ವಿಮಾನಗಳ ಜಿಪಿಎಸ್‌ ಸ್ಪೂಫಿಂಗ್‌ಗೆ ವಂಚಕರ ಯತ್ನ

KannadaprabhaNewsNetwork |  
Published : Dec 02, 2025, 03:00 AM IST
Aircraft

ಸಾರಾಂಶ

ದೆಹಲಿ, ಬೆಂಗಳೂರು ಸೇರಿ ದೇಶದ ಹಲವು ಏರ್ಪೋರ್ಟ್‌ಗಳಲ್ಲಿ ಕಳೆದ 1 ವರ್ಷದಲ್ಲಿ ವಿಮಾನಗಳ ಜಿಪಿಎಸ್‌ ಸ್ಪೂಫಿಂಗ್‌ ಹಾಗೂ ‘ಜಾಗತಿಕ ದಿಕ್ಸೂಚಿ ಉಪಗ್ರಹ ವ್ಯವಸ್ಥೆ’ಯಲ್ಲಿ  ಮಧ್ಯಪ್ರವೇಶ ಮಾಡಿದ ಹಲವು ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಸರ್ಕಾರ ಸೋಮವಾರ ಸಂಸತ್ತಿಗೆ ಮಾಹಿತಿ ನೀಡಿದೆ.  

 ನವದೆಹಲಿ: ದೆಹಲಿ, ಬೆಂಗಳೂರು ಸೇರಿ ದೇಶದ ಹಲವು ಏರ್ಪೋರ್ಟ್‌ಗಳಲ್ಲಿ ಕಳೆದ 1 ವರ್ಷದಲ್ಲಿ ವಿಮಾನಗಳ ಜಿಪಿಎಸ್‌ ಸ್ಪೂಫಿಂಗ್‌ (ಜಿಪಿಎಸ್‌ ಮೂಲಕ ನಕಲಿ ಉಪಗ್ರಹ ಸಂಕೇತ ರವಾನೆ) ಹಾಗೂ ‘ಜಾಗತಿಕ ದಿಕ್ಸೂಚಿ ಉಪಗ್ರಹ ವ್ಯವಸ್ಥೆ’ಯಲ್ಲಿ (ಜಿಎಸ್‌ಎಸ್‌ಎಸ್‌) ಮಧ್ಯಪ್ರವೇಶ ಮಾಡಿದ ಹಲವು ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಸರ್ಕಾರ ಸೋಮವಾರ ಸಂಸತ್ತಿಗೆ ಮಾಹಿತಿ ನೀಡಿದೆ. ಈ ಮೂಲಕ ವಿಮಾನಗಳನ್ನು ದಿಕ್ಕುತಪ್ಪಿಸುವ ಯತ್ನ ನಡೆದಿದ್ದು ಸಾಬೀತಾಗಿದೆ.

ಸಂಸದ ಎಸ್‌.ನಿರಂಜನ್‌ ರೆಡ್ಡಿ ಅವರು ಕೇಳಿದ್ದ ಪ್ರಶ್ನೆಗೆ ಸಂಬಂಧಿಸಿ ನಾಗರಿಕ ವಿಮಾನಯಾನ ಸಚಿವ ರಾಮ್‌ ಮೋಹನ್‌ ನಾಯ್ಡು ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರ ನೀಡಿದ್ದು, ಹಲವು ಮಹತ್ವದ ಅಂಶಗಳಿವೆ.

ಜಾಮಿಂಗ್‌ ಅಥವಾ ಸ್ಪೂಫಿಂಗ್‌ ಕುರಿತು ವರದಿ ಮಾಡುವುದು ಕಡ್ಡಾಯ

‘ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡಿಜಿಸಿಎ) ನ.23ರಿಂದ ಜಿಪಿಎಸ್‌ ಜಾಮಿಂಗ್‌ ಅಥವಾ ಸ್ಪೂಫಿಂಗ್‌ ಕುರಿತು ವರದಿ ಮಾಡುವುದು ಕಡ್ಡಾಯ ಮಾಡಿದೆ. ಆ ಬಳಿಕ ದೆಹಲಿ ಮಾತ್ರವಲ್ಲದೆ, ಬೆಂಗಳೂರು, ಅಮೃತಸರ, ಮುಂಬೈ, ಹೈದರಾಬಾದ್‌, ಕೋಲ್ಕತಾ, ಚೆನ್ನೈ ವಿಮಾನ ನಿಲ್ದಾಣಗಳಲ್ಲೂ ಇಂಥ ಪ್ರಕರಣಗಳು ನಿಯಮಿತವಾಗಿ ವರದಿಯಾಗಿವೆ. ದೆಹಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ 10ರಲ್ಲಿ ವಿಮಾನ ಇಳಿಯುವ ವೇಳೆ ಜಿಪಿಎಸ್‌ ಸ್ಪೂಫಿಂಗ್‌ ಘಟನೆ ವರದಿಯಾಗಿತ್ತು. ಆ ಬಳಿಕ ಪರ್ಯಾಯ ವ್ಯವಸ್ಥೆ ಕೈಗೊಳ್ಳಲಾಗಿದೆ. ದೆಹಲಿ ವಿಮಾನ ನಿಲ್ದಾಣದ ಇತರೆ ರನ್‌ವೇಗಳು ಅಥವಾ ನೆಲ ಆಧಾರಿತ ನೇವಿಗೇಷನ್‌ ವ್ಯವಸ್ಥೆಯಲ್ಲಿ ಯಾವುದೇ ಸಮಸ್ಯೆಯಾಗಿಲ್ಲ’ ಎಂದಿದ್ದಾರೆ.

ಏನಿದು ಜಿಪಿಎಸ್‌ ಸ್ಪೂಫಿಂಗ್‌?:

ಜಿಪಿಎಸ್‌ ವ್ಯವಸ್ಥೆ ಬಳಸುವ ವಿಮಾನಗಳಿಗೆ ತಪ್ಪು ಉಪಗ್ರಹ ಸಂಕೇತಗಳನ್ನು ರವಾನಿಸಿ ಗೊಂದಲ ಸೃಷ್ಟಿಸುವ, ಈ ಮೂಲಕ ಅವುಗಳ ದಿಕ್ಕು ತಪ್ಪಿಸುವ ಪ್ರಯತ್ನ ಇದಾಗಿದೆ. ಇದೊಂದು ಸೈಬರ್‌ ದಾಳಿಯಂದೇ ಪರಿಗಣಿಸಲಾಗಿದ್ದು, ಶತ್ರುರಾಷ್ಟ್ರಗಳು ಉದ್ದೇಶಪೂರ್ವಕವಾಗಿ ಈ ರೀತಿಯ ತಂತ್ರ ಸೃಷ್ಟಿಸಿ ಆತಂಕ ಮೂಡಿಸಿರುವ ಶಂಕೆ ವ್ಯಕ್ತವಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಸಂಸತ್‌ ಭವನಕ್ಕೆ ನಾಯಿ ಜತೆ ಬಂದ ರೇಣುಕಾ!
ಸ್ಮಾರ್ಟ್‌ಫೋನ್‌ಗಳಿಗೆ ‘ಸಂಚಾರ್‌ ಸಾಥಿ’ ಆ್ಯಪ್‌ ಕಡ್ಡಾಯ