ಬರಲಿದೆ, ವಂದೇಭಾರತ್‌‘ಸಾಧಾರಣ್’ ಹೊಸ ರೈಲು

KannadaprabhaNewsNetwork |  
Published : Oct 12, 2023, 12:01 AM ISTUpdated : Oct 12, 2023, 10:52 AM IST
Orange Vande Bharat Express

ಸಾರಾಂಶ

ವಂದೇ ಭಾರತ್‌ ಸರಣಿಯಲ್ಲಿ ಅಗ್ಗದ ರೈಲಿದುರೈಲಿನ ಮೊದಲ ಫೋಟೋಗಳು ಸೋರಿಕೆ

ಏನಿದರ ವಿಶೇಷ? 24 ಬೋಗಿಗಳನ್ನು ಹೊಂದಿರಲಿದೆ ‘ವಂದೇ ಸಾಧಾರಣ್‌’ ರೈಲು ಎರಡೂ ಬದಿಯಲ್ಲಿ ಎಂಜಿನ್‌. ಬಯೋ ವ್ಯಾಕ್ಯೂಮ್‌ ಶೌಚಾಲಯ ಚಾರ್ಜಿಂಗ್‌ ಪಾಯಿಂಟ್‌, ಸಿಸಿಟೀವಿ ಕೆಮೆರಾ, ಸ್ವಯಂಚಾಲಿತ ಬಾಗಿಲು --- ಚೆನ್ನೈ: ದೇಶದಲ್ಲಿ ‘ವಂದೇ ಭಾರತ್‌’ ಎಕ್ಸ್‌ಪ್ರೆಸ್‌ ರೈಲುಗಳು ಯಶಸ್ವಿಯಾದ ಬೆನ್ನಲ್ಲೇ, ಅತ್ಯಾಧುನಿಕ ಸವಲತ್ತು ಹೊಂದಿರುವ ‘ವಂದೇ ಭಾರತ್‌ ಸ್ಲೀಪರ್‌’ ಮತ್ತು ‘ವಂದೇ ಭಾರತ್‌ ಮೆಟ್ರೋ’ ರೈಲುಗಳನ್ನು ಬಿಡುಗಡೆ ಮಾಡುವುದಾಗಿ ರೈಲ್ವೆ ಹೇಳಿತ್ತು. ಅದರ ಬೆನ್ನಲ್ಲೇ ಇದೀಗ ಜನಸಾಮಾನ್ಯರಿಗೆ ಉತ್ತಮ ಸವಲತ್ತು ಹೊಂದಿರುವ ಆದರೆ ಅಗ್ಗದ ದರದ ‘ವಂದೇ ಸಾಧಾರಣ್‌’ ಎಂಬ ರೈಲನ್ನೂ ಕೂಡ ಭಾರತೀಯ ರೈಲ್ವೆ ಸಿದ್ಧಪಡಿಸುತ್ತಿರುವ ವಿಷಯ ಬೆಳಕಿಗೆ ಬಂದಿದೆ. 

ಚೆನ್ನೈನಲ್ಲಿರುವ ಕೋಚ್‌ ಫ್ಯಾಕ್ಟರಿಯಲ್ಲಿ ಸುಮಾರು 65 ಕೋಟಿ ರು. ವೆಚ್ಚದಲ್ಲಿ ಈ ರೈಲುಗಳನ್ನು ತಯಾರಿಸಲಾಗುತ್ತಿದ್ದು, ಇದರ ವಿಡಿಯೋಗಳು ಜಾಲತಾಣಗಳಲ್ಲಿ ಸೋರಿಕೆಯಾಗಿವೆ. ಈ ವರ್ಷದ ಅಂತ್ಯಕ್ಕೆ ಇವು ಕಾರ್ಯಾಚರಣೆ ಆರಂಭಿಸಲಿದ್ದು, ಇವುಗಳಲ್ಲಿನ ಪ್ರಯಾಣ ದರ ಕೈಗೆಟುಕುವ ದರದಲ್ಲಿರುತ್ತವೆ ಎನ್ನಲಾಗಿದೆ. ವಂದೇ ಸಾಧಾರಣ್‌ ರೈಲು 24 ಬೋಗಿ ಒಳಗೊಂಡಿರಲಿದ್ದು, ಎರಡೂ ಬದಿಯಲ್ಲಿ ಎಂಜಿನ್‌ ಹೊಂದಿರಲಿದೆ. ಇದರಲ್ಲಿ ಬಯೋ ವ್ಯಾಕ್ಯೂಮ್‌ ಶೌಚಾಲಯ, ಮಾಹಿತಿ ಕೋಣೆ, ಎಲ್ಲಾ ಸೀಟುಗಳಲ್ಲಿ ಚಾರ್ಜಿಂಗ್‌ ಪಾಯಿಂಟ್‌, ಸಿಸಿಟೀವಿ ಕ್ಯಾಮರಾಗಳು ಇರಲಿವೆ. ಇದರಲ್ಲೂ ಸಹ ಸ್ವಯಂ ಚಾಲಿತ ಬಾಗಿಲುಗಳನ್ನು ಅಳವಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