ದುಬೈ ಏರ್ಪೋರ್ಟ್‌ಗೇ ಇರಾನ್‌ ಬಾಂಬ್‌

KannadaprabhaNewsNetwork |  
Published : Mar 08, 2026, 01:15 AM ISTUpdated : Mar 08, 2026, 06:01 AM IST
Dubai

ಸಾರಾಂಶ

ಕೊಲ್ಲಿ ದೇಶಗಳ ಮೇಲಿನ ದಾಳಿಗೆ ಕ್ಷಮೆ ಯಾಚಿಸುತ್ತೇವೆ. ಆ ದಾಳಿಯನ್ನು ಇನ್ನು ನಿಲ್ಲಿಸುತ್ತೇವೆ. ಆದರೆ ಇರಾನ್‌ ಮೇಲೆ ನಡೆಯುವ ದಾಳಿಯ ಮೂಲ ಆ ದೇಶಗಳಾಗಿರಬಾರದು ಎಂದು ಇರಾನ್‌ ಅಧ್ಯಕ್ಷ ಮಸೂದ್‌ ಪೆಜೆಶ್ಕಿಯಾನ್‌ ಹೇಳಿದ್ದಾರೆ.

ದುಬೈ: ತನ್ನ ಮೇಲಿನ ದಾಳಿಗೆ ಪ್ರತಿಯಾಗಿ ಅಮೆರಿಕದ ಮಿತ್ರರಾದ ಕೊಲ್ಲಿ ದೇಶಗಳ ಮೇಲಿನ ದಾಳಿ ತೀವ್ರಗೊಳಿಸಿರುವ ಇರಾನ್‌, ಶನಿವಾರ ವಿಶ್ವದ ಅತ್ಯಂತ ಸಂಚಾರ ದಟ್ಟಣೆಯ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ ನಡೆಸಿದೆ. ಅದೃಷ್ಟವಶಾತ್‌ ದಾಳಿಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. 

ನಿತ್ಯ 2000-2500 ವಿಮಾನ ಸಂಚರಿಸುವ ನಿಲ್ದಾಣ

ನಿತ್ಯ 2000-2500 ವಿಮಾನ ಸಂಚರಿಸುವ, ಕನಿಷ್ಠ 1 ಲಕ್ಷ ಜನರು ಪ್ರಯಾಣ ಕೈಗೊಳ್ಳುವ ಯುಎಇ ರಾಜಧಾನಿ ದುಬೈನ ವಿಮಾನ ನಿಲ್ದಾಣ ಗುರಿಯಾಗಿಸಿ, ಇರಾನ್‌ ಶನಿವಾರ ಬೆಳಗ್ಗೆ ದಾಳಿ ನಡೆಸಿತ್ತು. ವಿಮಾನಗಳ ಸಂಚಾರದ ಹೊತ್ತಿನಲ್ಲೇ ದಾಳಿ ನಡೆಯಿತಾದರೂ ಅದು ಯಾವುದೇ ವಿಮಾನಗಳಿಗಾಗಲೀ, ಜನರು ಇರುವ ಸ್ಥಳದ ಮೇಲಾಗಲೀ ಅಪ್ಪಳಿಸದ ಕಾರಣ ಭಾರೀ ಸಾವು ನೋವು ತಪ್ಪಿದೆ. ಆದರೆ ಡ್ರೋನ್‌ ದಾಳಿ ಬಳಿಕ ಸ್ಥಳದಲ್ಲಿ ಭಾರೀ ಬೆಂಕಿ ಎದ್ದಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದ್ದು ಮೈ ಜುಮ್ಮೆನಿಸುವಂತಿದೆ. 

