ದೇಶದ ಗ್ರಾಮೀಣ ವಲಯಗಳ ಆರ್ಥಿಕತೆ ಬಹುತೇಕ ಕೃಷಿ ಚಟುವಟಿಕೆಗಳಿಗೆ ಸೀಮಿತವಾಗಿದ್ದು, ಇದಕ್ಕೆ ಹೊಸ ರೂಪ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರ ಭಾಗವಾಗಿ ಗ್ರಾಮೀಣ ಆರ್ಥಿಕತೆಯ ವೈವಿಧ್ಯಗೊಳಿಸುವ ಮತ್ತು ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಕೆಲವು ಹೊಸ ಯೋಜನೆಗಳನ್ನು ಘೋಷಿಸಲಾಗಿದೆ.

ದೇಶದ ಗ್ರಾಮೀಣ ವಲಯಗಳ ಆರ್ಥಿಕತೆ ಬಹುತೇಕ ಕೃಷಿ ಚಟುವಟಿಕೆಗಳಿಗೆ ಸೀಮಿತವಾಗಿದ್ದು, ಇದಕ್ಕೆ ಹೊಸ ರೂಪ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರ ಭಾಗವಾಗಿ ಗ್ರಾಮೀಣ ಆರ್ಥಿಕತೆಯ ವೈವಿಧ್ಯಗೊಳಿಸುವ ಮತ್ತು ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಕೆಲವು ಹೊಸ ಯೋಜನೆಗಳನ್ನು ಘೋಷಿಸಲಾಗಿದೆ. ಈ ಯೋಜನೆಗಳು ಮುಖ್ಯವಾಗಿ ಜಾನುವಾರು, ಮೀನುಗಾರಿಕೆ ಮತ್ತು ಹೆಚ್ಚಿನ ಮೌಲ್ಯದ ಕೃಷಿ ಚಟುವಟಿಕೆ ವಲಯಗಳನ್ನು ಆಧರಿಸಿದ್ದಾಗಿದೆ.

ಬಜೆಟ್‌ನಲ್ಲಿ ಕೃಷಿ ವಲಯಕ್ಕೆ ಈ ಸಲ ಭರ್ಜರಿ 1.62 ಲಕ್ಷ ಕೋಟಿ ರು. ಅನುದಾ ಮೀಸಲಿರಿಸಲಾಗಿದೆ. ಇದು ಕಳೆದ ವರ್ಷದ ಪರಿಷ್ಕೃತ ಅಂದಾಜು ವೆಚ್ಚವಾದ 1.51 ಲಕ್ಷ ಕೋಟಿ ರು.ಗಿಂತ ಶೆ.7.12ರಷ್ಟು ಅಧಿಕ ಎಂಬುದು ವಿಶೇಷ.

20000 ಪಶುಚಿಕಿತ್ಸಕರಿಗೆ ತರಬೇತಿ:

ದೇಶದ ಕೃಷಿ ವಲಯದ ಆದಾಯದಲ್ಲಿ ಜಾನುವಾರುಗಳ ಪಾಲು ಶೇ.16ರಷ್ಟಿದೆ. ಜೊತೆಗೆ ಇದು ಬಡ ಮತ್ತು ಮಧ್ಯಮ ಆದಾಯ ಗ್ರಾಮೀಣ ಕುಟುಂಬಗಳ ಪಾಲಿನ ಜೀವನಾಧಾರವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, 20000 ಪಶುಚಿಕಿತ್ಸಕರಿಗೆ ತರಬೇತಿ ನೀಡುವ ಸಲುವಾಗಿ ಸಾಲದ ನಂಟಿನ ನಗದು ಪ್ರೋತ್ಸಾಹಕ ಯೋಜನೆ ಜಾರಿಗೊಳಿಸಲು ನಿರ್ಧರಿಸಿದೆ. ಈ ಯೋಜನೆ ಭವಿಷ್ಯದಲ್ಲಿ ನುರಿತ ಪಶುಚಿಕಿತ್ಸಕರ ಲಭ್ಯತೆಯನ್ನು ಹೆಚ್ಚಿಸಲಿದೆ ಎಂದು ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ.

