ನವದೆಹಲಿ: ಮಧ್ಯಪ್ರಾಚ್ಯ ರಾಷ್ಟ್ರಗಳು ಯುದ್ಧದಲ್ಲಿ ವ್ಯಸ್ತರಾಗಿರುವ ಕಾರಣ ಒಣಹಣ್ಣುಗಳ ರಫ್ತಿನಲ್ಲಿ ವ್ಯತ್ಯಯವಾಗಿದ್ದು, ಬೆಂಗಳೂರು ಸೇರಿದಂತೆ ಭಾರತದ ಅನೇಕ ನಗರಗಳಲ್ಲಿ ಅವುಗಳ ಬೆಲೆಯಲ್ಲಿ ಶೇ.30ರಿಂದ 40ರಷ್ಟು ಏರಿಕೆಯಾಗಿದೆ. ಅರ್ಥಾತ್, ಕೆ.ಜಿ.ಗೆ ಸುಮಾರು 100-200 ರು, ಹೆಚ್ಚಳವಾಗಿದೆ. ಅತ್ತ ಪಾಕಿಸ್ತಾನದ ಜತೆ ಅಫ್ಘಾನಿಸ್ತಾನವು ಕದನದಲ್ಲಿ ತೊಡಗಿರುವುದೂ ಇದಕ್ಕೆ ಕೊಡುಗೆ ನೀಡಿದೆ.ಈ ಬಗ್ಗೆ ಹೈದ್ರಾಬಾದ್‌ನ ವ್ಯಾಪಾರಿಯೊಬ್ಬರು ಮಾತನಾಡಿದ್ದು, ‘ನಮ್ಮಲ್ಲಿ ಆಫ್ಘನ್, ಟರ್ಕಿ, ಇರಾನ್, ಈಜಿಪ್ಟ್ ಸೇರಿದಂತೆ ಹಲವು ದೇಶಗಳ ಡ್ರೈಫ್ರೂಟ್ಸ್ ಲಭ್ಯವಿವೆ. ಆದರೆ ಕಳೆದೆರಡು ವಾರಗಳಿಂದ ನಡೆಯುತ್ತಿರುವ ಯುದ್ಧದಿಂದಾಗಿ ನಮ್ಮ ಆಮದುಗಳು ಕೊಲ್ಲಿ ರಾಷ್ಟ್ರಗಳಲ್ಲೇ ಸಿಲುಕಿಕೊಂಡಿವೆ. ಅತ್ತ ಆಫ್ಘನ್‌ನಿಂದ ಬರುತ್ತಿದ್ದ ಹಣ್ಣುಗಳೂ ಬರುತ್ತಿಲ್ಲ’ ಎಂದು ಅಳಲು ತೋಡಿಕೊಂಡಿದ್ದಾರೆ. ಭಾರತವು ಒಣಹಣ್ಣುಗಳಿಗಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳನ್ನೇ ಅವಲಂಬಿಸಿದೆ. ಸದ್ಯ ಆ ಪ್ರದೇಶದಲ್ಲಿ ಉದ್ವಿಗ್ನತೆ ಮತ್ತು ಜಲಗಡಿ ನಿರ್ಬಂಧದಿಂದಾಗಿ ಅವುಗಳ ಆಮದು ಸಾಧ್ಯವಾಗುತ್ತಿಲ್ಲ. ವಾಯುಮಾರ್ಗದಲ್ಲಿ ತರಿಸಿಕೊಳ್ಳುವುದು ಅತಿ ದುಬಾರಿ.
ರಷ್ಯಾ ತೈಲ ಖರೀದಿಗೆ ಭಾರತಕ್ಕೆ ಟ್ರಂಪ್ ದುಂಬಾಲು: ಇರಾನ್ ವ್ಯಂಗ್ಯ
- ಹಿಂದೆ ಬೆದರಿಕೆ, ಈಗ ಓಲೈಕೆದುಬೈ: ‘ರಷ್ಯಾದಿಂದ ತೈಲ ಖರಿದಿಸಬೇಡಿ ಎಂದು ಹಲವು ತಿಂಗಳ ಕಾಲ ಅಮೆರಿಕವು ಭಾರತಕ್ಕೆ ಬೆದರಿಕೆ ಹಾಕುತ್ತಿತ್ತು. ಇದೀಗ ಅದೇ ಅಮೆರಿಕ ರಷ್ಯಾ ತೈಲ ಖರೀದಿಸುವಂತೆ ಭಾರತಕ್ಕೆ ದಂಬಾಲು ಬಿದ್ದಿದೆ’ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ವ್ಯಂಗ್ಯವಾಡಿದ್ದಾರೆ.ಇರಾನ್ ಜತೆಗಿನ 2 ವಾರಗಳ ಯುದ್ಧದ ಬಳಿಕ ಅಮೆರಿಕ ಇದೀಗ ಭಾರತವೂ ಸೇರಿ ವಿಶ್ವದ ಮುಂದೆ ರಷ್ಯಾದ ತೈಲ ಖರೀದಿ ಮಾಡುವಂತೆ ಬೇಡುತ್ತಿದೆ ಎಂದು ಅರಾಗ್ಚಿ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
==
ನೌಕರರ ಸಂಬಳದಲ್ಲಿ 30% ಕಟ್!