ಬೆಳಗಾವಿ, ಬಾಗಲಕೋಟೆಯ ಖೋವಾ, ಪನೀರ್ ಮಹಾರಾಷ್ಟ್ರದಲ್ಲಿ ವಶ

KannadaprabhaNewsNetwork |  
Published : Sep 12, 2026, 02:00 AM IST
ಪನ್ನೀರ್‌ | Kannada Prabha

ಸಾರಾಂಶ

ಗಣಪತಿ ಹಬ್ಬಕ್ಕೂ ಮುನ್ನ ಮಹಾರಾಷ್ಟ್ರದಲ್ಲಿ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಕರ್ನಾಟಕದ ಬೆಳಗಾವಿ, ಬಾಗಲಕೋಟೆಯಿಂದ ಸಾಗಿಸಲಾಗುತ್ತಿದ್ದ ಕಳಪೆ ಗುಣಮಟ್ಟ ಹೊಂದಿದ್ದ 4600 ಕೆ.ಜಿ. ಖೋವಾ, 12,500 ಕೆ.ಜಿ ಪನೀರ್ ಅನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

600 ಕೆ.ಜಿ. ಖೋವಾ, 12,500 ಕೆ.ಜಿ ಪನೀರ್ ಜಪ್ತಿ

ಪಿಟಿಐ ಪುಣೆಗಣಪತಿ ಹಬ್ಬಕ್ಕೂ ಮುನ್ನ ಮಹಾರಾಷ್ಟ್ರದಲ್ಲಿ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಕರ್ನಾಟಕದ ಬೆಳಗಾವಿ, ಬಾಗಲಕೋಟೆಯಿಂದ ಸಾಗಿಸಲಾಗುತ್ತಿದ್ದ ಕಳಪೆ ಗುಣಮಟ್ಟ ಹೊಂದಿದ್ದ 4600 ಕೆ.ಜಿ. ಖೋವಾ, 12,500 ಕೆ.ಜಿ ಪನೀರ್ ಅನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.ಈ ಬಗ್ಗೆ 10-12 ದಿನಗಳಿಂದ ಪೊಲೀಸರು ಗುಪ್ತಚರ ಮಾಹಿತಿ ಕಲೆ ಹಾಕಿ ಕಾರ್ಯಾಚರಣೆಯನ್ನು ನಡೆಸಿ 39 ಲಕ್ಷ ರು. ಮೌಲ್ಯದ ಆಹಾರೋತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಪೈಕಿ ಖೋವಾ ಸುಮಾರು 11.60 ಲಕ್ಷ ರು. ಮೌಲ್ಯದಾಗಿದ್ದು, ಅನೈರ್ಮಲ್ಯ ಸ್ಥಿತಿಯಲ್ಲಿ ಗೋಣಿ ಜಿಲ್ಲೆಗಳಲ್ಲಿ ಸಾಗಿಸಲಾಗುತ್ತಿತ್ತು, ಇನ್ನು ಎರಡು ವಾಹನಗಳಲ್ಲಿ ಸಾಗಿಸಲಾಗುತ್ತಿದ್ದ ವಿವಿಧ ಬಗೆಯ ಪನೀರ್‌ಗಳು ಜಪ್ತಿಯಾಗಿದ್ದು ಇದರ ಮೌಲ್ಯ, 27.83 ಲಕ್ಷ ರು. ಎಂದು ತಿಳಿದು ಬಂದಿದೆ. ಇವುಗಳನ್ನು ಬೆಳಗಾವಿ, ಬಾಗಲಕೋಟೆ ಸೇರಿದಂತೆ ಕರ್ನಾಟಕ ಗಡಿಯ ಕೆಲವು ಭಾಗಗಳಿಂದ ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಸದ್ಯ ಅಧಿಕಾರಿಗಳು ಅವುಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಪುಟಿನ್‌ಗೆ ರಷ್ಯನ್‌ ಅನುವಾದಿತ ತಮಿಳು ಕೃತಿ ತಿರುಕ್ಕುರಳ್‌ ನೀಡಿದ ಮೋದಿ
₹14,000 ಕೋಟಿ ಜಪ್ತಾದರೂ ಮಲ್ಯ ಮೇಲಿನ ಕೇಸು ರದ್ದಿಲ್ಲ: ಇ.ಡಿ.