ನವದೆಹಲಿ: ಮಹಿಳೆಯರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ ದಿಲೀಪ್ ಘೋಷ್ ಮತ್ತು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೇತ್ ಅವರಿಗೆ ಚುನಾವಣಾ ಆಯೋಗ ಶೋಕಾಸ್ ನೋಟಿಸ್ ನೀಡಿದೆ.
ಚುನಾವಣಾ ಆಯೋಗವು ಇಬ್ಬರ ಹೇಳಿಕೆಯು ಕೀಳು ಅಭಿರುಚಿಯುಳ್ಳದ್ದಾಗಿದೆ ಮತ್ತು ಘನತೆಗೆ ಕುತ್ತು ತರುತ್ತವೆ ಎಂಬುದಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಅವರ ಹೇಳಿಕೆಯನ್ನು ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಎಂದು ಪರಿಗಣಿಸಿ ಮಾ.29ರ ಸಂಜೆಯೊಳಗೆ ವಿವರಣೆ ನೀಡುವಂತೆ ಶೋಕಾಸ್ ನೋಟಿಸ್ ನೀಡಿದೆ.
ದಿಲೀಪ್ ಘೋಷ್ ಮಮತಾ ಬ್ಯಾನರ್ಜಿ ತಂದೆ ಯಾರು ಎಂದು ಕೇಳಿದ್ದರು, ಇನ್ನು ಸುಪ್ರಿಯಾ, ‘ಮಂಡಿ ಲೋಕಸಭೆ ಕ್ಷೇತ್ರದಲ್ಲಿ ನಟಿ, ಬಿಜೆಪಿ ಅಭ್ಯರ್ಥಿ ಕಂಗನಾ ರೇಟ್ ಎಷ್ಟು?’ ಎಂದು ಪ್ರಶ್ನಿಸಿದ್ದರು.