ಸಂಸತ್ ಎಲೆಕ್ಷನ್‌ಗೆ ಈ ಸಲ ಎಐ ಬಳಕೆ!

KannadaprabhaNewsNetwork |  
Published : Feb 24, 2024, 02:34 AM ISTUpdated : Feb 24, 2024, 08:46 AM IST
ಚುನಾವಣೆ | Kannada Prabha

ಸಾರಾಂಶ

ಮುಕ್ತ ಹಾಗೂ ಪಾರದರ್ಶಕ ಲೋಕಸಭಾ ಚುನಾವಣೆಗಾಗಿ ಇದೇ ಮೊದಲ ಬಾರಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಬಳಸಿಕೊಳ್ಳಲು ಚುನಾವಣಾ ಆಯೋಗ ಮುಂದಾಗಿದೆ.

ನವದೆಹಲಿ: ಮುಕ್ತ ಹಾಗೂ ಪಾರದರ್ಶಕ ಲೋಕಸಭಾ ಚುನಾವಣೆಗಾಗಿ ಇದೇ ಮೊದಲ ಬಾರಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಬಳಸಿಕೊಳ್ಳಲು ಚುನಾವಣಾ ಆಯೋಗ ಮುಂದಾಗಿದೆ.

‘ಸುಗಮ ಚುನಾವಣೆಗಾಗಿ ಕೃತಕ ಬುದ್ಧಿಮತ್ತೆಯನ್ನು ಆಯೋಗ ಬಳಸಲು ನಿರ್ಧರಿಸಿದೆ. ಇದಕ್ಕಾಗಿ ಪ್ರತ್ಯೇಕ ಎಐ ವಿಭಾಗವನ್ನೇ ಚುನಾವಣಾ ಆಯೋಗದಡಿ ತೆರೆಯಲಾಗುತ್ತದೆ. 

ಸಾಮಾಜಿಕ ಜಾಲತಾಣಗಳು ಹಾಗೂ ಡಿಜಿಟಲ್‌ ಮಾಧ್ಯಮಗಳಲ್ಲಿ ಪ್ರಕಟವಾಗುವ ತಪ್ಪು ಮಾಹಿತಿಗಳನ್ನು ಪತ್ತೆ ಹಚ್ಚಿ, ಅದನ್ನು ತೆಗೆದುಹಾಕುವ ಕೆಲಸವನ್ನು ಈ ಎಐ ವಿಭಾಗ ಮಾಡಲಿದೆ’ ಎಂದು ಮೂಲಗಳು ಹೇಳಿವೆ.

ಇದರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಭಾಷಣವನ್ನು ತೆಗೆದುಹಾಕುವ ಪ್ರಕ್ರಿಯೆ ಅತ್ಯಂತ ವೇಗವಾಗಿರಲಿದೆ. 

ಒಂದು ವೇಳೆ, ಅಭ್ಯರ್ಥಿಗಳು ಪದೇ ಪದೇ ನಿಯಮ ಉಲ್ಲಂಘಿಸಿದರೆ ಅವರ ಸಾಮಾಜಿಕ ಜಾಲತಾಣಗಳ ಖಾತೆಯನ್ನೇ ಅಮಾನತು ಅಥವಾ ಬ್ಲಾಕ್‌ ಮಾಡುವಂತಹ ಕಠಿಣ ಕ್ರಮಕ್ಕೂ ಆಯೋಗ ಮುಂದಾಗಲಿದೆ ಎಂದು ಮೂಲಗಳು ತಿಳಿಸಿವೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ರಾಜಕಾರಣಕ್ಕೆ ಪೂರ್ಣವಿರಾಮ ಇಲ್ಲ: ಪ್ರಧಾನಿ
ಸರ್ವಾಧಿಕಾರಿ ಕಿಮ್‌ ಜೊಂಗ್‌ಗೆ ಎಲೆಕ್ಷನಲ್ಲಿ ಶೇ.99.93 ಮತ