ಫೆ.28ರಂದು ವಿಮಾನ ನಿಲ್ದಾಣಕ್ಕೆ ಸಣ್ಣ ಹಾನಿ

ಫೆ.28ರಂದು ವಿಮಾನ ನಿಲ್ದಾಣಕ್ಕೆ ಸಣ್ಣ ಹಾನಿಯಾಗಿ, ನಾಲ್ವರು ಸಿಬ್ಬಂದಿ ಗಾಯಗೊಂಡಿದ್ದರು. ಆದರೆ ಶನಿವಾರ ವಿಮಾನ ನಿಲ್ದಾಣವನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ. ಘಟನೆ ಬೆನ್ನಲ್ಲೇ ಎಲ್ಲ ವಿಮಾನಗಳ ಕಾರ್ಯಚರಣೆಯನ್ನು ಸ್ಥಗಿತಗೊಳಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಆ ಬಳಿಕ ಭಾಗಶಃ ಸಂಚಾರವನ್ನು ಪುನಾರಂಭ ಮಾಡಿದೆ. ವಿಮಾನಯಾನ ಸಂಸ್ಥೆ ಪ್ರಯಾಣವನ್ನು ಖಚಿತಪಡಿಸುವವರೆಗೂ ನಿಲ್ದಾಣಕ್ಕೆ ಬರಬೇಡಿ ಎಂದು ಪ್ರಯಾಣಿಕರಲ್ಲಿ ಮನವಿ ಮಾಡಿದೆ.--

ಅತ್ಯಂತ ಶಕ್ತಿ ಶಾಲಿ ಬಾಂಬರ್‌ ವಿಮಾನ

ನ್ಯೂಯಾರ್ಕ್‌: ಇರಾನ್‌ ಜತೆಗಿನ ಸಮರ ಮುಂದುವರಿದಿರುವ ಹೊತ್ತಿನಲ್ಲೇ ತನ್ನ ಬತ್ತಳಿಕೆಯಲ್ಲಿರುವ ಅತ್ಯಂತ ಶಕ್ತಿ ಶಾಲಿ ಬಾಂಬರ್‌ ವಿಮಾನವೊಂದನ್ನು ಅಮೆರಿಕ ಕರೆಸಿಕೊಂಡಿದೆ. ಬಿ- ಲ್ಯಾನ್ಸರ್‌ ವಿಮಾನಗಳು ಶರವೇಗದ ದಾಳಿಗೆ ಹೆಸರಾಗಿವೆ.

ಒಟ್ಟಿಗೇ 24 ಕ್ಷಿಪಣಿಗಳನ್ನು ಹಾರಿಸುವ ಸಾಮರ್ಥ್ಯ ಹೊಂದಿವೆ. ಹೀಗಾಗಿ ಇರಾನ್‌ ಮೇಲೆ ಮತ್ತಷ್ಟು ತೀಕ್ಷ್ಣ ದಾಳಿಗೆ ಇರಾನ್‌ ಸಜ್ಜಾಗಿರುವ ಲಕ್ಷಣ ಇದಾಗಿದೆ ಎಂದು ಹೇಳಲಾಗುತ್ತಿದೆ. ಗಲ್ಫ್‌ ಮೇಲೆ ದಾಳಿ ನಿಲ್ಲಿಸ್ತೇವೆ. ಆದರೆ,

1 ಷರತ್ತು: ಇರಾನ್‌ ವಿಮಾನ ಸಂಚಾರದ ವೇಳೆಯೇ ಭೀಕರ ದಾಳಿ । ಕೆಲ ಗಂಟೆ ಸಂಚಾರ ಸ್ಥಗಿತವಿಶ್ವದ ಅತ್ಯಂತ ಸಂಚಾರ ದಟ್ಟಣೆಯ ವಿಮಾನ ನಿಲ್ದಾಣದಲ್ಲಿ ಭಾರೀ ಆತಂಕ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಹಾರಾಟಕ್ಕೆ ಬ್ರೇಕ್ : ವಿಮಾನಯಾನ ಸಂಸ್ಥೆಗಳ ಎಚ್ಚರಿಕೆ
19300 ರು.ಗಾಗಿ ಬ್ಯಾಂಕ್‌ಗೆ ಅಕ್ಕನ ಅಸ್ಥಿಪಂಜರ ತಂದ!