ಕೇಜ್ರಿ ಜಾಮೀನು ತೀರ್ಪು 5ಕ್ಕೆ: ದೆಹಲಿ ಸಿಎಂ ಇಂದು ಮರಳಿ ತಿಹಾರ್‌ ಜೈಲಿಗೆ

KannadaprabhaNewsNetwork |  
Published : Jun 02, 2024, 01:45 AM ISTUpdated : Jun 02, 2024, 04:46 AM IST
Arvind Kejriwal

ಸಾರಾಂಶ

ಜಾಮೀನು ವಿಸ್ತರಣೆ ಕೋರಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ಸ್ಥಳೀಯ ನ್ಯಾಯಾಲಯ ಜೂ.5ಕ್ಕೆ ಕಾಯ್ದಿರಿಸಿದೆ.

ನವದೆಹಲಿ: ಜಾಮೀನು ವಿಸ್ತರಣೆ ಕೋರಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ಸ್ಥಳೀಯ ನ್ಯಾಯಾಲಯ ಜೂ.5ಕ್ಕೆ ಕಾಯ್ದಿರಿಸಿದೆ. ಹಾಗಾಗಿ ಜೂ.1ಕ್ಕೆ ಜಾಮೀನು ಮುಕ್ತಾಯಗೊಳ್ಳಲಿರುವ ಹಿನ್ನೆಲೆಯಲ್ಲಿ ಕೇಜ್ರಿವಾಲ್‌ ಭಾನುವಾರ ತಿಹಾರ್ ಜೈಲಿಗೆ ಮರಳಲಿದ್ದಾರೆ. 

ತಮಗೆ ಕಿಡ್ನಿ ವೈಫಲ್ಯ ಮತ್ತು ಕ್ಯಾನ್ಸರ್ ಕುರಿತ ತಪಾಸಣೆಗಾಗಿ ಜಾಮೀನು ಅವಧಿ ವಿಸ್ತರಿಸಬೇಕು ಎಂದು ಕೇಜ್ರಿ ಕೋರಿದ್ದರು. ಆದರೆ ಕೇಜ್ರಿವಾಲ್‌ ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಹೀಗಾಗಿ ಅವರ ಜಾಮೀನು ವಿಸ್ತರಿಸಬಾರದು ಎಂದು ಜಾರಿ ನಿರ್ದೇಶನಾಲಯ ನ್ಯಾಯಾಲಯದಲ್ಲಿ ತನ್ನ ವಾದ ಮಂಡಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ನಾವು ಭಾರತೀಯರೇ ಅಲ್ಲ: ಮೃತ ಕೊರಿಯಾ ಪ್ರೇಮಿ ಸೋದರಿಯರು
ರಷ್ಯಾ-ಅಮೆರಿಕ ಕೊನೆಯ ಅಣು ಒಪ್ಪಂದ ನಿನ್ನೆ ಅಂತ್ಯ: ಆತಂಕ