ನ.20ಕ್ಕೆ ಮಹಾರಾಷ್ಟ್ರ ನ.13, 20ರಂದು ಜಾರ್ಖಂಡ ಎಲೆಕ್ಷನ್‌ : ಕೇಂದ್ರ ಚುನಾವಣಾ ಆಯೋಗ

KannadaprabhaNewsNetwork |  
Published : Oct 16, 2024, 12:36 AM ISTUpdated : Oct 16, 2024, 06:59 AM IST
ಚುನಾವಣಾ ಆಯೋಗ | Kannada Prabha

ಸಾರಾಂಶ

ಬಿಜೆಪಿ ಹಾಗೂ ಕಾಂಗ್ರೆಸ್‌ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆ ಆಗಿರುವ ಮಹಾರಾಷ್ಟ್ರ, ಜಾರ್ಖಂಡ್‌ ವಿಧಾನಸಭೆಗೆ ಬರುವ ನವೆಂಬರ್‌ ತಿಂಗಳಲ್ಲಿ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ.

 ನವದೆಹಲಿ : ಬಿಜೆಪಿ ಹಾಗೂ ಕಾಂಗ್ರೆಸ್‌ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆ ಆಗಿರುವ ಮಹಾರಾಷ್ಟ್ರ, ಜಾರ್ಖಂಡ್‌ ವಿಧಾನಸಭೆಗೆ ಬರುವ ನವೆಂಬರ್‌ ತಿಂಗಳಲ್ಲಿ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ. ಇದರ ಜೊತೆಜೊತೆಗೇ, ಕರ್ನಾಟಕದ 3 ಸೇರಿ ವಿವಿಧ ರಾಜ್ಯಗಳ 48 ವಿಧಾನಸಭೆ ಉಪಚುನಾವಣೆಗಳು ಹಾಗೂ ಕೇರಳದ ವಯನಾಡು, ಮಹಾರಾಷ್ಟ್ರದ ನಾಂದೇಡ್‌ ಲೋಕಸಭಾ ಕ್ಷೇತ್ರಗಳಿಗೂ ಉಪಚುನಾವಣೆ ದಿನಾಂಕಗಳನ್ನು ಚುನಾವಣಾ ಆಯೋಗ ಮಂಗಳವಾರ ಪ್ರಕಟಿಸಿದೆ.

ಈ ಪ್ರಕಾರ, 288 ಕ್ಷೇತ್ರಗಳ ಮಹಾರಾಷ್ಟ್ರದಲ್ಲಿ ಏಕ ಹಂತದಲ್ಲಿ- ಅಂದರೆ ನ.20ಕ್ಕೆ ಮತದಾನ ನಡೆಯಲಿದೆ. 81 ಕ್ಷೇತ್ರಗಳ ಜಾರ್ಖಂಡ್ ಚುನಾವಣೆಯು ನ.13 ಮತ್ತು ನ.20ರಂದು 2 ಹಂತಗಳಲ್ಲಿ ನಡೆಯಲಿದೆ.

ಇದೇ ವೇಳೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ರಾಜೀನಾಮೆಯಿಂದ ತೆರವಾಗಿರುವ ಕೇರಳದ ವಯನಾಡಲ್ಲಿ ನ.13ರಂದು, ಉತ್ತರಾಖಂಡದ ಕೇದಾರನಾಥ್‌ ವಿಧಾನಸಭೆ ಹಾಗೂ ಮಹಾರಾಷ್ಟ್ರದ ನಾಂದೇಡ್‌ ಲೋಕಸಭಾ ಕ್ಷೇತ್ರದಲ್ಲಿ ನ.20ರಂದು ಉಪಚುನಾವಣೆ ನಡೆಯಲಿದೆ.

2 ರಾಜ್ಯಗಳ ವಿಧಾನಸಭೆ ಚುನಾವಣೆ, 48 ವಿಧಾನಸಭಾ ಉಪಚುನಾವಣೆ ಹಾಗೂ ವಯನಾಡ್‌, ನಾಂದೇಡ್‌ ಲೋಕಸಭಾ ಉಪಚುನಾವಣಾ ಫಲಿತಾಂಶಗಳು ಒಟ್ಟಿಗೇ ನ.23ರಂದು ಘೋಷಣೆ ಆಗಲಿವೆ. ಭಾರತೀಯ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್‌ ಕುಮಾರ್‌ ಘೋಷಿಸಿದ್ದಾರೆ.

ಬಿಜೆಪಿ, ಕಾಂಗ್ರೆಸ್‌ಗೆ ಪ್ರತಿಷ್ಠೆ:

ಹಾಲಿ ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ (ಶಿಂಧೆಬಣ)- ಎನ್‌ಸಿಪಿ (ಅಜಿತ್‌ ಬಣ) ಮೈತ್ರಿಕೂಟ ಅಧಿಕಾರದಲ್ಲಿದೆ. ಅದನ್ನು ಕೆಳಗಿಳಿಸಲು ಕಾಂಗ್ರೆಸ್‌-ಎನ್‌ಸಿಪಿ (ಶರದ್ ಬಣ)-ಶಿವಸೇನೆ (ಠಾಕ್ರೆ ಬಣ) ಮೈತ್ರಿಕೂಟ ಸಾಹಸ ನಡೆಸುತ್ತಿದೆ.

ಜಾರ್ಖಂಡ್‌ನಲ್ಲಿ ಜೆಎಂಎಂ-ಕಾಂಗ್ರೆಸ್‌ ಕೂಟ ಅಧಿಕಾರದಲ್ಲಿದೆ. ಈ ಕೂಟ ಕೆಳಗಿಳಿಸಲು ಬಿಜೆಪಿ ಯತ್ನಿಸುತ್ತಿದೆ.

ಮಹಾರಾಷ್ಟ್ರವಿಧಾನಸಭೆಯ ಅವಧಿ ನ.26ಕ್ಕೆ ಕೊನೆಗೊಳ್ಳಲಿದ್ದು, ಜಾರ್ಖಂಡ್‌ನ ಅವಧಿ 2025ರ ಜ.5ಕ್ಕೆ ಮುಕ್ತಾಯವಾಗಲಿದೆ. 2019ರ ಜಾರ್ಖಂಡ್ ವಿಧಾನಸಭಾ ಚುನಾವಣೆಯು 5 ಹಂತಗಳಲ್ಲಿ ನಡೆದಿದ್ದರೆ, ಮಹಾರಾಷ್ಟ್ರದಲ್ಲಿ ಕೇವಲ ಒಂದು ಹಂತ ಮತದಾನ ನಡೆದಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಆಪರೇಷನ್‌ ಸಿಂದೂರ ವೇಳೆ ಸೈನಿಕರಿಗೆ ಚಹಾ ಕೊಟ್ಟಿದ್ದ ಬಾಲಕಗೆ ಬಾಲ ಪುರಸ್ಕಾರ
ದಿಲ್ಲಿ ಬದಲು ಬೆಂಗಳೂರು ರಾಜಧಾನಿ ಮಾಡಿ : ದಿಲ್ಲಿ ಯುವತಿ ಆಗ್ರಹ