ನವದೆಹಲಿ: ಭಾರತದೊಂದಿಗೆ ನೆರೆಯ ಚೀನಾದ ಸಂಬಂಧ ಸುಧಾರಿಸುತ್ತಿರುವ ಸಂಕೇತವಾಗಿ, ಅಲ್ಲಿನ ವಿದೇಶಾಂಗ ಸಚಿವ ವಾಂಗ್ ಯಿ ಅವರು 2 ದಿನಗಳ ಭಾರತ ಭೇಟಿ ಕೈಗೊಂಡಿದ್ದು, ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ಜತೆ ಮಾತುಕತೆ ನಡೆಸಿದ್ದಾರೆ.
ಈ ವೇಳೆ ಜೈಶಂಕರ್ ಅವರು ಉಭಯದೇಶಗಳ ನಡುವಿನ ಭಿನ್ನತೆಗಳು ಸಂಘರ್ಷಕ್ಕೆ ಕಾರಣವಾಗಬಾರದು ಎಂದಿದ್ದಾರೆ. ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ತ್ರಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದ ಸಭೆಯಲ್ಲಿ ಮಾತನಾಡಿದ ಜೈಶಂಕರ್, ‘ನಮ್ಮ ದ್ವಿಪಕ್ಷೀಯ ಸಂಬಂಧ, ಸಮಸ್ಯೆಗಳು, ಜಾಗತಿಕ ಸ್ಥಿತಿಗತಿ ಬಗ್ಗೆ ಮಾತನಾಡಲು ಇದು ಉತ್ತಮ ಅವಕಾಶ. ಉಭಯ ದೇಶಗಳ ಸಂಬಂಧವು ಕೆಲಕಾಲ ಹಳಸಿತ್ತಾದರೂ, ಈಗ ಒಟ್ಟಿಗೆ ಸಾಗಲು ಮುಂದಾಗಿವೆ. ಇದಕ್ಕೆ ಪರಸ್ಪರ ಗೌರವ, ಸೂಕ್ಷ್ಮತೆ ಮತ್ತು ಆಸಕ್ತಿ ಅಗತ್ಯ’ ಎಂದು ಹೇಳಿದ್ದಾರೆ.
ವಾಂಗ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್‌ರನ್ನೂ ಭೇಟಿಯಾಗಲಿದ್ದಾರೆ.