ಈ ಯೋಜನೆ ಮೂಲಕ ಪಶುವೈದ್ಯಕೀಯ ಆಸ್ಪತ್ರೆ ಆರಂಭ, ಖಾಸಗಿ ಕಾಲೇಜುಗಳ ಆರಂಭ, ಪ್ರಯೋಗಾಲಯ ಸ್ಥಾಪನೆ ಮತ್ತು ಸಂತಾನೋತ್ಪತ್ತಿ ನೆರವಿನ ಕೇಂದ್ರಗಳ ಸಂಖ್ಯೆ ಹೆಚ್ಚಳದ ಗುರಿಯನ್ನು ಕೇಂದ್ರ ಸರ್ಕಾರ ರೂಪಿಸಿದೆ.

ಮೀನುಗಾರಿಕೆ:

ಕರಾವಳಿ ಪ್ರದೇಶದಲ್ಲಿನ ಮೌಲ್ಯವರ್ಧಿತ ಸೇವೆಗಳ ಪೂರೈಕೆ ಸರಪಳಿಯನ್ನು ಮತ್ತಷ್ಟು ಬಲಪಡಿಸುವ ಸಲುವಾಗಿ 500 ಜಲಾಗಾರ ಮತ್ತು ಅಮೃತ ಸರೋವರಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಸರ್ಕಾರ ನಿರ್ಧರಿಸಿದೆ. ಸ್ಟಾರ್ಟಪ್‌ಗಳು, ಮಹಿಳಾ ಸ್ವಸಹಾಯ ಸಂಘಗಳು ಮತ್ತು ಮೀನು ಕೃಷಿ ಉತ್ಪಾದಕರ ಸಂಘಗಳ ಮೂಲಕ ಇವುಗಳನ್ನು ನಿರ್ವಹಿಸುವ ಯೋಜನೆಯನ್ನು ಸರ್ಕಾರ ಪ್ರಸ್ತಾಪಿಸಿದೆ.

ಅಲ್ಲದೆ ವಿಶೇಷ ಆರ್ಥಿಕ ವಲಯದ ಆಳಸಮುದ್ರದಲ್ಲಿ ಭಾರತೀಯ ಮೀನುಗಾರರು ಹಿಡಿಯುವ ಮೀನುಗಳ ಮೇಲೆ ಶೂನ್ಯ ಸುಂಕದ ಘೋಷಣೆ ಮಾಡಲಾಗಿದೆ. ಆದರೆ ಇಂಥ ಮೀನುಗಳನ್ನು ವಿದೇಶಿ ಬಂದರುಗಳಿಗೆ ಸಾಗಿಸಿದರೆ ಅದನ್ನು ರಫ್ತು ಎಂದು ಪರಿಗಣಿಸಲಾಗುವುದು ಎಂದು ಸರ್ಕಾರ ಹೇಳಿದೆ.

ಭಾರತದಲ್ಲಿ 1 ಕೋಟಿ ಕುಟುಂಬಗಳ 3 ಕೋಟಿ ಜನರು ತಮ್ಮ ಜೀವನೋಪಾಯಕ್ಕೆ ತೆಂಗನ್ನೇ ಪ್ರಮುಖವಾಗಿ ಅವಲಂಬಿಸಿದ್ದಾರೆ. ಭಾರತದ ಜಗತ್ತಿನ ಅತಿದೊಡ್ಡ ತೆಂಗು ಉತ್ಪಾದಕ ದೇಶ ಕೂಡಾ ಹೌದು.

ಗೋಡಂಬಿ, ಕೊಕಾ ಸ್ವಾವಲಂಬನೆ:

ಗೋಡಂಬಿ ಮತ್ತು ಕೊಕಾ ಉತ್ಪಾದನೆ, ಸಂಸ್ಕರಣೆಯಲ್ಲಿ ಸ್ವಾವಲಂಬನೆ ಸಾಧಿಸುವ ಮತ್ತು ರಫ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮತ್ತು ಅದಕ್ಕೆ 2030ರ ವೇಳೆಗೆ ಜಾಗತಿಕ ಬ್ರ್ಯಾಂಡ್‌ ಸೃಷ್ಟಿಸುವ ನಿಟ್ಟಿನಲ್ಲಿ ವಿಶೇಷ ಉದ್ದೇಶದ ಯೋಜನೆ ಜಾರಿಗೂ ಸರ್ಕಾರ ನಿರ್ಧರಿಸಿದೆ.

