ಸಮೀಪ ದೃಷ್ಟಿದೋಷ ನಿವಾರಿಸುವ ಔಷಧ : ಭಾರತದಲ್ಲಿ ಹೊಸ ಆವಿಷ್ಕಾರ- 15 ನಿಮಿಷದಲ್ಲಿ ಕೆಲಸ

KannadaprabhaNewsNetwork |  
Published : Sep 04, 2024, 01:48 AM ISTUpdated : Sep 04, 2024, 06:01 AM IST
ಐ ಡ್ರಾಪ್‌ | Kannada Prabha

ಸಾರಾಂಶ

40-55 ವರ್ಷ ವಯಸ್ಸಿನ ಜನರಲ್ಲಿ ಕಂಡುಬರುವ ಸಮೀಪ ದೃಷ್ಟಿದೋಷವನ್ನು ಸರಿಪಡಿಸುವ ಐ ಡ್ರಾಪ್ ಅನ್ನು ಭಾರತೀಯ ಔಷಧ ತಯಾರಕರು ಅಭಿವೃದ್ಧಿಪಡಿಸಿದ್ದಾರೆ. 'ಪ್ರೆಸ್‌ವು' ಎಂಬ ಈ ಔಷಧವು ಕೇವಲ 15 ನಿಮಿಷಗಳಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ ಮತ್ತು 6 ಗಂಟೆಗಳವರೆ ಪರಿಣಾಮ ಬೀರುತ್ತದೆ.

ಮುಂಬೈ: 40-55ರ ವಯೋಮಾನದವರಲ್ಲಿ ವಯೋಸಹಜವಾಗಿ ಕಾಣಿಸಿಕೊಳ್ಳುವ ಸಮೀಪದ ದೃಷ್ಟಿದೋಷ ನಿವಾರಿಸುವ ಔಷಧವೊಂದನ್ನು ಮೊದಲ ಬಾರಿಗೆ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದ್ದು, ಮುಂದಿನ ತಿಂಗಳು ಅದು ಮಾರುಕಟ್ಟೆಗೆ ಬರಲಿದೆ.

ಮುಂಬೈ ಮೂಲದ ಎಂಟೋಡ್ ಫಾರ್ಮಾಸ್ಯುಟಿಕಲ್ಸ್ ಎನ್ನುವ ಖಾಸಗಿ ಕಂಪನಿ ‘ಪ್ರೆಸ್‌ವು’ ಎಂಬ ಐಡ್ರಾಪ್‌ ಅಭಿವೃದ್ಧಿಪಡಿಸಿದ್ದು, ಇದರ ಮಾರಾಟಕ್ಕೆ ಔಷಧ ನಿಯಂತ್ರಣ ಸಂಸ್ಥೆ ಅನುಮತಿ ನೀಡಿದೆ. ಈ ಔಷಧ ಹತ್ತಿರದ ವಸ್ತುಗಳನ್ನು ನೋಡುವುದರಲ್ಲಿ ಇರುವ ದೃಷ್ಟಿ ದೋಷ ಕಡಿಮೆ ಮಾಡುತ್ತದೆ. ಇದಕ್ಕೆ 350 ರು.ಗೆ ದರ ನಿಗದಿಪಡಿಸಲಾಗಿದೆ.

ಐ ಡ್ರಾಪ್‌ನ ಒಂದು ಹನಿ ಕೇವಲ 15 ನಿಮಿಷದಲ್ಲಿ ಕೆಲಸ ನಿರ್ವಹಿಸುವುದಕ್ಕೆ ಪ್ರಾರಂಭಿಸುತ್ತದೆ. ಇದರ ಪರಿಣಾಮ 6 ಗಂಟೆಗಳ ತನಕವೂ ಇರಲಿದೆ. ಮೊದಲ ಹನಿ ಹಾಕಿದ 3 ರಿಂದ 6 ಗಂಟೆಯ ಒಳಗೆ ಎರಡನೇ ಐ ಡ್ರಾಪ್ಸ್ ಹಾಕಿದರೆ ಅದರ ಪರಿಣಾಮ ಸುದೀರ್ಘ ಅವಧಿಗೆ ಇರಲಿದೆ ಎಂದು ಕಂಪನಿ ಹೇಳಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