ನವದೆಹಲಿ: 2000 ಕೋಟಿ ರು. ಮೌಲ್ಯದ ಮಾದಕ ವಸ್ತುಗಳನ್ನು ವಿದೇಶಗಳಿಗೆ ಅಕ್ರಮ ಸಾಗಾಟ ಮಾಡಿದ್ದ ಡಿಎಂಕೆ ಪಕ್ಷದ ಉಚ್ಚಾಟಿತ ಮುಖಂಡ ಮತ್ತು ತಮಿಳು ಚಿತ್ರ ನಿರ್ಮಾಪಕ ಸಾದಿಕ್ ಜಾಫರ್ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿರುವುದಾಗಿ ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಸಾದಿಕ್ ಜೊತೆ ವ್ಯವಹರಿಸಿದ್ದ ತಮಿಳು ಮತ್ತು ಹಿಂದಿ ಚಿತ್ರರಂಗದ ಫೈನಾನ್ಸರ್‌ಗಳು ಮತ್ತು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವಲ್ಲಿ ಸಹಕರಿಸಿದ ಕೆಲ ವ್ಯಕ್ತಿಗಳ ಕುರಿತೂ ಇಡಿ ನಿಗಾ ಇರಿಸಿದೆ ಎನ್ನಲಾಗಿದೆ. ಸಾದಿಕ್ ಜೊತೆಗೆ 7 ಲಕ್ಷ ರು. ಅಕ್ರಮ ವಹಿವಾಟು ನಡೆಸಿದ ಸಂಬಂಧ ಹಿರಿಯ ಡಿಎಂಕೆ ನೇತಾರರೊಬ್ಬರನ್ನು ಶೀಘ್ರದಲ್ಲೇ ವಿಚಾರಣೆಗೆ ಕರೆಯಲು ಇಡಿ ಸಮನ್ಸ್ ನೀಡಲಿದೆ ಎಂದು ಮೂಲಗಳು ತಿಳಿಸಿವೆ.