ಈ ಬಾರಿ ಬಜೆಟ್‌ನಲ್ಲಿ ಆಯುರ್ವೇದಕ್ಕೆ ಅತಿ ಹೆಚ್ಚಿನ ಒತ್ತು ನೀಡಲಾಗಿದೆ. ಅಲೋಪತಿ ರೀತಿ ಆಯುರ್ವೇದಕ್ಕೂ ನಿರ್ಮಲಾ ಸೀತಾರಾಮನ್ ಅವರು ಪ್ರಾಮುಖ್ಯತೆ ನೀಡಿರುವುದಕ್ಕೆ ತಜ್ಞರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಬಾರಿ ಬಜೆಟ್‌ನಲ್ಲಿ ಆಯುರ್ವೇದಕ್ಕೆ ಅತಿ ಹೆಚ್ಚಿನ ಒತ್ತು ನೀಡಲಾಗಿದೆ. ಅಲೋಪತಿ ರೀತಿ ಆಯುರ್ವೇದಕ್ಕೂ ನಿರ್ಮಲಾ ಸೀತಾರಾಮನ್ ಅವರು ಪ್ರಾಮುಖ್ಯತೆ ನೀಡಿರುವುದಕ್ಕೆ ತಜ್ಞರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

3 ಹೊಸ ಅಖಿಲ ಭಾರತ ಆಯುರ್ವೇದ ಸಂಸ್ಥೆ

ಸಾಂಪ್ರದಾಯಿಕ ಔಷಧಗಳಲ್ಲಿ ಸಂಶೋಧನೆಯನ್ನು ಬಲಪಡಿಸಲು 3 ಹೊಸ ಅಖಿಲ ಭಾರತ ಆಯುರ್ವೇದ ಸಂಸ್ಥೆಗಳನ್ನು ಸ್ಥಾಪಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

ಆಯುರ್ವೇದಕ್ಕೆ ಜಾಗತಿಕ ಮಟ್ಟದಲ್ಲಿ ಬೇಡಿಕೆ

ಬಜೆಟ್‌ ಮಂಡಿಸಿದ ಅವರು, ‘ಕೋವಿಡ್‌ ನಂತರದಲ್ಲಿ ಆಯುರ್ವೇದಕ್ಕೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಹೆಚ್ಚಿದೆ. ಗುಣಮಟ್ಟದ ಆಯುರ್ವೇದ ಉತ್ಪನ್ನಗಳು ಗಿಡಮೂಲಿಕೆಗಳನ್ನು ಬೆಳೆಯುವ ರೈತರಿಗೆ ಮತ್ತು ಅವುಗಳನ್ನು ಸಂಸ್ಕರಿಸುವ ಯುವಕರಿಗೆ ಸಹಾಯ ಮಾಡುತ್ತವೆ. ಜಾಗತಿಕ ಬೇಡಿಕೆಯನ್ನು ಪೂರೈಸಲು, 3 ಹೊಸ ಅಖಿಲ ಭಾರತ ಆಯುರ್ವೇದ ಸಂಸ್ಥೆಗಳನ್ನು ಸ್ಥಾಪಿಸಲಾಗುವುದು. ಆಯುಷ್ ಔಷಧಾಲಯಗಳು, ಔಷಧ ಪರೀಕ್ಷಾ ಪ್ರಯೋಗಾಲಯಗಳು ಮತ್ತು ಗುಜರಾತ್‌ನ ಜಾಮನಗರದಲ್ಲಿರುವ ಡಬ್ಲ್ಯುಎಚ್‌ಒ ಜಾಗತಿಕ ಸಾಂಪ್ರದಾಯಿಕ ಔಷಧ ಕೇಂದ್ರವನ್ನು ಮೇಲ್ದರ್ಜೆಗೇರಿಸಲಾಗುವುದು’ ಎಂದು ತಿಳಿಸಿದರು.