ಇಮ್ರಾನ್‌ಖಾನ್‌ ಪದಚ್ಯುತಿ ಹಿಂದೆ ಪಾಕ್‌ ಸೇನೆ - ಅಮೆರಿಕ ಕೈವಾಡ!

KannadaprabhaNewsNetwork |  
Published : May 19, 2026, 01:45 AM IST
ಇಮ್ರಾನ್‌ | Kannada Prabha

ಸಾರಾಂಶ

ತಮ್ಮನ್ನು ಪದಚ್ಯುತಗೊಳಿಸಲು ಪಾಕ್‌ ಸೇನೆ ಜೊತೆ ಸೇರಿಕೊಂಡು ಅಮೆರಿಕ ಸೇನೆ ಷಡ್ಯಂತ್ರ ರೂಪಿಸಿದೆ ಎಂಬ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಆರೋಪ ಸಾಬೀತುಪಡಿಸುವಂಥ ಸ್ಫೋಟಕ ವರದಿಯೊಂದನ್ನು ಅಮೆರಿಕದ ‘ಡ್ರಾಪ್‌ ಸೈಟ್‌’ ಎಂಬ ವೆಬ್‌ಸೈಟ್‌ ಬಹಿರಂಗಪಡಿಸಿದೆ.

ಅಮೆರಿಕದ ಡ್ರಾಪ್‌ಸೈಟ್‌ನಿಂದ ಸ್ಫೋಟಕ ವರದಿ ಪ್ರಕಟಇಸ್ಲಾಮಾಬಾದ್‌: ತಮ್ಮನ್ನು ಪದಚ್ಯುತಗೊಳಿಸಲು ಪಾಕ್‌ ಸೇನೆ ಜೊತೆ ಸೇರಿಕೊಂಡು ಅಮೆರಿಕ ಸೇನೆ ಷಡ್ಯಂತ್ರ ರೂಪಿಸಿದೆ ಎಂಬ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಆರೋಪ ಸಾಬೀತುಪಡಿಸುವಂಥ ಸ್ಫೋಟಕ ವರದಿಯೊಂದನ್ನು ಅಮೆರಿಕದ ‘ಡ್ರಾಪ್‌ ಸೈಟ್‌’ ಎಂಬ ವೆಬ್‌ಸೈಟ್‌ ಬಹಿರಂಗಪಡಿಸಿದೆ.

ಪದಚ್ಯುತಿಗಾಗಿ ಸಭೆ:

ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಜತೆಗಿನ ಆತ್ಮೀಯತೆ, ರಷ್ಯಾ- ಉಕ್ರೇನ್‌ ವಿಷಯದಲ್ಲಿ ಇಮ್ರಾನ್ ಖಾನ್‌ ತಟಸ್ಥ ನೀತಿ, ಆಫ್ಘಾನಿಸ್ತಾನದ ಮೇಲಿನ ದಾಳಿಗೆ ತನ್ನ ನೆಲೆ ಬಳಸಲು ಬಿಡದ ಪಾಕಿಸ್ತಾನದ ಅಂದಿನ ಪ್ರಧಾನಿ ಇಮ್ರಾನ್‌ ಖಾನ್‌ ಬಗ್ಗೆ ಅಮೆರಿಕ ಆಕ್ರೋಶ ಹೊಂದಿತ್ತು. ಹೀಗಾಗಿ ಅವರನ್ನು ಅಧಿಕಾರದಿಂದ ಹೊರಗಿಡುವ ಸಂಬಂಧ ಅಮೆರಿಕದಲ್ಲಿನ ಪಾಕಿಸ್ತಾನದ ರಾಯಭಾರಿ ಅಸಾದ್‌ ಮಜೀದ್‌ ಖಾನ್‌ ಜೊತೆಗೆ ಮೆರಿಕದ ದಕ್ಷಿಣ ಮತ್ತು ಮಧ್ಯ ಏಷ್ಯಾ ರಾಷ್ಟ್ರಗಳ ಉಪ ಕಾರ್ಯದರ್ಶಿ ಡೊನಾಲ್ಡ್‌ ಲು ಸಭೆಯೊಂದನ್ನು ನಡೆಸಿದ್ದರು ಎಂಬುದು ವರದಿಯ ಸಾರಾಂಶ.

