ಮುಂಬೈ: 2020ರಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದ ಸುಶಾಂತ್ ಸಿಂಗ್ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಉದ್ದವ್ ಠಾಕ್ರೆ ಪುತ್ರ ಶಾಸಕ ಆದಿತ್ಯ ಠಾಕ್ರೆ ಹಾಗೂ ಮತ್ತಿತರರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ದಿಶಾ ಸಾಲಿಯಾನ್ ತಂದೆ ಸತೀಶ ಸಾಲಿಯಾನ್ ಜಂಟಿ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಇತ್ತೀಚೆಗಷ್ಟೇ ಸತೀಶ್, ‘ನನ್ನ ಮಗಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ಕೆಲವು ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸಲು ರಾಜಕೀಯವಾಗಿ ಯತ್ನ ನಡೆಯುತ್ತಿದೆ. ಆದಿತ್ಯ ಠಾಕ್ರೆ ವಿರುದ್ಧ ಎಫ್‌ಐಆರ್ ದಾಖಲಿಸಬೇಕು. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು’ ಎಂದು ಹೈಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯು ಏಪ್ರಿಲ್ ಮೊದಲ ವಾರದಲ್ಲಿ ವಿಚಾರಣೆಗೆ ಬರುವ ಸಾಧ್ಯತೆಯಿದೆ. ಈ ಬೆನ್ನಲ್ಲೇ ಜಂಟಿ ಪೊಲೀಸ್ ಅಯುಕ್ತರಿಗೆ( ಅಪರಾಧ)ಲಿಖಿತ ದೂರು ನೀಡಿದ್ದಾರೆ.
ಪೈಜಾಮದ ದಾರ ಎಳೆದರ ರೇಪ್ ಅಲ್ಲ ತೀರ್ಪು ವಿರುದ್ಧ ವಿಚಾರಣೆಗೆ ಸುಪ್ರೀಂ ಅಸ್ತುನವದೆಹಲಿ: ‘ಅಪ್ರಾಪ್ತ ಬಾಲಕಿಯ ಸ್ತನಗಳನ್ನು ಹಿಡಿಯುವುದು ಮತ್ತು ಆಕೆಯ ಪೈಜಾಮದ ದಾರ ಎಳೆಯುವುದು ಅತ್ಯಾಚಾರ ಅಥವಾ ಅತ್ಯಾಚಾರಕ್ಕೆ ಯತ್ನಿಸುವ ಅಪರಾಧದ ಅಡಿಯಲ್ಲಿ ಬರುವುದಿಲ್ಲ’ ಎಂದು ಹೇಳಿದ ಅಲಹಾಬಾದ್ ಹೈಕೋರ್ಟ್‌ನ ತೀರ್ಪನ್ನು ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಳ್ಳಲು ನಿರ್ಧರಿಸಿದ್ದು, ಅದರ ವಿರುದ್ಧ ವಿಚಾರಣೆಗೆ ತೀರ್ಮಾನಿಸಿದೆ. ಈ ತೀರ್ಪಿನ ವಿರುದ್ಧ ವ್ಯಾಪಕ ಜನಾಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಈ ತೀರ್ಮಾನ ಕೈಗೊಂಡಿದೆ. ಇದಕ್ಕೂ ಮುನ್ನ ಅಲಹಾಬಾದ್ ಹೈಕೋರ್ಟ್ ಆದೇಶ ಪ್ರಶ್ನಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿತ್ತು.
ಡಿಕೆಶಿ ಸಂವಿಧಾನ ವಿವಾದ: ಲೋಕಸಭೆಯಲ್ಲೂ ರಿಜಿಜು ವಿರುದ್ಧ ಹಕ್ಕುಚ್ಯುತಿಪಿಟಿಐ ನವದೆಹಲಿ‘ಕರ್ನಾಟಕದಲ್ಲಿ ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ಜಾರಿ ಮಾಡುವುದಕ್ಕಾಗಿ ಸಂವಿಧಾನ ಬದಲಿಸಲು ಸಿದ್ಧ ಎಂದು ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ’ ಎಂದು ಆರೋಪಿಸಿದ್ದ ಕೇಂದ್ರ ಸಚಿವ ಕಿರಣ್ ರಿಜಿಜು ವಿರುದ್ಧ ಲೋಕಸಭೆಯಲ್ಲಿ ಕಾಂಗ್ರೆಸ್ ಸಚೇತಕ ಮಾಣಿಕ್ಯಂ ಟ್ಯಾಗೋರ್ ಹಕ್ಕುಚ್ಯುತಿ ನೋಟಿಸ್ ನೀಡಿದ್ದಾರೆ.
