ಭಾರತದಿಂದ ಖಂಡಾಂತರ ಕ್ಷಿಪಣಿ ಧ್ವಂಸ ಪರೀಕ್ಷೆ ಯಶಸ್ವಿ

KannadaprabhaNewsNetwork |  
Published : Jun 14, 2026, 01:15 AM ISTUpdated : Jun 14, 2026, 06:54 AM IST
Missail

ಸಾರಾಂಶ

ಬ್ಯಾಲಿಸ್ಟಿಕ್‌ ಮತ್ತು ಖಂಡಾಂತರ ಕ್ಷಿಪಣಿಗಳ ಆಗಮನವನ್ನು ದೂರದಿಂದಲೇ ಗುರುತಿಸಿ ಅವುಗಳನ್ನು ಧ್ವಂಸ ಮಾಡುವ ಸಾಮರ್ಥ್ಯ ಹೊಂದಿರುವ ಬಹುಸ್ತರದ ಬ್ಯಾಲಿಸ್ಟಿಕ್‌ ಕ್ಷಿಪಣಿ ರಕ್ಷಣಾ ವ್ಯವಸ್ಥೆಯ (ಬಿಎಂಡಿ) ಸಾಮರ್ಥ್ಯ ಪರೀಕ್ಷೆಯನ್ನು ಭಾರತ ಯಶಸ್ವಿಯಾಗಿ ನಡೆಸಿದೆ.  

ನವದೆಹಲಿ: ಬ್ಯಾಲಿಸ್ಟಿಕ್‌ ಮತ್ತು ಖಂಡಾಂತರ ಕ್ಷಿಪಣಿಗಳ ಆಗಮನವನ್ನು ದೂರದಿಂದಲೇ ಗುರುತಿಸಿ ಅವುಗಳನ್ನು ಧ್ವಂಸ ಮಾಡುವ ಸಾಮರ್ಥ್ಯ ಹೊಂದಿರುವ ಬಹುಸ್ತರದ ಬ್ಯಾಲಿಸ್ಟಿಕ್‌ ಕ್ಷಿಪಣಿ ರಕ್ಷಣಾ ವ್ಯವಸ್ಥೆಯ (ಬಿಎಂಡಿ) ಸಾಮರ್ಥ್ಯ ಪರೀಕ್ಷೆಯನ್ನು ಭಾರತ ಯಶಸ್ವಿಯಾಗಿ ನಡೆಸಿದೆ.  

ಜೂ.10, 11ರಂದು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ.

ಈ ಮೂಲಕ ಇಂಥ ಸಾಮರ್ಥ್ಯ ಹೊಂದಿದ ರಷ್ಯಾ, ಅಮೆರಿಕ, ಚೀನಾದಂಥ ಕೆಲವೇ ಕೆಲವು ದೇಶಗಳ ಸಾಲಿಗೆ ಇದೀಗ ಭಾರತವೂ ಸೇರಿಕೊಂಡಿದೆ.ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ಅಭಿವೃದ್ಧಿಪಡಿಸಿರುವ ಈ ವ್ಯವಸ್ಥೆಯನ್ನು ಜೂ.10, 11ರಂದು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. 

ಆಗಸದಲ್ಲೇ ಹೊಡೆದುರುಳಿಸಬಲ್ಲದು

ಭೂವಾತಾವರಣದ ಒಳಗೆ (100 ಕಿ.ಮೀ) ಮತ್ತು ಭೂವಾತಾವರಣದ ಹೊರಗಿನಿಂದ ಬರುವ ಬ್ಯಾಲಿಸ್ಟಿಕ್‌ ಮತ್ತು ಖಂಡಾಂತರ ಕ್ಷಿಪಣಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಪರೀಕ್ಷಿಸಲು ಈ ಪ್ರಕ್ರಿಯೆ ನಡೆಸಲಾಗಿತ್ತು.ಬಿಎಂಡಿಯು ದೀರ್ಘಶ್ರೇಣಿಯ ಅಣ್ವಸ್ತ್ರ ಕ್ಷಿಪಣಿ ದಾಳಿಯ ಕುರಿತು ಮುನ್ನೆಚ್ಚರಿಕೆ ನೀಡಬಲ್ಲದು. ಶತ್ರುವಿಮಾನಗಳನ್ನು ಪತ್ತೆ ಹಚ್ಚಿ ಆಗಸದಲ್ಲೇ ಹೊಡೆದುರುಳಿಸಬಲ್ಲದು. 

ಇದು 2,000-5,000 ಕಿ.ಮೀ. ದೂರದಿಂದ ಹಾರಿಬರುವ ಕ್ಷಿಪಣಿಗಳನ್ನೂ ಪತ್ತೆ ಹಚ್ಚಿ ಹೊಡೆಯುವ ಸಾಮರ್ಥ್ಯ ಹೊಂದಿದೆ.ಮಧ್ಯಮ ಶ್ರೇಣಿಯ ನೌಕಾ ಹಡಗು ವಿರೋಧಿ ಕ್ಷಿಪಣಿಯ ಮೊದಲ ಹಾರಾಟ ಪರೀಕ್ಷೆಯನ್ನು ಸಹ ಯಶಸ್ವಿಯಾಗಿ ನಡೆಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಈ ಸಾಧನೆಗಾಗಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಡಿಆರ್‌ಡಿಒ ಅಧಿಕಾರಿಗಳನ್ನು ಅಭಿನಂದಿಸಿದ್ದಾರೆ.

ವೈಶಿಷ್ಟ್ಯ ಏನು?

- ಭಾರತದಿಂದ ಬಹುಸ್ತರದ ಬ್ಯಾಲಿಸ್ಟಿಕ್‌ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಸಾಮರ್ಥ್ಯ ಪರೀಕ್ಷೆ 

- ಅಣ್ವಸ್ತ್ರ ಕ್ಷಿಪಣಿಯನ್ನು ಮೊದಲೇ ಗುರುತಿಸಿ ನಾಶ ಮಾಡುವ ಯತ್ನದಲ್ಲಿ ಯಶಸ್ವಿ 

- 2,000-5,000 ಕಿ.ಮೀ. ದೂರದಿಂದ ಹಾರಿಬರುವ ಕ್ಷಿಪಣಿ ಪತ್ತೆ ಮಾಡಿ ಉಡೀಸ್‌ 

- ರಷ್ಯಾ, ಅಮೆರಿಕ, ಚೀನಾದಂಥ ಕೆಲವೇ ಕೆಲ ದೇಶಗಳ ಸಾಲಿಗೆ ಭಾರತ ಸೇರ್ಪಡೆ 

- ಸಾಧನೆಗೈದ ಡಿಆರ್‌ಡಿಒ ವಿಜ್ಞಾನಿಗಳ ಬಗ್ಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಪ್ರಶಂಸೆ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮೋದಿ ನಡುರಾತ್ರಿ ವಿಡಿಯೋ ಮಾಡಿದ್ದು, ಭಾಗವತ್‌ ಚರ್ಚೆಗೆ ಬಂದಿದ್ದ ನಮ್ಮಿಂದ: ದೀಪ್ಕೆ
ಬೆಂಗಳೂರಿನಲ್ಲಿ ಆ.9 ‘ತುಳುನಾಡ ಆಟಿ’ ಸಂಭ್ರಮ