ಬೆಟ್ಟಿಂಗ್ ಕೇಸಲ್ಲಿ ಯುವಿ, ಧವನ್‌, ರೈನಾ, ಉತ್ತಪ್ಪ ಆಸ್ತಿ ಶೀಘ್ರ ಜಪ್ತಿ

KannadaprabhaNewsNetwork |  
Published : Sep 29, 2025, 01:03 AM IST
ಉತ್ತಪ್ಪ | Kannada Prabha

ಸಾರಾಂಶ

ಆನ್‌ಲೈನ್‌ ಬೆಟ್ಟಿಂಗ್‌ ಮತ್ತು ಗೇಮಿಂಗ್‌ ಪ್ಲಾಟ್‌ಫಾರ್ಮ್‌ಗೆ ಸಂಬಂಧಿಸಿ ಜಾರಿ ನಿರ್ದೇಶನಾಲಯ(ಇ.ಡಿ.)ವು ಕೆಲ ಕ್ರೀಡಾಪಟುಗಳು ಹಾಗೂ ನಟ-ನಟಿಯರ ನೂರಾರು ಕೋಟಿ ಆಸ್ತಿಯನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಮುಟ್ಟುಗೋಲು ಹಾಕುವ ಸಾಧ್ಯತೆ ಇದೆ.

 ನವದೆಹಲಿ: ಆನ್‌ಲೈನ್‌ ಬೆಟ್ಟಿಂಗ್‌ ಮತ್ತು ಗೇಮಿಂಗ್‌ ಪ್ಲಾಟ್‌ಫಾರ್ಮ್‌ಗೆ ಸಂಬಂಧಿಸಿ ಜಾರಿ ನಿರ್ದೇಶನಾಲಯ(ಇ.ಡಿ.)ವು ಕೆಲ ಕ್ರೀಡಾಪಟುಗಳು ಹಾಗೂ ನಟ-ನಟಿಯರ ನೂರಾರು ಕೋಟಿ ಆಸ್ತಿಯನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಮುಟ್ಟುಗೋಲು ಹಾಕುವ ಸಾಧ್ಯತೆ ಇದೆ.

ಈ ಪ್ರಕರಣ ಸಂಬಂಧ ಕಳೆದ ಕೆಲ ದಿನಗಳಿಂದ ಜಾರಿ ನಿರ್ದೇಶನಾಲಯವು ಕ್ರಿಕೆಟರ್‌ಗಳಾದ ಯುವರಾಜ್‌ ಸಿಂಗ್‌, ಸುರೇಶ್‌ ರೈನಾ, ರಾಬಿನ್‌ ಉತ್ತಪ್ಪ, ಶಿಖರ್‌ ಧವನ್‌, ನಟರಾದ ಸೋನು ಸೂದ್‌, ಮಿಮಿ ಚಕ್ರವರ್ತಿ, ಅಂಕುಶ್‌ ಹಝಾರಾ ಅವರನ್ನು ತನಿಖೆಗೆ ಒಳಪಡಿಸಿದೆ. ಅಲ್ಲದೆ ಕೆಲ ಆನ್‌ಲೈನ್‌ ಇನ್‌ಫ್ಲ್ಯೂಯೆನ್ಸರ್‌ಗಳನ್ನು ಈ ಕುರಿತು ಪ್ರಶ್ನೆ ಮಾಡಲಾಗಿದೆ. ನಟಿ ಊರ್ವಶಿ ರೌಟೇಲಾ ಅವರು 1ಎಕ್ಸ್‌ಬೆಟ್‌ನ ಭಾರತದ ರಾಯಭಾರಿಯಾಗಿದ್ದು, ಅವರಿಗೂ ಸಮನ್ಸ್‌ ನೀಡಲಾಗಿದೆ. ಆದರೆ, ವಿದೇಶದಲ್ಲಿರುವ ಕಾರಣ ಆಕೆ ಈವರೆಗೆ ಹೇಳಿಕೆ ನೀಡಿಲ್ಲ ಎನ್ನಲಾಗಿದೆ.

ಕುರಕಾವೋದಲ್ಲಿ ನೋಂದಣಿಯಾಗಿರುವ ‘1ಎಕ್ಸ್‌ಬೆಟ್‌’ ಕಂಪನಿಯು ಅಂತಾರಾಷ್ಟ್ರೀಯಮಟ್ಟದಲ್ಲಿ ಬೆಟ್ಟಿಂಗ್ ವ್ಯವಹಾರ ನಡೆಸುತ್ತಿದೆ. ಈ ಬೆಟ್ಟಿಂಗ್‌ ವೆಬ್‌ಸೈಟ್‌ ಹಾಗೂ ಆ್ಯಪ್‌ ಕುರಿತ ತನಿಖೆ ವೇಳೆ ಇದರ ಪರ ಪ್ರಚಾರಕ್ಕಾಗಿ ಹಲವು ಸೆಲೆಬ್ರಿಟಿಗಳು ಸಂಭಾವನೆ ಪಡೆದಿರುವುದು ಮತ್ತು ಆ ಸಂಭಾವನೆಯಲ್ಲಿ ಆಸ್ತಿಗಳನ್ನು ಖರೀದಿಸಿರವುದು ಬೆಳಕಿಗೆ ಬಂದಿತ್ತು. ಅಕ್ರಮ ಹಣ ವರ್ಗಾವಣೆ ಕಾನೂನಿನಡಿ ಈ ಆಸ್ತಿಯನ್ನು ಕ್ರಿಮಿನಲ್‌ ಚಟುವಟಿಕೆಗಳಿಂದ ಗಳಿಸಿದ ಆಸ್ತಿ ಎಂಬುದಾಗಿ ಪರಿಗಣಿಸಲು ಅ‍ವಕಾಶವಿದೆ ಎಂದು ಮೂಲಗಳು ತಿಳಿಸಿವೆ.

ಹೀಗಾಗಿ ಜಾರಿ ನಿರ್ದೇಶನಾಲಯವು ಶೀಘ್ರದಲ್ಲೇ ಹಲವು ಕ್ರೀಡಾಪಟುಗಳು ಹಾಗೂ ಸೆಲೆಬ್ರಿಟಿಗಳ ಯುಎಇ ಸೇರಿ ವಿದೇಶದಲ್ಲಿರುವ ಆಸ್ತಿಗಳನ್ನೂ ಜಪ್ತಿ ಮಾಡಿಕೊಳ್ಳುವ ನಿರೀಕ್ಷೆ ಇದೆ. ಈ ಆಸ್ತಿಗಳ ಪ್ರಮಾಣೀಕರಣ ಹಾಗೂ ಮೌಲ್ಯ ನಿರ್ಣಯ ಕಾರ್ಯ ಈಗಾಗಲೇ ನಡೆಯುತ್ತಿದೆ. ಜಪ್ತಿ ಆದೇಶ ಹೊರಬಿದ್ದ ಬಳಿಕ ನ್ಯಾಯಾಲಯಕ್ಕೆ ಆ ಆಸ್ತಿಗಳನ್ನು ಮುಟ್ಟುಗೋಲು ಹಾಕಲು ಜಾರ್ಜ್‌ಶೀಟ್‌ ಹಾಕಲಾಗುತ್ತದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಅಮೆರಿಕಕ್ಕೆ ತಲೆನೋವಾದ ಇರಾನ್‌ ಅಗ್ಗದ ಅಸ್ತ್ರಗಳು
ನಾಯಕನಿಲ್ಲದ ಇರಾನ್‌ಗೆ ನೇತೃತ್ವ ಯಾರದ್ದು?