ಸಭೆಯಲ್ಲಿ ಏನಾಗಿತ್ತು?:

ಸಭೆಯಲ್ಲಿ ಇಮ್ರಾನ್‌ರ ವಿದೇಶಾಂಗ ನೀತಿ ಕುರಿತು ಲು ತೀವ್ರ ಕಳವಳ ವ್ಯಕ್ತಪಡಿಸಿದ್ದರು. ಅದರಲ್ಲೂ ಮುಖ್ಯವಾಗಿ ರಷ್ಯಾ-ಉಕ್ರೇನ್‌ ಯುದ್ಧದಲ್ಲಿ ಇಮ್ರಾನ್‌ ಖಾನ್‌ರ ಈ ರೀತಿಯ ತಟಸ್ಥ ನಿಲುವು ಸಾಧ್ಯವೇ? ನಮಗೆ ಅದು ತಟಸ್ಥ ನಿಲುವಿನಂತೆ ತೋರುತ್ತಿಲ್ಲ ಎಂದು ಲು ಹೇಳಿಕೊಂಡಿದ್ದರು. ಜತೆಗೆ. ಇಮ್ರಾನ್‌ ಖಾನ್‌ರನ್ನು ಅವಿಶ್ವಾಸಮತ ಗೊತ್ತುವಳಿ ಮೂಲಕ ಅಧಿಕಾರದಿಂದ ಕಿತ್ತೊಗೆದರೆ ನಮ್ಮ ಕಳವಳ ಕಡಿಮೆಯಾಗಲಿದೆ. ಇಲ್ಲದಿದ್ದರೆ ಪಾಕಿಸ್ತಾನದ ಪಾಲಿಗೆ ಮುಂದಿನ ದಿನಗಳು ಕಠಿಣವಾಗಲಿವೆ ಎಂದು ಪರೋಕ್ಷವಾಗಿ ಎಚ್ಚರಿಸಿದ್ದರು.

ಬಹಿರಂಗ ಆಗಿದ್ದು ಹೇಗೆ?:

ಸಭೆಯ ಬಳಿಕ ಪಾಕಿಸ್ತಾನದ ರಾಯಭಾರಿ ಅಸಾದ್‌ ಮಜೀದ್‌, 2022ರ ಮಾ 7ರಂದು ತವರಿಗೆ ರಹಸ್ಯ ಲಿಪಿಯಲ್ಲಿ ಸಂದೇಶವೊಂದನ್ನು ಕಳುಹಿಸಿದ್ದರು. ಅದರಲ್ಲಿ ಶ್ವೇತಭವನದ ಒಪ್ಪಿಗೆ ಇಲ್ಲದೆ ಲು ಈ ರೀತಿಯ ಸಂದೇಶ ನೀಡುತ್ತಲೇ ಇರಲಿಲ್ಲ ಎಂದು ಪ್ರಸ್ತಾಪಿಸಿದ್ದರು ಎಂದು ಇದೀಗ ಆ ರಹಸ್ಯ ದಾಖಲೆಗಳನ್ನು ಉಲ್ಲೇಖಿಸಿ ‘ಡ್ರಾಪ್‌ ಸೈಟ್‌’ ವರದಿ ಮಾಡಿದೆ.

ಪದಚ್ಯುತಿ:

ಅಚ್ಚರಿ ಎಂಬಂತೆ ಅಮೆರಿಕದಿಂದ ಇಂಥದ್ದೊಂದು ಸಂದೇಶ ರವಾನೆಯಾದ ಒಂದೇ ತಿಂಗಳಲ್ಲಿ ಅಂದರೆ ಏ.9, 2022ರಲ್ಲಿ ಅ‍ವಿಶ್ವಾಸ ಗೊತ್ತುವಳಿ ನಿರ್ಣಯ ಮೂಲಕ ಇಮ್ರಾನ್‌ಖಾನ್‌ರನ್ನು ಪದಚ್ಯುತಿಗೊಳಿಸಲಾಯಿತು. ಅದಾದ ಬಳಿಕ ಹಲವು ಭ್ರಷ್ಟಾಚಾರ, ದೇಶದ್ರೋಹದ ಪ್ರಕರಣದಲ್ಲಿ ಇಮ್ರಾನ್‌ರನ್ನು ಜೈಲಿಗೆ ಅಟ್ಟಲಾಗಿದ್ದು, ಅವರು 2023ರಿಂದಲೂ ಅವರು ಜೈಲಿನಲ್ಲಿದ್ದಾರೆ.

==

ಚೀನಾದಿಂದ ನ್ಯೂಕ್ಲಿಯರ್‌ ಸಬ್‌ಮರೀನ್‌ ಕೇಳಿದ್ದ ಪಾಕ್‌!

