಗೆತನವನ್ನು ಬೆಂಬಲಿಸುತ್ತಿದ್ದಾರೆ. ಅವರಿಗೆ ಶಾಂತಿ ಕಾರ್ಯಸೂಚಿ ಇಲ್ಲ, ಅವರು ಯುದ್ಧದ ಪರವಾಗಿದ್ದಾರೆ. ನಾವು ಯುರೋಪಿನೊಂದಿಗೆ ಯುದ್ಧಕ್ಕೆ ಹೋಗಲು ಯೋಜಿಸುತ್ತಿಲ್ಲ, ಆದರೆ ಯುರೋಪ್ ಬಯಸಿದರೆ ಮತ್ತು ಸಮರ ಪ್ರಾರಂಭಿಸಿದರೆ, ನಾವು ಈಗಲೇ ಸಿದ್ಧರಿದ್ದೇವೆ’ ಎಂದು ಗುಡುಗಿದರು.