‘ಪ್ರಧಾನಿ ನರೇಂದ್ರ ಮೋದಿ ಅವರು ನಡುರಾತ್ರಿ ಸೆಲ್ಫಿ ವಿಡಿಯೋ ಮಾಡಿದ್ದಕ್ಕೆ ಹಾಗೂ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಯುವಕರೊಂದಿಗೆ ಸಂವಾದ ನಡೆಸಲು ಮುಂದಾಗಿರುವುದಕ್ಕೆ, ವೃದ್ಧಿಸುತ್ತಿರುವ ಜೆನ್ ಝಿಗಳ ಪ್ರಭಾವವೇ ಕಾರಣ’ ಎಂದು ಸಿಜೆಪಿ ಸ್ಥಾಪಕ ಅಭಿಜೀತ್ ದೀಪ್ಕೆ ಹೇಳಿದ್ದಾರೆ.
ಛತ್ರಪತಿ ಸಂಭಾಜಿ ನಗರ: ‘ಪ್ರಧಾನಿ ನರೇಂದ್ರ ಮೋದಿ ಅವರು ನಡುರಾತ್ರಿ ಸೆಲ್ಫಿ ವಿಡಿಯೋ ಮಾಡಿದ್ದಕ್ಕೆ ಹಾಗೂ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಯುವಕರೊಂದಿಗೆ ಸಂವಾದ ನಡೆಸಲು ಮುಂದಾಗಿರುವುದಕ್ಕೆ, ವೃದ್ಧಿಸುತ್ತಿರುವ ಜೆನ್ ಝಿಗಳ ಪ್ರಭಾವವೇ ಕಾರಣ’ ಎಂದು ಸಿಜೆಪಿ ಸ್ಥಾಪಕ ಅಭಿಜೀತ್ ದೀಪ್ಕೆ ಹೇಳಿದ್ದಾರೆ.
‘ಜೆನ್-ಝಿಗಳು ಈ ದೇಶದ ಭವಿಷ್ಯ
‘ಜೆನ್-ಝಿಗಳು ಈ ದೇಶದ ಭವಿಷ್ಯ. ಅವರನ್ನು ನಿರ್ಲಕ್ಷಿಸಲಾಗದು ಎಂಬುದನ್ನು ಮನಗಾಣಲು ರಾಜಕೀಯ ಹಾಗೂ ಸಾಮಾಜಿಕ ನಾಯಕರು ತಡ ಮಾಡಿದರು. ಆದರೆ ಕೊನೆಗೂ ಅರ್ಥ ಮಾಡಿಕೊಂಡಿದ್ದಾರೆ. 70-80 ವರ್ಷದವರು ಜೆನ್-ಝಿಗಳನ್ನು ಪ್ರತಿನಿಧಿಸುವುದಿಲ್ಲ ಹಾಗೂ ಅವರಿಗಾಗಿ ಏನೂ ಮಾಡುವುದಿಲ್ಲ’ ಎಂದ ದೀಪ್ಕೆ, ದೇಶದ ಭವಿಷ್ಯದ ಬಗ್ಗೆ ಮಾತನಾಡಲು ಯುವಕರಿಗೆ ಅವಕಾಶ ಕೊಡಬೇಕು ಎಂದು ಅಭಿಪ್ರಾಯಪಟ್ಟರು.
ಸಿಜೆಪಿ ಕೋರ್ ಕಮಿಟಿ ಸಭೆ
ಸಿಜೆಪಿ ಕೋರ್ ಕಮಿಟಿ ಸಭೆ ಬಳಿಕ ಅದರ ಪಕ್ಷದ ಭವಿಷ್ಯದ ಬಗ್ಗೆ ಮಾತನಾಡಿದ ದೀಪ್ಕೆ, ‘ದೇಶಕ್ಕೀಗ ಒತ್ತಡದ ಗುಂಪುಗಳ ಅಗತ್ಯವಿದೆ. ಆ ಕೆಲಸವನ್ನು ನಾವು ಮಾಡುತ್ತೇವೆ. ರಾಜಕೀಯ ವ್ಯವಸ್ಥೆ, ನ್ಯಾಯಾಂಗ, ಮಾಧ್ಯಮ ಮತ್ತು ಚುನಾವಣಾ ಆಯೋಗದ ಮೇಲೆ ಜನರ ವಿಶ್ವಾಸ ತಗ್ಗುತ್ತಿದೆ. ಇವುಗಳಲ್ಲಿ ಹೊಣೆಗಾರಿಕೆ ಮತ್ತು ವಿಶ್ವಾಸಾರ್ಹತೆಯನ್ನು ಪುನಃ ಸ್ಥಾಪಿಸಲು ಶ್ರಮಿಸುತ್ತೇವೆ’ ಎಂದರು.

