- ಅಧಿಕಾರದಿಂದ ಮೋದಿ ನಿರ್ಗಮಿಸುತ್ತಾರೆ ಎಂಬರ್ಥದ ಹೇಳಿಕೆ
ಭಾನುವಾರ ಬಿಹಾರದ ಪಟನಾದಲ್ಲಿ ನಡೆದ ಬಿಹಾರದ ಮೊದಲ ಸಿಎಂ ಡಾ। ಕೃಷ್ಣ ಸಿಂಗ್ ಅವರ 139ನೇ ಜನ್ಮದಿನಾಚರಣೆಯಲ್ಲಿ ಮಾತನಾಡಿದ ಎಐಸಿಇ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ’ಇನ್ನು 30 ವರ್ಷ ವಿಪಕ್ಷಗಳಿಗೆ ಅಧಿಕಾರ ಸಿಗಲ್ಲ’ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನು ಪ್ರಸ್ತಾಪಿಸಿ ಅದರ ವಿರುದ್ಧ ವಾಗ್ದಾಳಿ ನಡೆಸಿದರು.
ಆಗಲ್ಲಿ ಉಪಸ್ಥಿತರಿದ್ದ ವ್ಯಕ್ತಿಯೊಬ್ಬರು ‘ಪ್ರಧಾನಿ ನರೇಂದ್ರ ಮೋದಿ ಎಲ್ಲಿಗೂ ಹೋಗುವುದಿಲ್ಲ’ (ಅಧಿಕಾರದಿಂದ ನಿರ್ಗಮಿಸಲ್ಲ) ಎಂದು ಕೂಗಿದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಖರ್ಗೆ, ‘ಮೋದಿ ಕಾ ಬಾಪ್ ಭೀ ಜಾಯೇಗಾ’ (ಮೋದಿ ಅಷ್ಟೇ ಅಲ್ಲ ಅವರ ಅಪ್ಪನೂ ಅಧಿಕಾರದಿಂದ ನಿರ್ಗಮಿಸುತ್ತಾರೆ) ಎಂದು ಆಕ್ರೋಶಭರಿತರಾಗಿ ನುಡಿದರು.ಅಮಿತ್ ಶಾ ಆಕ್ರೋಶ:
ಕಾಂಗ್ರೆಸ್ ಸ್ಪಷ್ಟನೆ:
- ಮತಪತ್ರದ ಮೂಲಕ ಚುನಾವಣೆಗೆ ಆಗ್ರಹ- ಎಸ್‌ಐಆರ್ ಹೋರಾಟ 2ನೇ ಸ್ವಾತಂತ್ರ್ಯ ಸಂಗ್ರಾಮ: ಎಐಸಿಸಿ ಅಧ್ಯಕ್ಷ
ಬಿಹಾರದ ಮೊದಲ ಮುಖ್ಯಮಂತ್ರಿ ಕೃಷ್ಣ ಸಿಂಗ್ ಅವರ 139ನೇ ಜನ್ಮದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ. ‘ಪ. ಬಂಗಾಳ, ಹರ್ಯಾಣ, ಬಿಹಾರ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಮತಗಳ್ಳತನದ ಮೂಲಕ ಅಧಿಕಾರಕ್ಕೆ ಬಂದ ಸರ್ಕಾರಗಳನ್ನು ಕಿತ್ತೆಸೆಯಬೇಕು. ಪ್ರಸ್ತುತ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯನ್ನು ನಿಲ್ಲಿಸಬೇಕು. ಕಳೆದ ಎರಡು ವರ್ಷಗಳಲ್ಲಿ ನಡೆದ ಎಲ್ಲಾ ಚುನಾವಣೆಯನ್ನು ರದ್ದುಗೊಳಿಸಬೇಕು. ಅಲ್ಲದೇ ಚುನಾವಣಾ ಪಾರದರ್ಶಕತೆ ಹಾಗೂ ಸಾರ್ವಜನಿಕರ ವಿಶ್ವಾಸ ಮರುಸ್ಥಾಪಿಸಲು ಮತಪತ್ರದ ಮೂಲಕ ಚುನಾವಣೆ ನಡೆಸಲಿ. ಪ್ರಜಾಪ್ರಭುತ್ವವನ್ನು ರಕ್ಷಿಸಬೇಕು. ಪ್ರತಿಯೊಂದು ಮತವೂ ಲೆಕ್ಕಕ್ಕೆ ಬರಬೇಕು’ ಎಂದು ಅವರು ಒತ್ತಾಯಿಸಿದರು.ಇದೇ ವೇಳೆ ಅವರು ‘ಆರ್‌ಎಸ್‌ಎಸ್ ಸಿದ್ಧಾಂತಗಳು ಎಲ್ಲಿಯವರೆಗೆ ನಿರ್ಮೂಲನೆ ಆಗುವುದಿಲ್ಲವೋ ಅಲ್ಲಿಯವರೆಗೆ ದೇಶದಲ್ಲಿ ಶಾಂತಿ ನೆಲೆಸುವುದಿಲ್ಲ’ ಎಂದು ಕುಟುಕಿದರು.