ನವದೆಹಲಿ: ಲೋಕಸಭೆಯಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದ ಆರೋಪದಡಿ ಸಂಸದ ಸ್ಥಾನದಿಂದ ವಜಾಡಿರುವ ಮಾಜಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಸಂಸದರಾಗಿದ್ದಕ್ಕೆ ಸರ್ಕಾರದಿಂದ ತಮಗೆ ನೀಡಲಾಗಿದ್ದ ಬಂಗಲೆಯನ್ನು ಶುಕ್ರವಾರ ಖಾಲಿ ಮಾಡಿದ್ದಾರೆ.
ಬಳಿಕ ಮನೆಯನ್ನು ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ತಮ್ಮ ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ಡಿಒಇ ನೋಟಿಸ್‌ಗೆ ತಡೆಯಾಜ್ಞೆ ಕೋರಿ ಮಹುವಾ ಅರ್ಜಿ ಸಲ್ಲಿಸಿದ್ದರು.
ಆದರೆ ಗುರುವಾರ ಕೋರ್ಟ್ ತಡೆ ನೀಡಿರಲಿಲ್ಲ.ಈ ಹಿನ್ನೆಲೆಯಲ್ಲಿ ಸರ್ಕಾರಿ ಬಂಗಲೆಯನ್ನು ಮಹುವಾ ತೊರೆದಿದ್ದಾರೆ.