ಯುರೋಪ್‌ನ 5 ದೇಶಗಳಲ್ಲಿ ವೀಕೆಂಡ್‌ ದಂಗೆ

KannadaprabhaNewsNetwork |  
Published : Oct 26, 2026, 04:15 AM ISTUpdated : Oct 26, 2026, 04:49 AM IST
Italy

ಸಾರಾಂಶ

ಬೆಲೆ ಏರಿಕೆ, ಹಣದುಬ್ಬರ, ನಿರುದ್ಯೋಗ, ಭ್ರಷ್ಟಾಚಾರ ಮೊದಲಾದ ಸಮಸ್ಯೆಗಳ ವಿರುದ್ಧ ಯುರೋಪ್‌ನಾದ್ಯಂತ ನಡೆಯುತ್ತಿರುವ ಹೋರಾಟಗಳು ವಾರಾಂತ್ಯದಲ್ಲಿ ಮತ್ತೆ ಕಾವು ಪಡೆದಿವೆ. ಫ್ರಾನ್ಸ್, ಅಲ್ಬೇನಿಯಾ, ಇಟಲಿ, ಸ್ಪೇನ್ ಮತ್ತು ಪೋರ್ಚುಗಲ್ ಸೇರಿದಂತೆ ವಿವಿಧ ದೇಶಗಳಲ್ಲಿ ಸಾವಿರಾರು ಜನರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ.

ನವದೆಹಲಿ: ಬೆಲೆ ಏರಿಕೆ, ಹಣದುಬ್ಬರ, ನಿರುದ್ಯೋಗ, ಭ್ರಷ್ಟಾಚಾರ ಮೊದಲಾದ ಸಮಸ್ಯೆಗಳ ವಿರುದ್ಧ ಯುರೋಪ್‌ನಾದ್ಯಂತ ನಡೆಯುತ್ತಿರುವ ಹೋರಾಟಗಳು ವಾರಾಂತ್ಯದಲ್ಲಿ ಮತ್ತೆ ಕಾವು ಪಡೆದಿವೆ. ಫ್ರಾನ್ಸ್, ಅಲ್ಬೇನಿಯಾ, ಇಟಲಿ, ಸ್ಪೇನ್ ಮತ್ತು ಪೋರ್ಚುಗಲ್ ಸೇರಿದಂತೆ ವಿವಿಧ ದೇಶಗಳಲ್ಲಿ ಸಾವಿರಾರು ಜನರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ.

ಕೆಲವು ಪ್ರದೇಶಗಳಲ್ಲಿ ಪ್ರತಿಭಟನೆಗಳು ಹಿಂಸಾರೂಪಕ್ಕೆ ತಿರುಗಿದ್ದು, ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಘರ್ಷಣೆಗಳು ನಡೆದಿವೆ.

ಫ್ರಾನ್ಸ್‌ನಲ್ಲಿ 1000 ಮಂದಿ ವಶ: 

ಫ್ರಾನ್ಸ್‌ನಲ್ಲಿ ಶನಿವಾರ ನಡೆದ ಬೃಹತ್ ಪ್ರತಿಭಟನೆ ವೇಳೆ ಹಿಂಸಾಚಾರ ನಡೆದಿದ್ದು, ಸುಮಾರು 1,000 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೇಶಾದ್ಯಂತ 8 ಲಕ್ಷದವರೆಗೆ ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಅಶಾಂತಿಗೆ ಫ್ರಾನ್ಸ್‌ನ ವಲಸೆ ನೀತಿಗಳೇ ಕಾರಣ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಪುನಃ ದೂಷಿಸಿದ್ದಾರೆ.

ಅಲ್ಬೇನಿಯಾದ ಸರ್ಕಾರಿ ಕಟ್ಟಡಕ್ಕೆ ಬೆಂಕಿ: 

ಅಲ್ಬೇನಿಯಾದ ರಾಜಧಾನಿ ಟಿಮಾನಾದಲ್ಲಿ ಸಾವಿರಾರು ಜನರು ಸರ್ಕಾರದ ವಿರುದ್ಧ ರಸ್ತೆಗಿಳಿದು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಪ್ರಧಾನಿ ಎಡಿ ರಾಮ ಅವರ ರಾಜೀನಾಮೆಗೆ ಒತ್ತಾಯಿಸಿ ಕೆಲವರು ಕೃಷಿ ಸಚಿವಾಲಯದ ಪ್ರವೇಶ ದ್ವಾರಕ್ಕೆ ಬೆಂಕಿ ಹಚ್ಚಿ, ಸರ್ಕಾರಿ ಕಟ್ಟಡಗಳು ಹಾಗೂ ಬ್ಯಾಂಕ್‌ಗಳನ್ನು ಧ್ವಂಸಗೊಳಿಸಿದ್ದಾರೆ. ಘರ್ಷಣೆಯಲ್ಲಿ 300ಕ್ಕೂ ಹೆಚ್ಚು ಪ್ರತಿಭಟನಾಕಾರರು ಹಾಗೂ ಪೊಲೀಸರು ಗಾಯಗೊಂಡಿದ್ದಾರೆ.

