ಇಂದು ರಾಗಾ ವಿರುದ್ಧದ ಮಾನನಷ್ಟ ದಾವೆ ತೀರ್ಪು

KannadaprabhaNewsNetwork |  
Published : Oct 26, 2026, 02:00 AM ISTUpdated : Oct 26, 2026, 04:52 AM IST
Rahul Gandhi

ಸಾರಾಂಶ

2018ರಲ್ಲಿ ಬೆಂಗಳೂರಿನಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಗೃಹ ಸಚಿವ ಅಮಿತ್‌ ಶಾ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕೆ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣದ ತೀರ್ಪು ಸೋಮವಾರ ಹೊರ ಬೀಳಲಿದೆ.

ಸುಲ್ತಾನ್‌ಪುರ : 2018ರಲ್ಲಿ ಬೆಂಗಳೂರಿನಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಗೃಹ ಸಚಿವ ಅಮಿತ್‌ ಶಾ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕೆ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣದ ತೀರ್ಪು ಸೋಮವಾರ ಹೊರ ಬೀಳಲಿದೆ.

ರಾಹುಲ್‌ ನೀಡಿದ ಹೇಳಿಕೆ ವಿರುದ್ಧ ವಿಜಯ್‌ ಮಿಶ್ರಾ ಎಂಬುವವರು 2018ರ ಅ.4ರಂದು ದಾವೆ ಹೂಡಿದ್ದರು. ಇದರ ವಿಚಾರಣೆ ನಡೆಸಿದ್ದ ಉತ್ತರ ಪ್ರದೇಶದ ಸುಲ್ತಾನಪುರದ ವಿಶೇಷ ‘ಸಂಸದರ- ಶಾಸಕರ ನ್ಯಾಯಾಲಯ’ ( ಜನಪ್ರತಿನಿಧಿಗಳ ನ್ಯಾಯಾಲಯ) ಇದೀಗ ತೀರ್ಪು ಪ್ರಕಟಿಸಲಿದೆ.

ಖುದ್ದು ಹಾಜರಾತಿಗೆ ಸೂಚಿಸಿದೆ

ಅಲ್ಲದೆ, ಈ ವೇಳೆ ಖುದ್ದು ಹಾಜರಾತಿಗೆ ರಾಹುಲ್‌ ಗಾಂಧಿಗೆ ಸೂಚಿಸಿದೆ. ರಾಹುಲ್‌ ಸೋಮವಾರ ಬೆಳಗ್ಗೆ 10ಕ್ಕೆ ಸುಲ್ತಾನ್‌ಪುರಕ್ಕೆ ಬರಲಿದ್ದು, ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಈ ಹಿಂದೆ ರಾಹುಲ್‌ 2023ರ ನ.27ರಂದು ಕೋರ್ಟ್‌ ಮುಂದೆ ಹಾಜರಾಗಿ ಜಾಮೀನು ಪಡೆದಿದ್ದರು.

ಏನಿದು ಪ್ರಕರಣ?:

2018ರಲ್ಲಿ ಬೆಂಗಳೂರಿನಲ್ಲಿ ಚುನಾವಣಾ ಪ್ರಚಾರದ ವೇಳೆ ರಾಹುಲ್‌, ಅಂದಿನ ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿದ್ದ ಅಮಿತ್‌ ಶಾ ಅವರ ಮೇಲೆ ಕೊಲೆ ಆರೋಪ ಹೊರಿಸಿದ್ದರು. ಇದು 2005ರ ಸೊಹ್ರಾಬುದ್ದೀನ್‌ ಶೇಖ್‌ ‘ನಕಲಿ’ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದ್ದಾಗಿತ್ತು. 2014ರಲ್ಲೇ ಈ ಪ್ರಕಣದಲ್ಲಿ ಶಾ ಆರೋಪಮುಕ್ತರಾಗಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಯುರೋಪ್‌ನ 5 ದೇಶಗಳಲ್ಲಿ ವೀಕೆಂಡ್‌ ದಂಗೆ
ಮೋದಿ ಅಲ್ಲ ಅವರ ಅಪ್ಪನೂ ಹೋಗ್ತಾರೆ: ಖರ್ಗೆ ವಿವಾದ