68 ಸಾಧಕರಿಗೆ ರಾಷ್ಟ್ರಪತಿ ಮುರ್ಮು ಪದ್ಮ ಪ್ರಶಸ್ತಿ ಪ್ರದಾನ

KannadaprabhaNewsNetwork |  
Published : May 28, 2025, 12:13 AM ISTUpdated : May 28, 2025, 12:14 AM IST
ಪದ್ಮ ಪ್ರಶಸ್ತಿ | Kannada Prabha

ಸಾರಾಂಶ

2025ನೇ ಸಾಲಿನ ಪದ್ಮ ಪ್ರಶಸ್ತಿಗೆ ಪಾತ್ರರಾಗಿದ್ದ 68 ಸಾಧಕರಿಗೆ ಮಂಗಳವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಜೆ.ಎಸ್‌.ಖೇಹರ್‌, ಶೋಭನಾ ಸೇರಿ ಗಣ್ಯರಿಗೆ ಪುರಸ್ಕಾರನವದೆಹಲಿ: 2025ನೇ ಸಾಲಿನ ಪದ್ಮ ಪ್ರಶಸ್ತಿಗೆ ಪಾತ್ರರಾಗಿದ್ದ 68 ಸಾಧಕರಿಗೆ ಮಂಗಳವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿದರು. ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಜಗದೀಶ್ ಸಿಂಗ್ ಖೇಹರ್ (ಪದ್ಮವಿಭೂಷಣ), ನರ್ತಕಿ ಶೋಭನಾ ಚಂದ್ರಕುಮಾರ್ (ಪದ್ಮಭೂಷಣ), ಸಾಧ್ವಿ ರಿತಾಂಬರ, (ಪದ್ಮಶ್ರೀ) ಸೇರಿ 68 ಸಾಧಕರಿಗೆ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. 2025ನೇ ಸಾಲಿನಲ್ಲಿ ಒಟ್ಟು 139 ಸಾಧಕರಿಗೆ ಪದ್ಮ ಪ್ರಶಸ್ತಿಗಳನ್ನು ಘೋಷಿಸಲಾಗಿತ್ತು. ಆ ಪೈಕಿ ಏ.28ರಂದು 71 ಸಾಧಕರಿಗೆ ಪ್ರಶಸ್ತಿ ನೀಡಲಾಗಿತ್ತು. ಇನ್ನುಳಿದ 68 ಸಾಧಕರಿಗೆ ಮಂಗಳವಾರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ದುಡಿಯುವ ಸ್ತ್ರೀಗೆ ಪತಿ ಜೀವನಾಂಶ ಕೊಡಬೇಕಿಲ್ಲ: ಅಲಹಾಬಾದ್‌ ‘ಹೈ’
ಸಂಸತ್‌ ದಾಳಿಗೆ 24 ವರ್ಷ: ಹುತಾತ್ಮರಿಗೆ ಗಣ್ಯರ ಗೌರವ