ಇಟಲಿಯಲ್ಲಿ ಮೆಲೋನಿ ರಾಜೀನಾಮೆಗೆ ಆಗ್ರಹ: 

ಇಟಲಿಯಲ್ಲಿ ಸರ್ಕಾರಿ ನೀತಿಗಳ ವಿರುದ್ಧ ಸಾರ್ವಜನಿಕರು ಬೀದಿಗಿಳಿದಿದ್ದು, ರೋಮ್‌ನ ಕೊಲೊಸಿಯಮ್ ಬಳಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿಭಟನಾಕಾರರು ‘ಪ್ರಧಾನಿ ಮೆಲೋನಿ ರಾಜೀನಾಮೆ ಕೊಡಿ’ ಎಂಬ ಘೋಷಣೆ ಕೂಗಿದ್ದಾರೆ. ಮಿಲನ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಸಂಭಾವ್ಯ ಹಿಂಸಾಚಾರ ಹಾಗೂ ದರೋಡೆ ತಡೆಯಲು ಕಟ್ಟೆಚ್ಚರ ವಹಿಸಲಾಗಿದೆ.

ಸ್ಪೇನ್‌ನಲ್ಲಿ ಅಂಗಡಿಗಳ ಲೂಟಿ: 

ಸ್ಪೇನ್‌ನಲ್ಲಿ ಮನೆ ಬಾಡಿಗೆ ವಿಪರೀತವಾಗಿ ಹೆಚ್ಚಾಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಬಾರ್ಸಿಲೋನಾ ಸೇರಿದಂತೆ ಪ್ರಮುಖ ನಗರಗಳಲ್ಲಿ ಕಪ್ಪು ಮಾಸ್ಕ್‌ ಧರಿಸಿದ ಪ್ರತಿಭಟನಾಕಾರರು ಹಿಂಸಾಚಾರ ಮತ್ತು ಅಂಗಡಿಗಳ ಲೂಟಿಯಲ್ಲಿ ತೊಡಗಿದ್ದಾರೆ. ಪೋರ್ಚುಗಲ್‌ನಲ್ಲೂ ಯುರೋಪಿನ ಇತರ ರಾಷ್ಟ್ರಗಳಂತೆ ಆರ್ಥಿಕ ಬಿಕ್ಕಟ್ಟು, ಬೆಲೆ ಏರಿಕೆ ಹಾಗೂ ಜೀವನ ಮಟ್ಟ ಕುಸಿತದ ವಿರುದ್ಧ ಜನರು ಬೀದಿಗಿಳಿದಿದ್ದಾರೆ.

ಫ್ರಾನ್ಸ್‌: 8 ಲಕ್ಷದಷ್ಟು ಭಾರಿ ಜನರು ಭಾಗಿ. 1000 ಪ್ರತಿಭಟನಾಕಾರರು ಪೊಲೀಸರ ವಶಅಲ್ಬೇನಿಯಾ: ಕೃಷಿ ಸಚಿವಾಲಯದ ಪ್ರವೇಶ ದ್ವಾರಕ್ಕೆ ಬೆಂಕಿ. ಕಟ್ಟಡಗಳು ಧ್ವಂಸಇಟಲಿ: ಪಿಎಂ ಮೆಲೋನಿ ರಾಜೀನಾಮೆಗೆ ಪ್ರತಿಭಟನೆ. ರೋಮ್‌ನಲ್ಲಿ ಉದ್ವಿಗ್ನ ಸ್ಥಿತಿಸ್ಪೇನ್‌: ಕಪ್ಪು ಮಾಸ್ಕ್‌ ಧರಿಸಿದ ಪ್ರತಿಭಟನಾಕಾರರಿಂದ ಹಿಂಸೆ. ಅಂಗಡಿಗಳ ಲೂಟಿಪೋರ್ಚುಗಲ್‌: ಸರ್ಕಾರದ ವಿರುದ್ಧ ಬೀದಿಗಿಳಿದು ಜನರಿಂದ ಬೃಹತ್‌ ಹೋರಾಟ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಇಂದು ರಾಗಾ ವಿರುದ್ಧದ ಮಾನನಷ್ಟ ದಾವೆ ತೀರ್ಪು
ಮೋದಿ ಅಲ್ಲ ಅವರ ಅಪ್ಪನೂ ಹೋಗ್ತಾರೆ: ಖರ್ಗೆ ವಿವಾದ