ಶ್ರೀಗಂಧ ಬೆಳೆಯಲು ಆದ್ಯತೆ:

ದೇಶದ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಭಾಗವಾಗಿರುವ ಶ್ರೀಗಂಧದ ಬೆಳೆಯನ್ನು ಹೆಚ್ಚಿಸುವ ಮತ್ತು ಕೊಯ್ಲೋತ್ತರ ಸಂಸ್ಕರಣೆ ಉದ್ಯಮಕ್ಕೆ ಪ್ರೋತ್ಸಾಹ ನೀಡಲು ರಾಜ್ಯಗಳ ಜೊತೆಗೂಡಿ ಕಾರ್ಯಕ್ರಮ ರೂಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದು ದೇಶದ ಶ್ರೀಗಂಧ ಜೀವಪರಿಸರದ ವೈಭವವನ್ನು ಪುನರ್‌ಸ್ಥಾಪಿಸುವಲ್ಲಿ ಯಶಸ್ವಿಯಾಗಲಿದೆ ಎಂದು ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ.

ಬಾದಾಮಿ, ವಾಲ್ನಟ್‌ ಬೆಳೆ:

ಗುಡ್ಡಗಾಡು ಪ್ರದೇಶಗಳಲ್ಲಿನ ಹಳೆಯ ತೋಟಗಳಿಗೆ ಮರುಜೀವ ನೀಡುವ ಮತ್ತು ಹೆಚ್ಚಿನ ಫಲ ನೀಡುವ ಬಾದಾಮಿ, ಅಕ್ರೂಟ್‌ ಪೈನ್‌ ನಟ್ ಬೆಳೆಯಲು ಆದ್ಯತೆ ನೀಡುವ ಮೂಲಕ ಯುವಸಮುದಾಯಕ್ಕೆ ಹೊಸ ಉದ್ಯೋಗ ಸೃಷ್ಟಿಯ ಯೋಜನೆಯನ್ನು ಕೇಂದ್ರ ಸರ್ಕಾರ ರೂಪಿಸಿದೆ.

ಕೃಷಿಗೆ ಭರ್ಜರಿ 1.62 ಲಕ್ಷ ಕೋಟಿ ರು. ಅನುದಾನ । ಕಳೆದ ವರ್ಷಕ್ಕಿಂತ ಶೇ.7 ಏರಿಕೆ

20000 ಪಶುಚಿಕಿತ್ಸಕರಿಗೆ ತರಬೇತಿ, ಮೀನುಗಾರಿಕೆಗಾಗಿ 500 ಜಲಮೂಲ ಅಭಿವೃದ್ಧಿ

ಗ್ರಾಮೀಣ ಆರ್ಥಿಕತೆ ವೈವಿಧ್ಯೀಕರಣ, ಉದ್ಯೋಗ ಸೃಷ್ಟಿಗೆ ಹಲವು ಹೊಸ ಯೋಜನೆ

ಶ್ರೀಗಂಧ ಬೆಳೆ ಹೆಚ್ಚಳ, ಸಂಸ್ಕರಣೆಗೆ ಪಾಲುದಾರಿಕೆ

500 ಜಲಾಗಾರ, ಅಮೃತ ಸರೋವರ ಅಭಿವೃದ್ಧಿ

ಖಾಸಗಿ ಪಶು ಕಾಲೇಜು, ಆಸ್ಪತ್ರೆ, ಲ್ಯಾಬ್‌ಗೆ ಮಣೆ

ಹಳೆಯ ಮರ ಕಿತ್ತು ಹೊಸ ತೆಂಗಿನ ಮರ ನೆಡಿ

ಗೋಡಂಬಿ, ಕೊಕಾ ಸ್ವಾವಲಂಬನೆಗೆ ಯೋಜನೆ

500: ಜಲಾಗಾರ, ಅಮೃತ ಸರೋವರ ಅಭಿವೃದ್ಧಿ

20000: ಪಶುಚಿಕಿತ್ಸಕರಿಗೆ ತರಬೇತಿಯ ಉದ್ದೇಶ

1.62: ಕೃಷಿಗೆ 1.62 ಲಕ್ಷ ಕೋಟಿ ರು. ಅನುದಾನ