ಅಮೆಜಾನ್, ಫ್ಲಿಪ್‌ಕಾರ್ಟ್ ಸೇರಿದಂತೆ ಇತರೆ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ವಸ್ತುಗಳನ್ನು ಮಾರಾಟ ಮಾಡುವ ಕೆಲವು ಪ್ರಮುಖ ಮಾರಾಟಗಾರರ (ವೆಂಡರ್) ಮೇಲೆ ಗುರುವಾರ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ಬೆಂಗಳೂರು ಸೇರಿ ದೇಶದ 5 ನಗರಗಳಲ್ಲಿ ದಾಳಿ ಮಾಡಿ ಶೋಧ ನಡೆಸಿದ್ದಾರೆ.
ನವದೆಹಲಿ: ಅಮೆಜಾನ್, ಫ್ಲಿಪ್‌ಕಾರ್ಟ್ ಸೇರಿದಂತೆ ಇತರೆ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ವಸ್ತುಗಳನ್ನು ಮಾರಾಟ ಮಾಡುವ ಕೆಲವು ಪ್ರಮುಖ ಮಾರಾಟಗಾರರ (ವೆಂಡರ್) ಮೇಲೆ ಗುರುವಾರ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ಬೆಂಗಳೂರು ಸೇರಿ ದೇಶದ 5 ನಗರಗಳಲ್ಲಿ ದಾಳಿ ಮಾಡಿ ಶೋಧ ನಡೆಸಿದ್ದಾರೆ. ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ರಾಜಧಾನಿ ದೆಹಲಿ, ಬೆಂಗಳೂರು, ಗುರುಗ್ರಾಮ್, ಹೈದರಾಬಾದ್ ನಗರದ 19 ಸ್ಥಳಗಳಲ್ಲಿ ಅಧಿಕಾರಿಗಳು ಶೋಧ ನಡೆಸಿದ್ದಾರೆ.
ವಿದೇಶಿ ಬಂಡವಾಳ ನಿಯಮ (ಎಫ್‌ಡಿಐ) ನಿಯಮವನ್ನು ಉಲ್ಲಂಘಿಸಿದ್ದು, ಅವ್ಯವಹಾರಗಳಲ್ಲಿ ತೊಡಿದ್ದಾರೆ ಎಂದು ಆರೋಪ ಕೇಳಿಬಂದ ಬೆನ್ನಲ್ಲೇ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಅಡಿ (ಎಫ್‌ಇಎಂಎ) ಈ ದಾಳಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಹಾಗೂ ಮಾರಾಟಗಾರರ ಬಳಿಯ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಆದರೆ ದಾಳಿಗೆ ಒಳಗಾದವರ ಹೆಸರನ್ನು ಇ.ಡಿ. ಬಹಿರಂಗಪಡಿಸಿಲ್ಲ.
ದೀಪಾವಳಿ ಹಬ್ಬದ ಋುತುವಿನಲ್ಲಿ ಇ-ಕಾಮರ್ಸ್ ಮೂಲಕ 1 ಲಕ್ಷ ಕೋಟಿ ರು. ವಹಿವಾಟು ನಡೆದಿತ್ತು.
ಟ್ರೂ ಕಾಲರ್‌ಗೆ ಐಟಿ ಬಿಸಿ
ನವದೆಹಲಿ: ಜಾಗತಿಕ ಕಾಲರ್ ಐಡಿ ವೇದಿಕೆಯಾದ ಸ್ವೀಡನ್ ಮೂಲದ ಟ್ರೂ ಕಾಲರ್‌ನ ಭಾರತದ ಕಚೇರಿಗಳಲ್ಲಿ ಗುರುವಾರ ಆದಾಯ ತೆರಿಗೆ ಇಲಾಖೆ (ಐಟಿ), ತೆರಿಗೆ ವಂಚನೆ ಪ್ರಕರಣದಲ್ಲಿ ಶೋಧ ನಡೆಸಿದೆ.ಟ್ರೂ ಕಾಲರ್‌ನ ಕಚೇರಿಗಳು ಬೆಂಗಳೂರು ಸೇರಿದಂತೆ ಮುಂಬೈ ಹಾಗೂ ಗುರುಗ್ರಾಮದಲ್ಲಿವೆ.
ಇಲ್ಲಿ ದಾಳಿ ನಡೆದಿದೆ ಎನ್ನಲಾಗಿದೆ.‘ವರ್ಗಾವಣೆ ಬೆಲೆಗೆ ಸಂಬಂಧಿಸಿದ ತೆರಿಗೆ ವಂಚನೆ ಪ್ರಕರಣಗಳ ದಾಖಲೆ ಪರಿಶೀಲಿಸಿ ವಿವರವಾದ ಮಾಹಿತಿ ಸಂಗ್ರಹಿಸಲು ಶೋಧ ಕೈಗೊಂಡಿದ್ದೇವೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಟ್ರೂ ಕಾಲರ್, ‘ನ.7ರಂದು ಭಾರತದಲ್ಲಿರುವ ನಮ್ಮ ಕಚೇರಿಗಳಿಗೆ ತೆರಿಗೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿದರು. ನಾವು ನಮ್ಮ ಕಚೇರಿಗಳಲ್ಲಿ ಅಧಿಕಾರಿಗಳೊಂದಿಗೆ ತನಿಖೆಯಲ್ಲಿ ಸಂಪುರ್ಣವಾಗಿ ಸಹಕರಿಸುತ್ತಿದ್ದೇವೆ. ಈ ಬಗ್ಗೆ ನಮಗೆ ಮೊದಲೇ ಮಾಹಿತಿ ನೀಡಿರಲಿಲ್ಲ. ಸದ್ಯ ಅಧಿಕಾರಿಗಳ ಧೃಡೀಕರಣಕ್ಕೆ ಕಾಯುತ್ತಿದ್ದೇವೆ’ ಎಂದು ಹೇಳಿದೆ.