- ಮೋದಿ ಮಂತ್ರಿಮಂಡಲದ ಸಭೆಯಲ್ಲಿ ಮಹತ್ವದ ವಿಚಾರಗಳ ಚರ್ಚೆಪಿಟಿಐ ನವದೆಹಲಿ
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಮಂತ್ರಿಮಂಡಲ ಸಭೆಯಲ್ಲಿ ದೇಶದ ಸುಮಾರು 50 ಕೋಟಿ (50%) ಜನರನ್ನು ಬಡತನ ರೇಖೆಗಿಂತ ಮೇಲಕ್ಕೆತ್ತಿರುವ ಕುರಿತು ಪ್ರಮುಖವಾಗಿ ಚರ್ಚಿಸಲಾಗಿದೆ. ನವದೆಹಲಿಯ ಭಾರತ್ ಮಂಟಪದಲ್ಲಿ ನಡೆದ ಈ ಸಭೆಯಲ್ಲಿ ಬಡತನ ನಿರ್ಮೂಲನೆ ಮತ್ತು ನಕ್ಸಲಿಸಂ ಅಂತ್ಯದ ಕುರಿತು ಸುದೀರ್ಘ ಸಮಾಲೋಚನೆ ನಡೆಸಲಾಗಿದೆ.2011 ಮತ್ತು 2023 ರ ನಡುವೆ ಭಾರತದಲ್ಲಿ 50 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ತಿಳಿಸುವ ವಿಶ್ವ ಬ್ಯಾಂಕ್ ವರದಿಯನ್ನು ಸಭೆಯಲ್ಲಿ ಉಲ್ಲೇಖಿಸಲಾಗಿದೆ. ಈ ಅವಧಿಯಲ್ಲಿ ದೇಶದ ತೀವ್ರ ಬಡತನದ ಪ್ರಮಾಣವು ಶೇಕಡಾ 90 ರಷ್ಟು ಇಳಿಕೆಯಾಗಿದೆ. ಇದೀಗ ಇನ್ನೂ 50 ಕೋಟಿ ಜನರನ್ನು ಬಡತನದಿಂದ ಮೇಲಕ್ಕೆ ಎತ್ತುವ ಬಗ್ಗೆ ಚರ್ಚಿಸಲಾಗಿದೆ. ಸಭೆಯಲ್ಲಿ ಗೃಹ ಮತ್ತು ಹಣಕಾಸು ಸಚಿವಾಲಯ ಸೇರಿದಂತೆ ಕೇಂದ್ರದ ವಿವಿಧ ಇಲಾಖೆಗಳ 11 ಕಾರ್ಯದರ್ಶಿಗಳು ಬಡತನ ನಿರ್ಮೂಲನೆ ಮತ್ತು ಅಭಿವೃದ್ಧಿ ಯೋಜನೆಗಳ ಕುರಿತು ಸಭೆಯಲ್ಲಿ ವಿವರವಾದ ಮಾಹಿತಿ ನೀಡಿದ್ದಾರೆ. ನಕ್ಸಲಿಸಂ ನಿರ್ಮೂಲನೆ:
ಬಡತನ ನಿವಾರಣೆಯ ಜೊತೆಗೆ ದೇಶದಲ್ಲಿ ನಕ್ಸಲ್ ಪಿಡುಗನ್ನು ಕೊನೆಗೊಳಿಸುವಲ್ಲಿ ಸರ್ಕಾರ ಸಾಧಿಸಿರುವ ಯಶಸ್ಸಿನ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ.
ಮಹಿಳೆಯರು ಮತ್ತು ಯುವಜನರಿಗೆ ಕಲ್ಯಾಣ ಯೋಜನೆಗಳನ್ನು ತಲುಪಿಸುವುದು, ಜನಧನ್ ಬ್ಯಾಂಕ್ ಖಾತೆಗಳ ಪರಿಶೀಲನೆ ಮತ್ತು ಮಾದಕವಸ್ತುಗಳ ಪಿಡುಗನ್ನು ತಡೆಯುವ ಕುರಿತು ಸಚಿವರು ಸಮಾಲೋಚನೆ ನಡೆಸಿದ್ದಾರೆ.
---
ಡ್ರಗ್ಸ್ಗೆ ಲಗಾಮು:
ಮೋದಿ ಸೂಚನೆ
ನವದೆಹಲಿ: ದೇಶದ ಯುವಕರನ್ನು ಪೀಡಿಸುತ್ತಿರುವ ಡ್ರಗ್ಸ್ ಪಿಡುಗು ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಚಿವರ ಸಭೆಯಲ್ಲಿ ಕಳವಳ ವ್ಯಕ್ತಪಡಿಸಿದರು ಹಾಗೂ ನಿರ್ಮೂಲನೆ ಮಾಡಲು ಪಣ ತೊಡುವಂತೆ ಸಚಿವರಿಗೆ ಸೂಚಿಸಿದರು ಎಂದು ಮೂಲಗಳು ಹೇಳಿವೆ.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.