ಸ್ಪೀಕರ್ ಓಂ ಬಿರ್ಲಾ ಅವರಿಗೆ ಮಾಣಿಕ್ಯಂ ಹಕ್ಕುಚ್ಯುತಿ ನೋಟಿಸ್ ನೀಡಿದ್ದು, ’ರಿಜಿಜು ಹೇಳಿಕೆ ಸುಳ್ಳು’ ಎಂದಿದ್ದಾರೆ.ರಾಜ್ಯಸಭೆಯಲ್ಲಿ ಸೋಮವಾರವೇ ಕಾಂಗ್ರೆಸ್‌ನ ಜೈರಾಂ ರಮೇಶ್ ಹಕ್ಕುಚ್ಯುತಿ ನೋಟಿಸ್ ನೀಡಿದ್ದರು.ಶೇ.55ರಷ್ಟು ಅಮೆರಿಕದ ಉತ್ಪನ್ನಗಳ ತೆರಿಗೆ ಕಡಿತ?
ನವದೆಹಲಿ: ಏ.2ರಿಂದ ವಿವಿಧ ದೇಶಗಳಿಂದ ಆಮದಾಗುತ್ತಿರುವ ವಸ್ತುಗಳ ಮೇಲೆ ತೆರಿಗೆ ಹಾಕಲು ಅಮೆರಿಕ ಸಿದ್ಧವಾಗಿದ್ದು, ಇದರ ನಡುವೆಯೇ ಅಮೆರಿಕದಿಂದ ಆಮದಾಗುವ 1.9 ಲಕ್ಷ ಕೋಟಿ ಮೌಲ್ಯದ ಶೇ.55ರಷ್ಟು ವಸ್ತುಗಳ ಮೇಲೆ ತೆರಿಗೆ ಕಡಿತ ಮಾಡುವ ಸಾಧ್ಯತೆ ಇದೆ.ಈ ಶೇ.55ರಷ್ಟು ವಸ್ತುಗಳ ಮೇಲೆ ಸದ್ಯ ಶೇ.5ರಿಂದ ಶೇ.30ರ ವರೆಗೆ ತೆರಿಗೆ ವಿಧಿಸಲಾಗುತ್ತಿದೆ. ಇವುಗಳಲ್ಲಿ ಕೆಲ ವಸ್ತುಗಳ ಆಮದಿನ ಮೇಲಿನ ತೆರಿಗೆಯನ್ನು ಸಂಪೂರ್ಣವಾಗಿ ರದ್ದು ಮಾಡಿದರೆ, ಇನ್ನು ಹಲವು ವಸ್ತುಗಳ ಮೇಲಿನ ತೆರಿಗೆ ಭಾರೀ ಪ್ರಮಾಣದಲ್ಲಿ ಇಳಿಸುವ ನಿರೀಕ್ಷೆ ಇದೆ.ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತವೂ ಸೇರಿ ಹಲವು ದೇಶಗಳ ಮೇಲೆ ಏ.2ರಿಂದಲೇ ಅನ್ವಯವಾಗುವಂತೆ ಪ್ರತಿ ತೆರಿಗೆ ಹಾಕುವುದಾಗಿ ಘೋಷಿಸಿದ್ದಾರೆ. ಟ್ರಂಪ್ ಅವರ ಈ ಘೋಷಣೆ ಹಲವು ದೇಶಗಳ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದೆ, ಜತೆಗೆ ರಫ್ತು ಕುರಿತು ಆತಂಕವನ್ನೂ ಸೃಷ್ಟಿಸಿದೆ.ಭಾರತದ ಆಂತರಿಕ ವಿಶ್ಲೇಷಣೆ ಪ್ರಕಾರ ಅಮೆರಿಕದ ತೆರಿಗೆಯು ನಮ್ಮ ಶೇ.87ರಷ್ಟು ಅಮೆರಿಕದ ರಫ್ತಿನ ಮೇಲೆ ಪರಿಣಾಮ ಬೀರಲಿದೆ. ಇದರ ಒಟ್ಟಾರೆ ಮೌಲ್ಯ 5.65 ಲಕ್ಷ ಕೋಟಿ ರು. ಆಗಿದೆ.
