ದುಡಿಯುವ ಸ್ತ್ರೀಗೆ ಪತಿ ಜೀವನಾಂಶ ಕೊಡಬೇಕಿಲ್ಲ: ಅಲಹಾಬಾದ್‌ ‘ಹೈ’

KannadaprabhaNewsNetwork |  
Published : Dec 14, 2025, 03:00 AM IST
ಹೈ | Kannada Prabha

ಸಾರಾಂಶ

ವಿಚ್ಛೇದಿತ ಮಹಿಳೆಯು ದುಡಿಯುವ ಸಾಮರ್ಥ್ಯ ಹೊಂದಿದ್ದು, ಜೀವನ ನಡೆಸಲು ಶಕ್ತಳಾಗಿದ್ದರೆ ಪತಿಯಿಂದ ಜೀವನಾಂಶ ಪಡೆಯುವಂತಿಲ್ಲ ಎಂದು ಅಲಹಾಬಾದ್‌ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ಪತಿಗೆ ಹೆತ್ತವರ ಜವಾಬ್ದಾರಿ ಇರುತ್ತದೆ: ಕೋರ್ಟ್‌

ಲಖನೌ: ವಿಚ್ಛೇದಿತ ಮಹಿಳೆಯು ದುಡಿಯುವ ಸಾಮರ್ಥ್ಯ ಹೊಂದಿದ್ದು, ಜೀವನ ನಡೆಸಲು ಶಕ್ತಳಾಗಿದ್ದರೆ ಪತಿಯಿಂದ ಜೀವನಾಂಶ ಪಡೆಯುವಂತಿಲ್ಲ ಎಂದು ಅಲಹಾಬಾದ್‌ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ಅಂಕಿತ್‌ ಸಾಹಾ ಎಂಬ ವ್ಯಕ್ತಿ ಪತ್ನಿಗೆ ವಿಚ್ಛೇದನ ನೀಡಿದ್ದರು. ಆಕೆ ಸ್ನಾತಕೋತ್ತರ ಪದವೀಧರಳಾಗಿದ್ದು, ಮಾಸಿಕ 36,000 ಸಂಬಳ ಪಡೆಯುತ್ತಿದ್ದಳು. ಆದರೆ ಅಫಿಡವಿಟ್‌ನಲ್ಲಿ ಇದನ್ನು ಮರೆಮಾಚಿ, ಜೀವನಾಂಶಕ್ಕೆ ಬೇಡಿಕೆಯಿಟ್ಟಿದ್ದಳು. ಈ ಪ್ರಕರಣದ ವಿಚಾರಣೆ ನಡೆಸಿದ ಗೌತಮಬುದ್ಧ ನಗರದ ಕೌಟುಂಬಿಕ ಕೋರ್ಟ್‌, ಪತಿ ಜೀವನಾಂಶ ಕೊಡುವುದು ಕಡ್ಡಾಯ ಎಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸಾಹಾ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಈ ಪ್ರಕರಣದ ತೀರ್ಪು ಪ್ರಕಟಿಸಿದ ಹೈಕೋರ್ಟ್‌, ‘ಮಹಿಳೆ ತಿಂಗಳಿಗೆ 36,000 ರು. ಗಳಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾಳೆ. ಬೇರೆ ಯಾವುದೇ ಹೊಣೆಗಾರಿಕೆ ಇಲ್ಲದ ಹೆಂಡತಿಗೆ ಅಂತಹ ಮೊತ್ತವು ಅತ್ಯಲ್ಪ ಎಂದು ಹೇಳಲಾಗುವುದಿಲ್ಲ. ಆದರೆ ಪುರುಷನು ತನ್ನ ವಯಸ್ಸಾದ ಹೆತ್ತವರನ್ನು ಮತ್ತು ಇತರ ಸಾಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸುವ ಜವಾಬ್ದಾರಿ ಹೊಂದಿರುತ್ತಾನೆ. ಹಾಗಾಗಿ ಆತ ಜೀವನಾಂಶ ನೀಡುವ ಅಗತ್ಯವಿಲ್ಲ’ ಎಂದಿದೆ.

ಜೊತೆಗೆ, ಕುಟುಂಬ ನ್ಯಾಯಾಲಯದ ತೀರ್ಪನ್ನು ಕಟುವಾಗಿ ಪ್ರಶ್ನಿಸಿ, ಪತಿ ಸಲ್ಲಿಸಿದ ಕ್ರಿಮಿನಲ್ ಪರಿಷ್ಕರಣಾ ಅರ್ಜಿಯನ್ನು ಮಾನ್ಯ ಮಾಡಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