ಫ್ರಾನ್ಸ್‌ನಲ್ಲಿ ಆಹಾರ ಭಯೋತ್ಪಾದನೆ!

Published : Oct 14, 2026, 06:12 AM IST
super market

ಸಾರಾಂಶ

ದುಷ್ಕರ್ಮಿಗಳ ತಂಡವೊಂದು ಮಂಗಳವಾರ ಫ್ರಾನ್ಸ್‌ನಲ್ಲಿ ಸೂಪರ್‌ಮಾರ್ಕೆಟ್‌ ಕಂಪನಿಗಳ ರೆಫ್ರಿಜರೇಷನ್‌ ವ್ಯವಸ್ಥೆ ಮೇಲೆ ಭಾರೀ ಪ್ರಮಾಣದ ಸೈಬರ್ ದಾಳಿ ನಡೆಸಿದೆ. ಪರಿಣಾಮ ಈ ಮಾರ್ಕೆಟ್‌ಗಳಲ್ಲಿನ ರೆಫ್ರಿಜರೇಟರ್‌ಗಳಲ್ಲಿನ ಉಷ್ಣಾಂಶ 50 ಡಿ.ಸೆ.ದಾಟಿದೆ.

ಪ್ಯಾರಿಸ್‌: ದುಷ್ಕರ್ಮಿಗಳ ತಂಡವೊಂದು ಮಂಗಳವಾರ ಫ್ರಾನ್ಸ್‌ನಲ್ಲಿ ಸೂಪರ್‌ಮಾರ್ಕೆಟ್‌ ಕಂಪನಿಗಳ ರೆಫ್ರಿಜರೇಷನ್‌ ವ್ಯವಸ್ಥೆ ಮೇಲೆ ಭಾರೀ ಪ್ರಮಾಣದ ಸೈಬರ್ ದಾಳಿ ನಡೆಸಿದೆ. ಪರಿಣಾಮ ಈ ಮಾರ್ಕೆಟ್‌ಗಳಲ್ಲಿನ ರೆಫ್ರಿಜರೇಟರ್‌ಗಳಲ್ಲಿನ ಉಷ್ಣಾಂಶ 50 ಡಿ.ಸೆ.ದಾಟಿದೆ. ಹೀಗಾಗಿ ಹಲವು ಕಡೆ ಬೆಂಕಿ ಕಾಣಿಸಿಕೊಂಡಿದ್ದರೆ, ಉಳಿದ ಬಹುತೇಕ ಕಡೆ ಹವಾನಿಯಂತ್ರಿತ ವ್ಯವಸ್ಥೆಯಲ್ಲಿ ಇಟ್ಟಿದ್ದ ಆಹಾರ ಪದಾರ್ಥ ಹಾಳಾಗಿವೆ.

700ಕ್ಕೂ ಹೆಚ್ಚು ಸೂಪರ್‌ಮಾರ್ಕೆಟ್‌ಗಳ ಬಾಗಿಲು ಹಾಕಿವೆ

ಪರಿಣಾಮ 700ಕ್ಕೂ ಹೆಚ್ಚು ಸೂಪರ್‌ಮಾರ್ಕೆಟ್‌ಗಳು ಮಂಗಳವಾರ ಏಕಾಏಕಿ ಬಾಗಿಲು ಹಾಕಿವೆ. ಅಲ್ಲದೆ ಅಮೆರಿಕ ಮತ್ತು ಯುರೋಪ್‌ಗಳಿಗೆ ಆಹಾರ ಪೂರೈಕೆ ಮಾಡುತ್ತಿದ್ದ ಹಲವು ವೆಬ್‌ಸೈಟ್‌ಗಳು ಕೂಡಾ ಅನಿವಾರ್ಯವಾಗಿ ಸೇವೆ ಸ್ಥಗಿತಗೊಳಿಸಬೇಕಾಗಿ ಬಂದಿದೆ.

ಏನಾಯ್ತು?:

ಹ್ಯಾಕರ್‌ಗಳ ಗುಂಪು ದೊಡ್ಡ ದೊಡ್ಡ ಸೂಪರ್‌ಮಾರ್ಕೆಟ್‌ಗಳಲ್ಲಿ ಇರುವ ಹವಾನಿಯಂತ್ರಿತ ವ್ಯವಸ್ಥೆ ಮೇಲೆ ಸೈಬರ್‌ ದಾಳಿ ನಡೆಸುವ ಮೂಲಕ ಅವುಗಳ ಉಷ್ಣಾಂಶ ಹೆಚ್ಛಾಗುವಂತೆ ಮಾಡಿದೆ. ಹೀಗಾಗಿ ಅವುಗಳ ಉಷ್ಣಾಂಶ 50 ಡಿ.ಸೆ. ದಾಟಿ ಹಲವು ಕಡೆ ಬೆಂಕಿ ಕಾಣಿಸಿಕೊಂಡಿದೆ. ಉಳಿದಂತೆ 700ಕ್ಕೂ ಹೆಚ್ಚು ಮಾರ್ಕೆಟ್‌ಗಳಲ್ಲಿ ಹವಾನಿಯಂತ್ರಿತ ವ್ವವಸ್ಥೆಯಲ್ಲಿ ಇಟ್ಟಿದ್ದ ಆಹಾರ ವಸ್ತುಗಳ ಅಧಿಕ ಉಷ್ಣಾಂಶದಿಂದ ಬಳಸಲಾಗದ ಸ್ಥಿತಿ ತಲುಪಿದೆ. ಹೀಗಾಗಿ ಸೂಪರ್‌ ಮಾರ್ಕೆಟ್‌ಗಳು ಬಂದ್‌ ಆಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ದಿಲ್ಲೀಲಿ ದಿಢೀರ್‌ ಪ್ರತಿಭಟನೆ - ಪ್ರತಿಭಟನಾಕಾರರ ಜೊತೆ ರಾಹುಲ್‌ ಚಾಯ್‌ ಪೇ ಚರ್ಚಾ
ಪ್ರಶ್ನೆಪತ್ರಿಕೆ ಲೀಕ್‌ ತಡೆಗೆ ಕ್ವಶ್ಚನ್‌ ಬ್ಯಾಂಕ್‌: ನಿಲೇಕಣಿ ಟೆಕ್‌ ಐಡಿಯಾ