ಮೋದಿ ಮಂತ್ರಿಮಂಡಲದಲ್ಲಿ ಕರ್ನಾಟಕದ ಐವರು

Published : Jun 10, 2024, 05:35 AM ISTUpdated : Jun 10, 2024, 05:36 AM IST
HDK

ಸಾರಾಂಶ

ಮೋದಿ ಮಂತ್ರಿ ಮಂಡಲದಲ್ಲಿ ಕರ್ನಾಟಕದ ಎಚ್‌.ಡಿ. ಕುಮಾರಸ್ವಾಮಿ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ, ನಿರ್ಮಲಾ ಸೀತಾರಾಮನ್‌ ಹಾಗೂ ಪ್ರಹ್ಲಾದ ಜೋಶಿ ಸ್ಥಾನ ಪಡೆದಿದ್ದಾರೆ. ಇವರ ಕುರಿತ ಮಾಹಿತಿ ಪುಟ 5ರಲ್ಲಿದೆ.

ದೆಹಲಿ :  ಮೋದಿ ಮಂತ್ರಿ ಮಂಡಲದಲ್ಲಿ ಕರ್ನಾಟಕದ ಎಚ್‌.ಡಿ. ಕುಮಾರಸ್ವಾಮಿ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ, ನಿರ್ಮಲಾ ಸೀತಾರಾಮನ್‌ ಹಾಗೂ ಪ್ರಹ್ಲಾದ ಜೋಶಿ ಸ್ಥಾನ ಪಡೆದಿದ್ದಾರೆ.  

ನಿರ್ಮಲಾ ಸೀತಾರಾಮನ್‌ (65)

ಕ್ಷೇತ್ರ/ರಾಜ್ಯ: ಕರ್ನಾಟಕ

ವಿದ್ಯಾರ್ಹತೆ: ಸ್ನಾತಕೋತ್ತರ ಪದವೀಧರೆ

ಕರ್ನಾಟಕದಿಂದ 3 ಬಾರಿ ರಾಜ್ಯಸಭೆ ಸದಸ್ಯೆ

ವಿತ್ತ, ವಾಣಿಜ್ಯ, ಕೈಗಾರಿಕೆ ಸಚಿವೆಯಾಗಿ ಕೆಲಸ ಮಾಡಿದ ಅನುಭವ. ಮೋದಿ-2 ಸರ್ಕಾರದಲ್ಲಿ ವಿತ್ತ ಸಚಿವೆಯಾಗಿ ಸಾಕಷ್ಟು ಪ್ರಶಂಸೆ ಹಾಗೂ ಟೀಕೆ-ಟಿಪ್ಪಣಿ, ಎರಡಕ್ಕೂ ಗುರಿ

ಪ್ರಹ್ಲಾದ ಜೋಶಿ (61)

ಕ್ಷೇತ್ರ/ರಾಜ್ಯ: ಧಾರವಾಡ, ಕರ್ನಾಟಕ

ವಿದ್ಯಾರ್ಹತೆ: ಬಿಎ

5 ಬಾರಿ ಲೋಕಸಭೆಗೆ ಆಯ್ಕೆ

ಮೋದಿ-2 ಸರ್ಕಾರದಲ್ಲಿ ಸಂಸದೀಯ ವ್ಯವಹಾರ ಮತ್ತು ಕಲ್ಲಿದ್ದಲು-ಗಣಿ ವ್ಯವಹಾರಗಳ ಸಚಿವರಾಗಿ ಕೆಲಸ. ಈ ಮೂಲಕ ಮೋದಿ ಅವರ ಪರಮಾಪ್ತ ಎಂದು ಖ್ಯಾತಿ

ಎಚ್‌.ಡಿ ಕುಮಾರಸ್ವಾಮಿ (64)

ಕ್ಷೇತ್ರ: ಮಂಡ್ಯ, ಕರ್ನಾಟಕ

ವಿದ್ಯಾರ್ಹತೆ: ಬಿಎಸ್ಸಿ

3ನೇ ಬಾರಿ ಸಂಸದ, ಮಾಜಿ ಮುಖ್ಯಮಂತ್ರಿ

ಮೊದಲ ಬಾರಿಗೆ ಕೇಂದ್ರ ಸಂಪುಟದಲ್ಲಿ ಮಂತ್ರಿ. ಕರ್ನಾಟಕದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ನಿರ್ವಹಣೆ. ಮಾಜಿ ಪ್ರಧಾನಿ ದೇವೇಗೌಡ ಅವರ ಪುತ್ರ. ಜೆಡಿಎಸ್‌ ಪಕ್ಷದ ನೇತಾರರಾಗಿ ಕರ್ನಾಟಕದಲ್ಲಿ ಪಕ್ಷ ಸಂಘಟಿಸಿದ ಅಪಾರ ಅನುಭವ.

 ಶೋಭಾ ಕರಂದ್ಲಾಜೆ(57) 

ಕ್ಷೇತ್ರ: ಬೆಂಗಳೂರು ಉತ್ತರ, ಕರ್ನಾಟಕ 

ವಿದ್ಯಾರ್ಹತೆ: ಸಮಾಜಶಾಸ್ತ್ರ ಸ್ನಾತಕೋತ್ತರ ಪದವಿ

ಮೂರನೇ ಬಾರಿ ಲೋಕಸಭೆಗೆ, ಕೇಂದ್ರ ಸಚಿವೆ

2014,2019ರಲ್ಲಿ ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ ಆಯ್ಕೆ. ಕೇಂದ್ರದಲ್ಲಿ ಕೃಷಿ ರಾಜ್ಯ ಸಚಿವೆ. ಸಂಸದೆಗೂ ಮುನ್ನ ಎಂಎಲ್‌ಸಿ, ಶಾಸಕಿ. ಗ್ರಾಮೀಣಾಭಿವೃದ್ದಿ & ಪಂಚಾಯತ್ ರಾಜ್, ಇಂಧನ ಸಚಿವೆ.

ಸೋಮಣ್ಣ

 ಕ್ಷೇತ್ರ ತುಮಕೂರು

ಜಾತಿ ಲಿಂಗಾಯತ

ವಿದ್ಯಾರ್ಹತೆ ಬಿಎ

ಸಂಸದ 1ನೇ ಸಲ

ಕೇಂದ್ರ ಸಚಿವ 1ನೇ ಸಲ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕೇಂದ್ರ ಸಚಿವ ಚೌಹಾಣ್‌ ಐಎಸ್‌ಐ ಟಾರ್ಗೆಟ್‌: ಭದ್ರತೆ ಹೆಚ್ಚಳ
ಆನಂದದ ಕ್ಷಣ ದುರಂತದ ಕ್ಷಣವಾಗಿ ಬದಲು!