ಇದನ್ನು ತಪ್ಪಿಸಲು ಅಮೆರಿಕದ ಶೇ.55ರಷ್ಟು ಆಮದಿನ ಮೇಲಿನ ತೆರಿಗೆಯನ್ನು ಕಡಿತ ಮಾಡಲು ಭಾರತ ಸರ್ಕಾರ ಚಿಂತನೆ ನಡೆಸುತ್ತಿದೆ. ಈ ತೆರಿಗೆ ಕಡಿತ ಪಸ್ತಾಪ ಇನ್ನೂ ಚರ್ಚಾ ಹಂತದಲ್ಲಿದೆ. ಭಾರತದ ಅಧಿಕಾರಿಗಳು ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಒಟ್ಟಾರೆ ಎಲ್ಲಾ ವಸ್ತುಗಳ ಮೇಲಿನ ತೆರಿಗೆ ಕಡಿತದ ಬದಲು ನಿರ್ದಿಷ್ಟ ಕ್ಷೇತ್ರಗಳ ಮೇಲೆ ಮತ್ತು ನಿರ್ದಿಷ್ಟ ವಸ್ತುಗಳ ಮೇಲಿನ ತೆರಿಗೆ ಕಡಿತ ಕುರಿತೂ ಚಿಂತನೆ ನಡೆಯುತ್ತಿದೆ.ಛತ್ತೀಸ್‌ಗಢ: ಎನ್‌ಕೌಂಟರ್‌ಗೆ 25 ಲಕ್ಷ ರು. ಇನಾಂ ಇದ್ದ 3 ನಕ್ಸಲರ ಹತ್ಯೆದಾಂತೇವಾಡ( ಛತ್ತೀಸ್‌ಗಢ): ಛತ್ತೀಸ್‌ಗಢದಲ್ಲಿ ಮಾವೋವಾದಿಗಳ ವಿರುದ್ಧದ ಕಾರ್ಯಾಚರಣೆ ಮುಂದುವರೆದಿದ್ದು, ತಲೆಗೆ 25 ಲಕ್ಷ ರು. ಇನಾಮು ಹೊಂದಿದ್ದ ನಕ್ಸಲ್ ಸೇರಿ ಮೂವರನ್ನು ಭದ್ರತಾ ಸಿಬ್ಬಂದಿ ಮಂಗಳವಾರ ಹೊಡೆದುರುಳಿಸಿದ್ದಾರೆ. ಈ ಮೂಲಕ ಈ ವರ್ಷದಲ್ಲಿ ಎನ್‌ಕೌಂಟರ್‌ಗೆ ಬಲಿಯಾದ ನಕ್ಸಲರ ಸಂಖ್ಯೆ 116ಕ್ಕ ಏರಿಕೆಯಾಗಿದೆದಾಂತೇವಾಡ ಮತ್ತು ಬಿಜಾಪುರ ಜಿಲ್ಲೆ ಗಡಿಯ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಗಿರ್ಸಾಪರ, ನೆಲಗೋಡ, ಬೋಡ್ಗಾ ಮತ್ತು ಇಕೆಲಿ ಗ್ರಾಮಗಳ ಕಾಡುಗಳಲ್ಲಿ ಮಾವೋವಾದಿಗಳ ಇರುವಿಕೆ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.ಈ ವೇಳೆ ನಕ್ಸಲರು ಮತ್ತು ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಮೂವರು ನಕ್ಸಲರು ಬಲಿಯಾಗಿದ್ದಾರೆ. ಈ ಪೈಕಿ ತಲೆಗೆ 25 ಲಕ್ಷ ರು. ಇನಾಮು ಹೊಂದಿದ್ದ ತಮಿಳುನಾಡು ಮೂಲದ ಸುಧಾಕರ್ ಅಲಿಯಾಸ್ ಮುರುಳಿ ಕೂಡ ಸೇರಿದ್ದಾನೆ ಎನ್ನಲಾಗಿದ್ದು, ಭದ್ರತಾ ಸಿಬ್ಬಂದಿ ಕಾರ್ಯಾಚರಣೆ ಮುಂದುವರೆಸಿದ್ದಾರೆ.