ಬೆಂಗಳೂರಲ್ಲಿ ಡಚ್‌ ಡೈರಿತರಬೇತಿಗೆ ಮೋದಿ ಡೀಲ್‌- ಹೆಸರಘಟ್ಟದಲ್ಲಿ ತರಬೇತಿ ಕೇಂದ್ರ ಸ್ಥಾಪನೆ- ಪ್ರಧಾನಿ ನೆದರ್ಲೆಂಡ್‌ ಭೇಟಿ ವೇಳೆ ಒಪ್ಪಂದ

KannadaprabhaNewsNetwork |  
Published : May 19, 2026, 01:45 AM IST
ಡಚ್‌ ಡೈರಿ  | Kannada Prabha

ಸಾರಾಂಶ

ಮೋದಿ ಅವರ ನೆದರ್ಲೆಂಡ್‌ ಭೇಟಿ ವೇಳೆ ಬೆಂಗಳೂರಿನಲ್ಲಿ ಪಶು ಸಂಗೋಪನಾ ತರಬೇತಿ ಕೇಂದ್ರ ಸ್ಥಾಪನೆ ಕುರಿತು ಒಪ್ಪಂದ ಮಾಡಿಕೊಳ್ಳಲಾಗಿದೆ. ಉಭಯ ದೇಶಗಳು ಮಾಡಿಕೊಂಡ ಒಟ್ಟು 17 ಒಪ್ಪಂದಗಳಲ್ಲಿ ಬೆಂಗಳೂರಿನಲ್ಲಿ ಡೈರಿ ತರಬೇತಿ ಕೇಂದ್ರ ಸ್ಥಾಪಿಸುವ ಅಂಶ ಕೂಡ ಸೇರಿದೆ.

- ಕೃಷಿ, ಹೈನುಗಾರಿಕೆ ಕ್ಷೇತ್ರದಲ್ಲಿ ನೆದರ್ಲೆಂಡ್‌ ದೇಶವು ವಿಶ್ವದಲ್ಲೇ ಹೆಸರುವಾಸಿಯಾಗಿದೆ- ಜಾನುವಾರು ಕಮ್ಮಿ ಇದ್ದರೂ ಜಾಗತಿಕ ಡೈರಿ ಉತ್ಪಾದಕ ದೇಶಗಳಲ್ಲಿ ಟಾಪ್‌ 5ರಲ್ಲಿದೆ- ಮೋದಿ ಪ್ರಧಾನಿ ಭೇಟಿ ವೇಳೆ ಬೆಂಗಳೂರಲ್ಲಿ ಇಂಡೋ- ಡಚ್‌ ತರಬೇತಿ ಕೇಂದ್ರಕ್ಕೆ ಡೀಲ್‌- ಬೆಂಗಳೂರಿನ ಹೆಸರಘಟ್ಟದಲ್ಲಿರುವ ಪಶುಸಂಗೋಪನಾ ಶ್ರೇಷ್ಠತಾ ಕೇಂದ್ರದಲ್ಲಿ ಸ್ಥಾಪನೆ- ಇದರಿಂದ ಭಾರತೀಯ ಹೈನುಗಾರರಿಗೆ ಡಚ್‌ ತಂತ್ರಜ್ಞಾನ ಅರಿಯುವ ಅವಕಾಶ ನಿರೀಕ್ಷೆ

--

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನೆದರ್ಲೆಂಡ್‌ ಭೇಟಿ ವೇಳೆ ಬೆಂಗಳೂರಿನಲ್ಲಿ ಪಶು ಸಂಗೋಪನಾ ತರಬೇತಿ ಕೇಂದ್ರ ಸ್ಥಾಪನೆ ಕುರಿತು ಒಪ್ಪಂದ ಮಾಡಿಕೊಳ್ಳಲಾಗಿದೆ. ಉಭಯ ದೇಶಗಳು ಮಾಡಿಕೊಂಡ ಒಟ್ಟು 17 ಒಪ್ಪಂದಗಳಲ್ಲಿ ಬೆಂಗಳೂರಿನಲ್ಲಿ ಡೈರಿ ತರಬೇತಿ ಕೇಂದ್ರ ಸ್ಥಾಪಿಸುವ ಅಂಶ ಕೂಡ ಸೇರಿದೆ.

ಭಾರತದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ ಮತ್ತು ನೆದರ್ಲೆಂಡ್‌ನ ಕೃಷಿ, ಮೀನುಗಾರಿಕೆ, ಆಹಾರ ಭದ್ರತೆ ಮತ್ತು ಪ್ರಕೃತಿ ಸಚಿವಾಲಯದ ಜಂಟಿ ಘೋಷಣೆಗೆ ಪ್ರಧಾನಿ ಮೋದಿ ಮತ್ತು ನೆದರ್ಲೆಂಡ್‌ ಪ್ರಧಾನಿ ರಾಬ್ ಜೆಟ್ಟನ್ ಅವರ ಸಮ್ಮುಖದಲ್ಲಿ ಸಹಿ ಹಾಕಲಾಯಿತು. ಇದರ ಭಾಗವಾಗಿ ಬೆಂಗಳೂರಿನಲ್ಲಿ ಡೈರಿ ಕ್ಷೇತ್ರದಲ್ಲಿ ತರಬೇತಿ ನೀಡುವ ಇಂಡೋ-ಡಚ್ ಉತ್ಕೃಷ್ಟತಾ ಕೇಂದ್ರದ ಸ್ಥಾಪನೆಗೆ ಒಪ್ಪಂದವಾಗಿದೆ. ಇದನ್ನು ಬೆಂಗಳೂರಿನ ಹೆಸರಘಟ್ಟದಲ್ಲಿರುವ ಪಶುಸಂಗೋಪನೆಗಾಗಿನ ಉತ್ಕೃಷ್ಟತಾ ಕೇಂದ್ರದಲ್ಲಿ ನೆದರ್ಲೆಂಡ್‌ ತನ್ನ ಉತ್ಕೃಷ್ಟತಾ ಕೇಂದ್ರವನ್ನು ತೆರೆಯಲಿದೆ.

ಹೈನುಗಾರಿಕೆಗೆ ಬಲ:

ಕೃಷಿ ಮತ್ತು ಹೈನುಗಾರಿಕೆ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ನೆದರ್ಲೆಂಡ್‌, ವಿಶ್ವದ 2ನೇ ದೊಡ್ಡ ಕೃಷಿ ಉತ್ಪನ್ನಗಳ ರಫ್ತುದಾರ ದೇಶವಾಗಿದೆ. ಕಡಿಮೆ ಜಾನುವಾರುಗಳನ್ನು ಹೊಂದಿರುವ ಪುಟ್ಟ ದೇಶವಾಗಿರುವ ಹೊರತಾಗಿಯೂ ತಂತ್ರಜ್ಞಾನ, ಪರಿಣಾಮಕಾರಿ ಕ್ರಮಗಳಿಂದಾಗಿ ಜಾಗತಿಕ ಡೈರಿ ಉತ್ಪಾದಕ ರಾಷ್ಟ್ರಗಳ ಪೈಕಿ ಟಾಪ್‌ 5ರಲ್ಲಿ ಸ್ಥಾನ ಪಡೆದಿದೆ. ಹೀಗಿರುವಾಗ, ಇಂತಹ ದೇಶದೊಂದಿಗೆ ಆಗಿರುವ ತರಬೇತಿ ಕೇಂದ್ರದ ಒಪ್ಪಂದವು ಭಾರತದಲ್ಲಿ ಹೈನುಗಾರಿಕೆಯನ್ನು ನೆಚ್ಚಿಕೊಂಡಿರುವವರಿಗೆ ಉತ್ಪಾದನೆ ಹಾಗೂ ಆದಾಯ ಹೆಚ್ಚಳಕ್ಕೆ ನೆರವಾಗಲಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮತ್ತೆರಡು ರಾಜ್ಯಗಳಲ್ಲೀಗಕರ್ನಾಟಕ ರೀತಿ ಫ್ರೀ ಬಸ್‌- ಬಂಗಾಳ, ಕೇರಳದಲ್ಲೂ ಯೋಜನೆ ಜಾರಿ- ಸ್ತ್ರೀಯರಿಗೆ ಬಸ್‌ ಪ್ರಯಾಣ ಉಚಿತ ಸ್ಕೀಂ
ಇಮ್ರಾನ್‌ಖಾನ್‌ ಪದಚ್ಯುತಿ ಹಿಂದೆ ಪಾಕ್‌ ಸೇನೆ - ಅಮೆರಿಕ ಕೈವಾಡ!