ಪ್ರತಿ ಮನೆಗೂ ಇನ್ನು ಬರಲಿದೆ ಡಿಜಿಟಲ್‌ ಐಡಿ

KannadaprabhaNewsNetwork |  
Published : May 28, 2025, 11:55 PM ISTUpdated : May 29, 2025, 04:47 AM IST
ಡಿಜಿಟಲ್ | Kannada Prabha

ಸಾರಾಂಶ

ದೇಶದ ವಿಳಾಸ ವ್ಯವಸ್ಥೆಯನ್ನು ಆಧುನೀಕರಣಗೊಳಿಸಲು ಕೇಂದ್ರ ಸರ್ಕಾರ ಎರಡು ಪ್ರಮುಖ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳನ್ನು ಬಿಡುಗಡೆ ಮಾಡಿದೆ. ಅದರಂತೆ ಪ್ರತಿ ವ್ಯಕ್ತಿಗೂ ಆಧಾರ್ ನಂಬರ್ ಇರುವಂತೆ ಪ್ರತಿ ಮನೆಗೂ ಇನ್ನು ಡಿಜಿಟಲ್‌ ಐಡಿ ಸಿಗಲಿದೆ.

ನವದೆಹಲಿ: ದೇಶದ ವಿಳಾಸ ವ್ಯವಸ್ಥೆಯನ್ನು ಆಧುನೀಕರಣಗೊಳಿಸಲು ಕೇಂದ್ರ ಸರ್ಕಾರ ಎರಡು ಪ್ರಮುಖ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳನ್ನು ಬಿಡುಗಡೆ ಮಾಡಿದೆ. ಅದರಂತೆ ಪ್ರತಿ ವ್ಯಕ್ತಿಗೂ ಆಧಾರ್ ನಂಬರ್ ಇರುವಂತೆ ಪ್ರತಿ ಮನೆಗೂ ಇನ್ನು ಡಿಜಿಟಲ್‌ ಐಡಿ ಸಿಗಲಿದೆ. ಅವು ‘Know Your DIGIPIN’(ನಿಮ್ಮ ಡಿಜಿಪಿನ್‌ ಅನ್ನು ತಿಳಿಯಿರಿ) and ‘Know Your PIN Code’(ನಿಮ್ಮ ಪಿನ್‌ ಕೋಡ್‌ ಬಗ್ಗೆ ತಿಳಿಯಿರಿ). ದೇಶಾದ್ಯಂತ ಲೋಕೇಷನ್‌ ಆಧಾರಿತ ಸೇವೆಗಳನ್ನು ಇನ್ನಷ್ಟು ಸ್ಮಾರ್ಟ್‌ ಹಾಗೂ ಸುಲಭಗೊಳಿಸಲು ಈ ಪ್ರಯತ್ನ ನೆರವು ನೀಡಲಿದೆ.

ಡಿಜಿಪಿನ್‌ ಅಂದ್ರೆ ಏನು?

ಡಿಜಿಪಿನ್‌ ಅಂದರೆ ಡಿಜಿಟಲ್‌ ಪೋಸ್ಟಲ್‌ ಇಂಡೆಕ್ಸ್‌ ನಂಬರ್‌. ಇದು ಒಂದು ಜಿಯೋ ಕೋಡ್‌ ಆಧರಿತ, ಗ್ರಿಡ್‌ ಆಧಾರಿತ ಡಿಜಿಟಲ್‌ ವಿಳಾಸ ವ್ಯವಸ್ಥೆಯಾಗಿದೆ. ಇದರನ್ವಯ ಪ್ರತಿಮನೆಗೂ, ಕಟ್ಟಡಕ್ಕೂ ಒಂದು ಡಿಜಿಪಿನ್‌ ನೀಡಲಾಗುತ್ತದೆ. ಇದರ ಮೂಲಕ ನಿಖರವಾಗಿ ಮನೆ ಅಥವಾ ಸಂಸ್ಥೆಯ ವಿಳಾಸವನ್ನು ಗುರುತಿಸಲು ಸಾಧ್ಯವಾಗಲಿದೆ.

ಹೇಗೆ ಕಾರ್ಯನಿರ್ವಹಣೆ?

ನೋ ಯುವರ್‌ ಡಿಜಿಪಿನ್‌ ಪೋರ್ಟಲ್‌ ಮೂಲಕ ಸಾರ್ವಜನಿಕರು ತಮ್ಮ ನಿಖರ ಜಿಯೋಲೊಕೇಷನ್‌ ಮತ್ತು ಅಕ್ಷಾಂಶ-ರೇಖಾಂಶ ಆಧರಿಸಿ ಡಿಜಿಪಿನ್‌ ಪಡೆಯಬಹುದು. ಈ ಡಿಜಿಪಿನ್‌ 10 ಅಂಕೆಗಳ ಸಂಖ್ಯೆ ಆಗಿರುತ್ತದೆ. ಒಂದು ರೀತಿಯಲ್ಲಿ ಆಧಾರ್‌ ಹೇಗೆಯೋ ಅದೇ ರೀತಿ ಪ್ರತಿ ಮನೆ, ಕಟ್ಟಡಗಳಿಗೆ ಈ ಡಿಜಿಪಿನ್‌ ನೀಡಲಾಗುತ್ತದೆ. ಇದು ನಿಖರವಾಗಿ ಲೋಕೇಷನ್‌ ಅನ್ನು ಗುರುತಿಸಲು, ಸರಕು ಸೇವೆ, ಕೊರಿಯರ್‌ ಮತ್ತು ತುರ್ತು ಸೇವೆಗಳನ್ನು ಸಕಾಲದಲ್ಲಿ ತಲುಪಿಸಲು ನೆರವು ನೀಡುತ್ತದೆ.