ಗ್ವಾದರ್‌ ಬಂದರಲ್ಲಿ ಚೀನಾ ನೆಲೆಗೆ ಪ್ರತಿಯಾಗಿ ಈ ಬೇಡಿಕೆ

ವಾಷಿಂಗ್ಟನ್‌: ಗ್ವಾದರ್‌ ಬಂದರಿಗೆ ಪ್ರವೇಶ ನೀಡುವುದಕ್ಕೆ ಪ್ರತಿಯಾಗಿ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವ ನ್ಯೂಕ್ಲಿಯರ್‌ ಸಬ್‌ ಮರೀನ್‌ಗಳನ್ನು ನೀಡುವಂತೆ ಪಾಕಿಸ್ತಾನವು ಚೀನಾದ ಮುಂದೆ ಬೇಡಿಕೆ ಇಟ್ಟಿತ್ತು ಎಂಬ ವಿಚಾರ ಇದೀಗ ಬಯಲಾಗಿದೆ. ಪಾಕಿಸ್ತಾನದ ರಹಸ್ಯ ದಾಖಲೆಗಳನ್ನು ಆಧರಿಸಿ ಅಮೆರಿಕ ಮೂಲದ ಡ್ರಾಪ್‌ ಸೈಟ್‌ ನ್ಯೂಸ್‌ ಈ ಸುದ್ದಿ ಬಹಿರಂಗಪಡಿಸಿದೆ.

2024ರಲ್ಲಿ ಪಾಕಿಸ್ತಾನ ಸೇನಾ ಮುಖ್ಯಸ್ಥ ಆಸಿಫ್‌ ಮುನೀರ್‌ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ರಾಜತಾಂತ್ರಿಕ ಮಾತುಕತೆ ವೇಳೆ ಈ ಬೇಡಿಕೆ ಇಡಲಾಗಿತ್ತು. ಗ್ವಾದರ್‌ ಬಂದರು ಅನ್ನು ಚೀನಾದ ಶಾಶ್ವತ ಮಿಲಿಟರಿ ನೆಲೆಯಾಗಿ ಬಳಸಲು ಅವಕಾಶ ಮಾಡಿಕೊಡುವುದಾಗಿ ಪಾಕಿಸ್ತಾನವು 2024ರ ಆರಂಭದಲ್ಲಿ ಭರವಸೆ ನೀಡಿತ್ತು. ಆ ಬಳಿಕ ಪಾಕಿಸ್ತಾನವು ಅಣ್ವಸ್ತ್ರ ಸಬ್‌ಮರೀನ್‌ಗಾಗಿ ಬೇಡಿಕೆ ಇಟ್ಟಿತ್ತು. ಇದರಿಂದ ನೆಲ, ಆಗಸದ ಜತೆಗೆ ಸಮುದ್ರದ ಮೂಲಕವೂ ದಾಳಿ ಮಾಡುವ ಸಾಮರ್ಥ್ಯ ಪಾಕ್‌ಗೆ ಸಿಗುತ್ತಿತ್ತು. ಆದರೆ, ಈ ಬೇಡಿಕೆಗೆ ಈವರೆಗೂ ಒಪ್ಪಿಗೆ ಸಿಕ್ಕಂತಿಲ್ಲ ಎಂದು ಹೇಳಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮತ್ತೆರಡು ರಾಜ್ಯಗಳಲ್ಲೀಗಕರ್ನಾಟಕ ರೀತಿ ಫ್ರೀ ಬಸ್‌- ಬಂಗಾಳ, ಕೇರಳದಲ್ಲೂ ಯೋಜನೆ ಜಾರಿ- ಸ್ತ್ರೀಯರಿಗೆ ಬಸ್‌ ಪ್ರಯಾಣ ಉಚಿತ ಸ್ಕೀಂ
ಬೆಂಗಳೂರಲ್ಲಿ ಡಚ್‌ ಡೈರಿತರಬೇತಿಗೆ ಮೋದಿ ಡೀಲ್‌- ಹೆಸರಘಟ್ಟದಲ್ಲಿ ತರಬೇತಿ ಕೇಂದ್ರ ಸ್ಥಾಪನೆ- ಪ್ರಧಾನಿ ನೆದರ್ಲೆಂಡ್‌ ಭೇಟಿ ವೇಳೆ ಒಪ್ಪಂದ