ಛತ್ತೀಸ್‌ಗಢ ಮದ್ಯ ಹಗರಣ: ಮಾಜಿ ಸಿಎಂ ಪುತ್ರಗೆ ₹250 ಕೋಟಿ ಲಂಚ

KannadaprabhaNewsNetwork |  
Published : Dec 24, 2025, 02:00 AM IST
ಚೈತನ್ಯ | Kannada Prabha

ಸಾರಾಂಶ

ಛತ್ತೀಸ್‌ಗಢದ ಬಹುಕೋಟಿ ಮದ್ಯ ಹಗರಣಲ್ಲಿ ಮಾಜಿ ಸಿಎಂ ಭೂಪೇಶ್‌ ಬಘೇಲ್‌ ಅವರ ಪುತ್ರ ಚೈತನ್ಯರಿಗೂ 200ರಿಂದ 250 ಕೋಟಿ ರು. ಲಂಚ ಸಂದಾಯವಾಗಿತ್ತು ಎಂದು ಭ್ರಷ್ಟಾಚಾರ ನಿಗ್ರಹ ದಳದ ಆರ್ಥಿಕ ಅಪರಾಧ ವಿಭಾಗ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಮಾಹಿತಿ ನೀಡಿದೆ.

ಭಗೇಲ್‌ ಪುತ್ರ ಚೈತನ್ಯ ಕುರಿತು ಕೋರ್ಟ್‌ಗೆ ಮಾಹಿತಿ

ಚೈತನ್ಯಗೆ ವಂಚಕರ ಸಂಘಟನೆ, ರಕ್ಷಣೆ ಜವಾಬ್ದಾರಿ

ಲಂಚದ ಹಣದಲ್ಲಿ ಹೂಡಿಕೆ, ರಿಯಲ್‌ ಎಸ್ಟೇಟ್‌ಗೆ ಬಳಕೆ

ರಾಯ್ಪುರ: ಛತ್ತೀಸ್‌ಗಢದ ಬಹುಕೋಟಿ ಮದ್ಯ ಹಗರಣಲ್ಲಿ ಮಾಜಿ ಸಿಎಂ ಭೂಪೇಶ್‌ ಬಘೇಲ್‌ ಅವರ ಪುತ್ರ ಚೈತನ್ಯರಿಗೂ 200ರಿಂದ 250 ಕೋಟಿ ರು. ಲಂಚ ಸಂದಾಯವಾಗಿತ್ತು ಎಂದು ಭ್ರಷ್ಟಾಚಾರ ನಿಗ್ರಹ ದಳದ ಆರ್ಥಿಕ ಅಪರಾಧ ವಿಭಾಗ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಮಾಹಿತಿ ನೀಡಿದೆ.

ಕಳೆದ ಕಾಂಗ್ರೆಸ್‌ ಸರ್ಕಾರದ (2018-23) ಅವಧಿಯಲ್ಲಿ ಮಾರಾಟವಾದ ಪ್ರತಿ ಬಾಟಲ್‌ ಮದ್ಯಕ್ಕೆ ರಾಜಕಾರಣಿಗಳು, ಅಧಿಕಾರಿಗಳು, ಉದ್ಯಮಿಗಳು ಲಂಚ ಪಡೆದಿದ್ದರು ಹಾಗೂ ಇದರಿಂದ ರಾಜ್ಯದ ಬೊಕ್ಕಸಕ್ಕೆ 3000 ಕೋಟಿ ರು.ಗೂ ಅಧಿಕ ನಷ್ಟವಾಗಿತ್ತು ಎಂಬುದು ಆರೋಪ. ಈ ಹಗರಣದಲ್ಲಿ, ಅಂದು ಸಿಎಂ ಆಗಿದ್ದ ಬಘೇಲ್‌ ಅವರ ಪುತ್ರ ಚೈತನ್ಯ ಕೂಡ ಕೈಜೋಡಿಸಿದ್ದರು. ಅಕ್ರಮದಲ್ಲಿ ಪಾಲುದಾರರಾಗಿರುವವರ ಸಂಘಟನೆ ಮತ್ತು ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿ, ವರ್ಷಗಳ ಕಾಲ ಈ ಧಂದೆ ನಡೆಯುವಂತೆ ನೋಡಿಕೊಂಡಿದ್ದರು. ಅಧಿಕಾರಿಗಳು ಮತ್ತು ಉದ್ಯಮಿಗಳ ನಡುವೆ ಸೇತುವೆಯಂತಿದ್ದು, ಅಕ್ರಮವಾಗಿ ಸಂಗ್ರಹವಾದ ಹಣವನ್ನು ತಮ್ಮ ಸಹಚರರ ಮೂಲಕ ಹಂಚಿಕೆ ಮಾಡಿಸುತ್ತಿದ್ದರು.

ಇದಕ್ಕೆ ಪ್ರತಿಯಾಗಿ ಮದ್ಯ ಮಾರಾಟಗಾರರಿಂದ ಲಂಚವನ್ನು ತಮ್ಮ ಕಂಪನಿಯ ಖಾತೆ ಮೂಲಕ ಪಡೆದು, ಅದನ್ನು ರಿಯಲ್‌ ಎಸ್ಟೇಟ್‌ ಯೋಜನೆಗಳಿಗೆ ಹಾಗೂ ಹೂಡಿಕೆಗೆ ಬಳಸಿದ್ದರು. ಹೀಗೆ ಸುಮಾರು 200ರಿಂದ 250 ಕೋಟಿ ರು. ಪಡೆದಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕಾಂತಾರಾ ಹಿಂದಿಕ್ಕಿದ ಧುರಂಧರ್‌: 876 ಕೋಟಿ ಸಂಪಾದನೆಯ ದಾಖಲೆ
ಚೀನಿಯರಿಗೆ ಅಕ್ರಮ ವೀಸಾಕೇಸಲ್ಲಿ ಚಿದು ಪುತ್ರಗೆ ಸಂಕಷ್ಟ