 ಈಗ ಯಾಕೆ ಪರಿಚಯ?

ಆನ್‌ಲೈನ್‌ ಶಾಪಿಂಗ್‌, ಕೊರಿಯರ್‌ ಸೇವೆಗಳು ಮತ್ತು ಆಹಾರ ವಸ್ತುಗಳ ಡೆಲಿವರಿ ಹೆಚ್ಚುತ್ತಿರುವ ಈಗಿನ ಕಾಲಘಟ್ಟದಲ್ಲಿ ಆನ್‌ಲೈನ್‌ ಸೇವೆಯನ್ನು ಸುಲಭವಾಗಿ ತಲುಪಿಸಲು ಸರಿಯಾದ ವಿಳಾಸದ ವಿವರ ನೀಡುವುದು ಅತಿಮುಖ್ಯವಾಗಿದೆ. ಆದರೆ ಅನೇಕ ಭಾರತೀಯರ ವಿಳಾಸಗಳು ಪರಿಪೂರ್ಣವಾಗಿರುವುದಿಲ್ಲ. ಹೀಗಾಗಿ ಸೇವೆ ವಿತರಣೆಯಲ್ಲಿ ವಿಳಂಬವಾಗುತ್ತಿದೆ. ಇದರಿಂದ ದೇಶದ ಜಿಡಿಪಿಗೆ ಬಹುದೊಡ್ಡ ಹೊಡೆತ ಬೀಳುತ್ತಿದೆ. ಇದನ್ನು ತಡೆಯಲು ಅಂಚೆ ಇಲಾಖೆಯು ಡಿಜಿಪಿನ್‌ ವ್ಯವಸ್ಥೆಯ ಮೊರೆ ಹೋಗಿದೆ. ಈ ಮೂಲಕ ಗಲ್ಲಿಗಳು, ಹಳ್ಳಿಗಳ ವಿಳಾಸವೂ ಸುಲಭವಾಗಿ ಪತ್ತೆಹಚ್ಚುವ ವ್ಯವಸ್ಥೆ ಜಾರಿಗೆ ತರಲಿದೆ.

1972ರಲ್ಲಿ ಪಿನ್‌ ಕೋಡ್‌ ಪರಿಚಯ 

ಹಾಲಿ ಇರುವ ಆರು ಸಂಖ್ಯೆಗಳ ಪಿನ್‌ ಕೋನ್‌ ಸಿಸ್ಟಂ ಅನ್ನು ಅಂಚೆ ಇಲಾಖೆ 1972ರಲ್ಲಿ ಪರಿಚಯಿಸಿತ್ತು. ಈಗಿನ ಕಾಲಘಟ್ಟದಲ್ಲಿ ಈ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವ ಅಗತ್ಯ ಕಂಡುಬಂದ ಹಿನ್ನೆಲೆಯಲ್ಲಿ ಡಿಜಿಪಿನ್‌ ಮೊರೆಹೋಗಲಾಗುತ್ತಿದೆ. ಈ ಸಂಬಂಧ ಅಂಚೆ ಇಲಾಖೆಯು ಜಿಯೋಫೆನ್ಸಿಂಗ್‌ ಅಭ್ಯಾಸ ಕೈಗೊಂಡಿತ್ತು. ವಿಳಾಸಗಳನ್ನು ನಿಖರವಾಗಿ ಪತ್ತೆಹಚ್ಚಲು ಈ ಪ್ರಯೋಗ ಕೈಗೊಂಡಿತ್ತು. ಇದರ ಆಧಾರದ ಮೇಲೆ ನೋ ಯುವರ್‌ ಪಿನ್‌ ಕೋಡ್‌ ವೆಬ್‌ ಪೋರ್ಟಲ್‌ ಅನ್ನು ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಲಾಗಿದೆ. ಗ್ಲೋಬಲ್‌ ನ್ಯಾವಿಗೇಷನ್‌ ಸ್ಯಾಟಲೈಟ್‌ ಸಿಸ್ಟಂ ಬಳಸಿಕೊಂಡು ಬಳಕೆದಾರರಿಗೆ ಅವರಿರುವ ಸ್ಥಳದ ಆಧಾರದ ಮೇಲೆ ನಿಖರ ಪಿನ್‌ ಕೋಡ್‌ ಗುರುತಿಸಲು ಈ ವೆಬ್‌ಪೋರ್ಟಲ್‌ ಅವಕಾಶ ಮಾಡಿಕೊಡುತ್ತದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಸ್ವಾತಂತ್ರ್ಯ ಬಳಿಕ ಮೊದಲ ಬಾರಿಪಾಕ್‌ ವಿವಿಯಲ್ಲಿ ಸಂಸ್ಕೃತ ಕಲಿಕೆ!
ಅಂಡಮಾನ್‌ ದ್ವೀಪದಲ್ಲಿ ಸಾವರ್ಕರ್ ಪ್ರತಿಮೆ ಅನಾವರಣ